ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ಕಾಂತಾರ ಚಾಪ್ಟರ್‌-1 ಸಕ್ಸಸ್‌ ಪಾರ್ಟಿ; ಅದ್ದೂರಿ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ?

Kantara Chapter 1 Success party: ಬೆಂಗಳೂರಿನ ಹೈ ಅಲ್ಟ್ರಾ ನಲ್ಲಿ ಶನಿವಾರ ಕಾಂತರ ಚಾಪ್ಟರ್ 1 ಚಿತ್ರದ ಗೆಲುವಿನ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ನಡೆಸಲಾಯಿತು. ಚಿತ್ರ ತಂಡದೊಂದಿಗೆ ನಟ ರಿಷಬ್ ಶೆಟ್ಟಿ, ವಿಜಯ್ ಕಿರಾಗಂದೂರ್, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಭಾರಿ ಗಾತ್ರದ ಕೇಕ್ ಕತ್ತರಿಸಿ ಸಂಭ್ರಮವನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಸಿನಿಮಾ ವಿತರಕರು, ಅಮೇಜಾನ್ ಪ್ರೈಮ್ ತಂಡದವರು ಭಾಗಿಯಾಗಿದ್ದರು.

ಬೆಂಗಳೂರಿನ ಹೈ ಅಲ್ಟ್ರಾನಲ್ಲಿ ಶನಿವಾರ ಕಾಂತರ ಚಾಪ್ಟರ್ 1 ಚಿತ್ರದ ಗೆಲುವಿನ ಸಂಭ್ರಮಾವನ್ನು ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.

ಬೆಂಗಳೂರು: ದೇಶಾದ್ಯಂತ ನವರಾತ್ರಿ ಹಬ್ಬ ಆಚರಣೆ ವೇಳೆ ತೆರೆ ಮೇಲೆ ಬಂದಿದ್ದರಿಷಬ್ ಶೆಟ್ಟಿ (Rishab Shetty) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ʼಕಾಂತಾರ ಚಾಪ್ಟರ್‌ 1' (Kantara Chapter 1) ದೀಪಾವಳಿ ಆಚರಣೆ ವೇಳೆ ಭರ್ಜರಿ ಯಶಸ್ಸು ಪಡೆದು ಮುನ್ನುಗ್ಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ(Kantara Chapter 1 box office collection) 832.42 ಕೋಟಿ ರೂ. ಗೂ ಹೆಚ್ಚಿನ ಆದಾಯ ಗಳಿಸಿ ದಾಖಲೆ ಬರೆದ ಚಿತ್ರದ ಯಶಸ್ಸನ್ನು ಚಿತ್ರ ತಂಡ ಭರ್ಜರಿಯಾಗಿ ಆಚರಿಸಿಕೊಂಡಿದೆ. ಬೆಂಗಳೂರಿನ ಹೈ ಅಲ್ಟ್ರಾ ನಲ್ಲಿ ಕಾಂತರ ಚಾಪ್ಟರ್ 1 ಚಿತ್ರದ ಗೆಲುವಿನ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ನಡೆಸಲಾಯಿತು.

ಕಾಂತರ ಚಾಪ್ಟರ್ 1 ಚಿತ್ರದ ಗೆಲುವಿನ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡ ಚಿತ್ರ ತಂಡದೊಂದಿಗೆ ನಟ ರಿಷಬ್ ಶೆಟ್ಟಿ, ವಿಜಯ್ ಕಿರಾಗಂದೂರ್, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಕಾಂತಾರ ಚಿತ್ರದ ಹೆಸರು ಬರೆದಿರುವ ಭಾರಿ ಗಾತ್ರದ ಕೇಕ್ ಕತ್ತರಿಸಿ ಆಚರಿಸಿಕೊಂಡಿದೆ.

ಇದನ್ನೂ ಓದಿ: Nancy Pelosi: ಅಮೆರಿಕ ರಾಜಕೀಯ ರಂಗದಲ್ಲಿ ಇತಿಹಾಸ ಬರೆದ ನ್ಯಾನ್ಸಿ ಪೆಲೋಸಿ ರಾಜಕೀಯ ನಿವೃತಿ ಘೋಷಣೆ

ಚಿತ್ರದ ಗೆಲುವಿನ ಸಂಭ್ರಮಾಚರಣೆಯಲ್ಲಿ ಸಿನಿಮಾ ವಿತರಕರು, ಆಮೇಜಾನ್ ಪ್ರೈಮ್ ತಂಡದವರು ಭಾಗಿಯಾಗಿದ್ದರು.

