ಚೆನ್ನೈ: ಕಳೆದ ವಾರ ಕರೂರಿ(Karur stampede)ನಲ್ಲಿ ನಡೆದ ಟಿವಿಕೆ ಪಕ್ಷದ(TVK Party) ಬಹಿರಂಗ ಪ್ರಚಾರದಲ್ಲಿ ಕಾಲ್ತುಳಿತಕ್ಕೊಳಗಾಗಿದ್ದ(stampede) 41 ಮಂದಿ ಸಾವಿಗೀಡಾಗಿದ್ದಾರೆ. ಇದು ತಮಿಳುನಾಡಿನ(Tamil Nadu) ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ.
ಹೌದು ನಟ ಮತ್ತು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ವಿಜಯ್ ಅವರ ರ‍್ಯಾಲಿಯಲ್ಲಿ ಕಳೆದ ಶನಿವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ ಎಂಟು ಮಕ್ಕಳು, 16 ಮಹಿಳೆಯರು ಸೇರಿದಂತೆ ಮೂವತ್ತಾರು ಜನರು ಸಾವನ್ನಪ್ಪಿದ್ದಾರೆ. ಇದನ್ನೇ ಗಾಳವಾಗಿ ಮಾಡಿಕೊಂಡ ರಾಜಕೀಯ ಪಕ್ಷಗಳು ದುರಂತ ಸಂಬಂಧ ಪರ ವಿರೋಧ ಚರ್ಚೆ ನಡೆಸುತ್ತಿದ್ದು, ಹೆಚ್ಚು ಜನರನ್ನು ಸೇರಿಸಿದ್ದು ತಪ್ಪು ಎಂದು ಆರೋಪ ಮಾಡುತ್ತಿದ್ದರೆ, ಮೊತ್ತೊಂದು ಬಣ ಡಿಎಂಕೆ ನೇತೃತ್ವದ ಸರ್ಕಾರ ಸರಿಯಾದ ಪೊಲೀಸ್ ಭದ್ರತೆ ನೀಡಲು ವಿಫಲವಾಗಿದೆ ಎಂದು ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಇದರ ಈ ದುರಂತದ ಬೆನ್ನಲ್ಲೇ ಸರ್ಕಾರ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದ್ದು, ಹೊಸ ಸ್ಟ್ಯಾಂಡರ್ಡ್ ಓಪರೇಟಿಂಗ್ ಪ್ರೊಸೀಜರ್ಸ್ (SOP) ರೂಪುಗೊಳ್ಳುವವರೆಗೂ ಯಾವುದೇ ರಾಜಕೀಯ ಪಕ್ಷಕ್ಕೆ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಪೊಲೀಸ್ ಅನುಮತಿ ನೀಡುವುದಿಲ್ಲ ಎಂದು ಮದುರೈ ಮದ್ರಾಸ್ ಹೈಕೋರ್ಟ್ ಬೆಂಚಿಗೆ ತಿಳಿಸಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಸೂಕ್ತವಾದ ಮಾರ್ಗಸೂಚಿಗಳನ್ನು ಪ್ ರೂಪಿಸುವಂತೆ ನೀಡಿದಈ ವಿಷಯಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಕಟುವಾಗಿ ಟೀಕಿಸಿದ ನಂತರ ಎಚ್ಚೆತ್ತ ರಾಜ್ಯ ಸರ್ಕಾರ ನ್ಯಾಯಾಲಯದ ನಿರ್ದೇಶನದ ಮೇರೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL)ಗಳು ದಾಖಲಾಗಿದ್ದು, ಇಂತಹ ಬೃಹತ್ ಸಮಾವೇಶ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿಸುವಾಗ SOP ಅಗತ್ಯವಿದ್ದು, ನಿರ್ದಿಷ್ಟ ಕ್ರಮ ಹಾಗೂ ನಿಯಮಗಳನ್ನು ಪಾಲಿಸಬೇಕಾದ ಅಗತ್ಯವಿರುತ್ತದೆ ಎಂಬ ನಿಲುವು ವ್ಯಕ್ತವಾಗಿತ್ತು. ಈ ಹಿನ್ನಲೆ ಪಿಐಎಲ್ ಗಳ ಬೇಡಿಕೆಯನ್ನು ಪುರಸ್ಕಾರಿಸಿದ್ದು, SOPಗಳು ಜಾರಿ ಆಗುವವರೆಗೆ ಯಾವುದೇ ರಾಜಕೀಯ ಸಭೆಗಳಿಗೆ ಅನುಮತಿ ನೀಡಲಾಗುವುದಿಲ್ಲ ಮದ್ರಾಸ್ ಹೈ ಕೋರ್ಟ್ ನ ಮದುರೈ ಬೆಂಚಿನ ಎಎಜಿ (AAG) ತಿಳಿಸಿದೆ.
