ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮಲೀಲಾ ಮೈದಾನದಲ್ಲಿ ಜನಸಾಗರದ ಫೋಟೋ ಸೃಷ್ಠಿಸಲು AI ಬಳಕೆ ಮಾಡಿತಾ ಕಾಂಗ್ರೆಸ್‌? ಬಿಜೆಪಿ ನಾಯಕರಿಂದ ಆರೋಪ

ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ಬೃಹತ್‌ ಸಮಾವೇಶದಲ್ಲಿ ಭಾರಿ ಪ್ರಮಾಣದ ಜನಸ್ತೋಮ ಸೇರಿತ್ತು ಎಂದು ತೋರಿಸಲು ಕಾಂಗ್ರೆಸ್ ಪಕ್ಷವು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ಚಿತ್ರವನ್ನು ಹಂಚಿಕೊಂಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಪಕ್ಷಗಳ ‘ಇಂಡಿಯಾ’ (INDIA) ಒಕ್ಕೂಟದ ಬೃಹತ್‌ ಸಮಾವೇಶದಲ್ಲಿ ಭಾರಿ ಪ್ರಮಾಣದ ಜನಸ್ತೋಮ ಸೇರಿತ್ತು ಎಂದು ತೋರಿಸಲು ಕಾಂಗ್ರೆಸ್ ಪಕ್ಷವು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ಚಿತ್ರವನ್ನು ಹಂಚಿಕೊಂಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiran Rijuju) ಆರೋಪಿಸಿದ್ದಾರೆ. ತಮ್ಮ ಎಕ್ಸ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದ ಫೋಟೋವನ್ನು ಪೋಸ್ಟ್ ಮಾಡಿರುವ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್‌ನ ಸುಳ್ಳು ಕಥೆ ಹೆಣೆಯುವ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ರಾಮಲೀಲಾ ಮೈದಾನ ತುಂಬಿರುವುದಾಗಿ ತೋರಿಸಲು ಕಾಂಗ್ರೆಸ್ ಪಕ್ಷವು ಕನಿಷ್ಠ ಪಕ್ಷ ಎಐ ಚಿತ್ರವನ್ನಾದರೂ ಸರಿಯಾಗಿ ಸಿದ್ಧಪಡಿಸಬೇಕಿತ್ತು. ನಕಲಿ ಎಐ ಚಿತ್ರವನ್ನು ಸರಿಯಾಗಿ ಮಾಡಲು ಬಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ತೆಲಂಗಾಣದ ಕಾಂಗ್ರೆಸ್ ಸಂಸದ ವಂಶಿ ಗದ್ದಮ್ ಹಾಗೂ ಸಿಡಬ್ಲ್ಯೂಸಿ ಸದಸ್ಯ ಜಗದೀಶ್ ಠಾಕೋರ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಈ ವಿವಾದಿತ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಆ ಚಿತ್ರದಲ್ಲಿದ್ದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಎಐ ರೂಪಗಳು ಹಾಗೂ ಸಮಾವೇಶದ ಮುಖ್ಯ ವೇದಿಕೆಯ ವಿನ್ಯಾಸವು ಅಸಲಿ ವೇದಿಕೆಗಿಂತ ಭಿನ್ನವಾಗಿ ಕಂಡುಬಂದಿದ್ದನ್ನು ಜಾಲತಾಣ ಬಳಕೆದಾರರು ಗುರುತಿಸಿದ್ದರು.

ವಿಡಿಯೋ ನೋಡಿ



ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಸಂಬಿತ್ ಪಾತ್ರ, ಸಮಾವೇಶಕ್ಕೆ 10 ಲಕ್ಷ ಜನ ಸೇರುತ್ತಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಆದರೆ ಭಾನುವಾರ ಮಧ್ಯಾಹ್ನ ಸಮಾವೇಶದ ಪ್ರಮುಖ ಅವಧಿಯಲ್ಲೇ ಮೈದಾನದಲ್ಲಿದ್ದ ಒಟ್ಟು 28,000 ಕುರ್ಚಿಗಳ ಪೈಕಿ 5,000 ದಿಂದ 7,000 ಕುರ್ಚಿಗಳು ಖಾಲಿ ಬಿದ್ದಿದ್ದವು. ಮೈದಾನದ ಶೇ. 40 ರಷ್ಟು ಭಾಗ ಸಂಪೂರ್ಣವಾಗಿ ಖಾಲಿಯಿತ್ತು ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ರ‍್ಯಾಲಿಯನ್ನು 'ಫ್ಲಾಪ್ ಶೋ' ಎಂದು ಕರೆದಿದ್ದಾರೆ.

ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕಚ್ಚಿಕೊಂಡು ರಸ್ತೆಯಲ್ಲಿ ಓಡಿದ ಬೀದಿ ನಾಯಿ! ಎದೆ ಝಲ್ಲೆನಿಸುವ ವಿಡಿಯೊ ವೈರಲ್‌

ಕೇಂದ್ರ ಸಚಿವರ ಎಐ ಆರೋಪಕ್ಕೆ ಕಾಂಗ್ರೆಸ್ ಅಧಿಕೃತವಾಗಿ ನೇರ ಪ್ರತಿಕ್ರಿಯೆ ನೀಡಿಲ್ಲವಾದರೂ, ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು ಎಂಬುದಕ್ಕೆ ಪುಷ್ಟಿ ನೀಡಲು ಮೈದಾನದ ನೈಜ ಡ್ರೋನ್ ದೃಶ್ಯಾವಳಿಗಳು ಹಾಗೂ ಇತರೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿಗೆ ಪ್ರತಿಪಕ್ಷಗಳು ತಿರುಗೇಟು ನೀಡಿವೆ.

Vishakha Bhat Heggar

View all posts by this author