kanta1

ಕಾಂತಾರ ಚಾಪ್ಟರ್ 1 ಚಿತ್ರದ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಹೊಂಬಾಳೆ ಫಿಲ್ಮ್ಸ್, ಈ ಗೆಲುವು ಕೇವಲ ನಮ್ಮದಲ್ಲ, ಎಲ್ಲರದು. ಎಲ್ಲರ ಪ್ರೀತಿಗೂ ಚಿರಋಣಿ ಎಂದು ಹೇಳಿದೆ. ಇದೊಂದು ಐತಿಹಾಸಿಕ ಗೆಲುವು. ಚಿತ್ರ ತಂಡದ ಕಾರ್ಯವು ನಮಗೆ ಹೆಮ್ಮೆಯನ್ನುಂಟು ಮಾಡಿದೆ. ವಿಶ್ವದ ಪ್ರೀತಿ ಚಿತ್ರ ತಂಡಕ್ಕೆ ಸಿಕ್ಕಿದ್ದರಿಂದ ಚಿತ್ರ ಅಭೂತಪೂರ್ವ ಗೆಲುವು ದಾಖಲಿಸಲು ಕಾರಣ ಎಂದು ತಿಳಿಸಿದೆ.



ರಿಷಬ್‌ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಚಿತ್ರದ ಗೆಲುವಿನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಚಿತ್ರ ತಂಡಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಪ್ರಗತಿ ಶೆಟ್ಟಿ ಎಲ್ಲರ ಗಮನ ಸೆಳೆದಿದ್ದಾರೆ.

2022ರಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು. ಬಳಿಕ ಅಭಿಮಾನಿಗಳ ಒತ್ತಾಯದ ಮೇರೆಗೆ ವಿಶ್ವಾದ್ಯಂತ 7ಕ್ಕೂ ಹೆಚ್ಚು ಭಾಷೆಗಳಲ್ಲಿ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿತ್ತು. ಮೊದಲ ಸಿನಿಮಾದಂತೆ ಇದು ಕೂಡ ಜನರ ಮೆಚ್ಚುಗೆಯನ್ನು ಗಳಿಸಿದ್ದು, ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. 30ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಚಿತ್ರವು ತುಳುನಾಡಿನ ಜಾನಪದ ಕಥೆಯನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಈ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸಿದವರು ಕೂಡ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅನೇಕ ಸ್ಟಾರ್ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ ನಟ ರಿಷಬ್‌ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈಗ ಗುರುತಿಸಲಾಗುತ್ತಿದೆ.

kanta2

ಇದನ್ನೂ ಓದಿ: Pavitra Gowda: ಪವಿತ್ರಾ ಗೌಡಗೆ ಮತ್ತೆ ಶಾಕ್‌; ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಚಿತ್ರದ ಗೆಲುವಿನ ಬಳಿಕ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಾವನಾತ್ಮಕ ಪತ್ರವನ್ನು ಪೋಸ್ಟ್ ಮಾಡಿದೆ.ದೈವಾರಾಧನೆ ಕರ್ನಾಟಕದ ಕರಾವಳಿ ಪ್ರದೇಶವಾದ ತುಳುನಾಡಿನಲ್ಲಿ ನಂಬಿಕೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಆಳವಾದ ಸಂಕೇತವಾಗಿದೆ. ಕಾಂತಾರ ಮತ್ತು ಕಾಂತಾರ ಅಧ್ಯಾಯ-1 ದೈವಗಳ ಮೇಲಿನ ಭಕ್ತಿಯನ್ನು ಗೌರವಯುತವಾಗಿ ಚಿತ್ರಿಸಲು ಮತ್ತು ವೈಭವವನ್ನು ಆಚರಿಸಲು ರಚಿಸಲಾಗಿದೆ. ಈ ಚಿತ್ರಗಳಲ್ಲಿ ಆಳವಾದ ಗೌರವ ಮತ್ತು ಅಚಲ ಭಕ್ತಿಯನ್ನು ಗೌರವಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಾಕಷ್ಟು ನಾವು ಶ್ರಮಿಸಿದ್ದೇವೆ. ತುಳು ಮಣ್ಣಿನ ಮಹತ್ವ ಮತ್ತು ಪರಂಪರೆಯನ್ನು ಜಗತ್ತಿಗೆ ಹರಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಭಾವಿಸುತ್ತೇವೆ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author