ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಸಗುಲ್ಲ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು; ಮದುವೆ ಮನೆಯಲ್ಲಿ ಘೋರ ದುರಂತ

Tragedy at Wedding: ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ನಡೆದ ವಿವಾಹ ಸಂಭ್ರಮದ ಮಧ್ಯೆ 41 ವರ್ಷದ ಲಲಿತ್ ಸಿಂಗ್ ರಸಗುಲ್ಲ ತಿಂದು ಉಸಿರುಗಟ್ಟಿ ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಶುಕ್ರವಾರ (ಮಾರ್ಚ್‌ 13) ಲಲಿತ್ ಸಿಂಗ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ರಸಗುಲ್ಲಾ ತಿಂದು ಮೃತಪಟ್ಟ ಲಲಿತ್ ಸಿಂಗ್ (ಸಂಗ್ರಹ ಚಿತ್ರ)

ರಾಂಚಿ, ಮಾ. 16: ಶುಕ್ರವಾರ (ಮಾ. 13) ತಡರಾತ್ರಿ ಜಾರ್ಖಂಡ್‌ನ (Jharkhand) ಹಳ್ಳಿಯೊಂದರಲ್ಲಿ ನಡೆದ ಸಂತೋಷದ ವಿವಾಹ ಸಂಭ್ರಮವು ದುಃಖದ ದೃಶ್ಯವಾಗಿ ಮಾರ್ಪಟ್ಟಿತು. ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 41 ವರ್ಷದ ಲಲಿತ್ ಸಿಂಗ್ ರಸಗುಲ್ಲ ತಿಂದು ಉಸಿರುಗಟ್ಟಿ ಸಾವಿಗೀಡಾದ ಆಘಾತಕಾರಿ ಘಟನೆ ಇದಾಗಿದೆ.

ಶುಕ್ರವಾರ ಲಲಿತ್ ಸಿಂಗ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಗ್ರಾಮಸ್ಥರೊಂದಿಗೆ ವಿವಾಹದ ಆಚರಣೆಗಳಲ್ಲಿ ಪಾಲ್ಗೊಂಡಿದ್ದರು. ಮದುವೆಯ ಭೋಜನವನ್ನೂ ಆನಂದಿಸಿದ್ದರು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಅವರು ರಸಗುಲ್ಲ ತಿನ್ನುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಅವರ ಗಂಟಲಿನಲ್ಲಿ ಸಿಲುಕಿಕೊಂಡಿತು. ಇದರಿಂದ ಉಸಿರಾಟದ ತೊಂದರೆ ಉಂಟಾಯಿತು.

ರಸಗುಲ್ಲ ತಿನ್ನುತ್ತಿದ್ದಾಗ ಅವನ ಮುಖವು ಬಿಳಿಚಿಕೊಂಡಿತು. ಬಳಿಕ ಉಸಿರು ಸಿಕ್ಕಿಹಾಕಿಕೊಳ್ಳಲು ಆರಂಭಿಸಿತು ಸಂಬಂಧಿಕರೊಬ್ಬರು ಹೇಳಿದರು. ಕುಟುಂಬ ಮತ್ತು ಗ್ರಾಮಸ್ಥರು ಅವರ ಗಂಟಲಿನಿಂದ ರಸಗುಲ್ಲವನ್ನು ಹೊರಹಾಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಮದುವೆ ಮಂಟಪದಲ್ಲೇ ಮುತ್ತಿನ ಮಳೆಗೆರೆದ ವಧು-ವರರು: ಅವಸರವೇ ಅಪಘಾತಕ್ಕೆ ಕಾರಣ ಎಂದ ನೆಟ್ಟಿಗರು

ಲಲಿತ್ ಗಂಟಲಿನಿಂದ ರಸಗುಲ್ಲಾವನ್ನು ಹೊರ ತೆಗೆಯಲು ಎಷ್ಟೇ ಪ್ರಯತ್ನ ನಡೆಸಿದರೂ ವಿಫಲವಾಯಿತು ಎಂದು ಮೂಲಗಳು ತಿಳಿಸಿವೆ. ಅವರ ಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ಎಂಜಿಎಂ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ತಕ್ಷಣ ಅವರನ್ನು ಪರೀಕ್ಷಿಸಿದರು. ಆದರೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ರಸಗುಲ್ಲ ಅವನ ಉಸಿರಿನ ಮಾರ್ಗವನ್ನು ತಡೆದಿತ್ತು. ಇದರಿಂದ ದೇಹಕ್ಕೆ ಆಮ್ಲಜನಕ ತಲುಪದೆ, ಅಚಾನಕ್ ಆಗಿ ಮೃತಪಟ್ಟರು ಎಂದು ವೈದ್ಯರು ಘೋಷಿಸಿದರು. ಶನಿವಾರ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಮ್) ನಡೆಸಲಾಗಿದ್ದು, ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ರಸಗುಲ್ಲದಂತಹ ಮೃದು ತುಂಬು ಜೀವವನ್ನು ಬಲಿ ಪಡೆದಿದೆ ಎನ್ನುವುದನ್ನು ತಿಳಿದು ಗ್ರಾಮ‍ಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

ಶಾಲಾ ಸಮವಸ್ತ್ರದಲ್ಲಿ ಬ್ಯಾಗ್ ಧರಿಸಿಯೇ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿದ ಬಾಲಕ

ಆಸ್ತಿ ವಿವಾದ: ತಂದೆಯನ್ನೇ ಕೊಂದ ಪುತ್ರ

ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಗನೊಬ್ಬ ತನ್ನ ವೃದ್ಧ ತಂದೆಯನ್ನು ಇಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪಾಟ್ನಾ ಪೊಲೀಸರು ಆರು ಗಂಟೆಗಳಲ್ಲಿ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಪೊಲೀಸ್ ಸ್ನಿಫರ್ ನಾಯಿ ಸಿಂಬಾ ಪ್ರಕರಣವನ್ನು ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಘಟನಾ ಸ್ಥಳದಲ್ಲಿ ದೊರೆತ ಸುಳಿವುಗಳ ಆಧಾರದ ಮೇಲೆ, ಅದು ಕೊಲೆಗಾರನನ್ನು ಅವನ ಮನೆಗೆ ತೆರಳಿ ಪತ್ತೆಹಚ್ಚಿ ಕೃತ್ಯ ಬಯಲು ಮಾಡಿದೆ.

ಮಾರ್ಚ್ 14ರ ಬೆಳಗ್ಗೆ ಈ ಭಯಾನಕ ಘಟನೆ ನಡೆದಿದೆ. ಶರೀಫ್‌ಗಂಜ್ ನಿವಾಸಿ 80 ವರ್ಷದ ವಿಜೇಂದ್ರ ಸಿಂಗ್ ಎಂಬುವವರನ್ನು ಇಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.