ಈ ಸುದ್ದಿಯನ್ನು ಓದಿ: Physical Abusing: ಕಾಮತೃಷೆಗೆ ಮಗನನ್ನೇ ಬಳಸಿಕೊಂಡ ಪಾಪಿ ತಾಯಿ- ಲೈಂಗಿಕ ದೌರ್ಜನ್ಯದ ವೇಳೆ ಪತಿ ಕೈಗೆ ಸಿಕ್ಕಿ ಬಿದ್ಳು!
ಇದೇ ವೇಳೆ ಚೆನ್ನೈ ಮೂಲದ ವಕೀಲ ಹಾಗೂ ದೇಶೀಯ ಮಾಕ್ಕಲ್ ಶಕ್ತಿ ಪಕ್ಷದ ಅಧ್ಯಕ್ಷರು ಆಗಿರುವ ಎಂಎಲ್ ರವಿ ಅವರು ಕಾರೂರು ಘಟನೆ ಕುರಿತು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಆದರೆ ಅವರ ವಿನಂತಿಯನ್ನು ನ್ಯಾಯಮೂರ್ತಿ ಧಂಡಪಣಿ ನಿರಾಕಾರಿಸಿದ್ದು,''ಪಿಐಎಲ್ ಸಲ್ಲಿಸಿದ್ದವರು ಯಾರು ಸಂತ್ರಸ್ತರಲ್ಲ. ನ್ಯಾಯಾಲಯವನ್ನು ರಾಜಕೀಯ ವೇದಿಕೆಯಾಗಿ ಪರಿವರ್ತಿಸಲು ಆಗುವುದಿಲ್ಲ” ಎಂದು ಹೇಳಿದ್ದಾರೆ. ಈ ಮೂಲಕ ಸಿಬಿಐ ತನಿಖೆಗೆ ಆಗ್ರಹಿಸಿದ ರವಿ ಹಾಗೂ ಬಿಜೆಪಿ ವಕೀಲ ಜಿಎಸ್ ಮಣಿಯ ಪಿಐಎಲ್ ಅರ್ಜಿಗಳನ್ನು ತಿರಸ್ಕರಿಸಿದ್ದು, ಈ ಘಟನೆ ಪೊಲೀಸ್ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಇನ್ನು ನ್ಯಾಯಾಲಯವು ರಾಷ್ಟ್ರೀಯ ಹಾಗೂ ರಾಜ್ಯ ಹೈವೇಗಳ ಹತ್ತಿರ ಯಾವುದೇ ಸಾರ್ವಜನಿಕ ಸಭೆಗಳನ್ನು ಆಯೋಜಿಸದಂತೆ ಆದೇಶಿಸಿದ್ದು, ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಸ್ಥಳದಲ್ಲಿ ಕುಡಿಯುವ ನೀರು, ವೈದ್ಯಕೀಯ ಹಾಗೂ ಆಂಬುಲೆನ್ಸ್ ಸೇವೆಗಳು, ಶೌಚಾಲಯ ಮತ್ತು ನಿರ್ಗಮನ ಮಾರ್ಗಗಳಂತಹ ಮೂಲಸೌಕರ್ಯಗಳನ್ನು ಒದಗಿಸುವುದು ಕಡ್ಡಾಯವೆಂದು ಹೇಳಿದೆ.