ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡೆಹ್ರಾಡೂನ್‌ನಲ್ಲಿ ಅಡಗಿರುವ ಆ ನಿಗೂಢ ಮಹಿಳೆ ಯಾರು?': ರಾಹುಲ್‌ ಗಾಂಧಿಯಿಂದ ಹೊಸ ಬಾಂಬ್‌

ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಎಸ್‌ಐಆರ್‌ ಪ್ರಕ್ರಿಯೆ ಹಾಗೂ ಮತ ಚೋರಿ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡುವಾಗ ರಾಹುಲ್ ಗಾಂಧಿ ನೀಡಿರುವ ʼʼಡೆಹ್ರಾಡೂನ್‌ನಲ್ಲಿ ಅಡಗಿರುವ ಮಹಿಳೆʼʼ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ರಾಹುಲ್ ಗಾಂಧಿ ಗುರಿಯಾಗಿಸುತ್ತಿರುವ ಆ ವ್ಯಕ್ತಿ ಯಾರು? ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಆ ಮಹಿಳೆ ಕೈವಾಡ ಇದೆಯೇ ಎಂಬ ಕೂತುಹಲ ಮೂಡಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (Special Intensive Revision - SIR) ವಿವಾದವು ದೇಶ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಠಿಸಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲೇ ಅವರು, ʼʼಪ್ರಸ್ತುತ ಡೆಹ್ರಾಡೂನ್‌ನಲ್ಲಿ ಅಡಗಿರುವ ಒಬ್ಬ ಮಹಿಳೆʼʼ ಹಾಗೂ ಎಲ್ಲರನ್ನೂ ಒಂದು ದಿನ ಕಾನೂನಿನ ಕಟಕಟೆಗೆ ತರಲಾಗುವುದು ಎಂದು ನೀಡಿರುವ ಹೇಳಿಕೆಯು ಈಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಹಿಳೆಯ ಹೆಸರನ್ನು ನೇರವಾಗಿ ಬಹಿರಂಗಪಡಿಸಲಿಲ್ಲ. ಆದರೆ ಅವರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸದ್ಯ ಆ ಮಹಿಳೆಯ ಕುರಿತು ಹಲವು ಉಹಾಪೋಹಗಳು ಎದಿದ್ದು, ಚುನಾವಣಾ ಆಯೋಗದ ಮಹಾನಿರ್ದೇಶಕಿ ಸೀಮಾ ಖನ್ನಾ ಅವರನ್ನು ರಾಹುಲ್‌ ಗಾಂಧಿ ಉಲ್ಲೇಖಿಸಿರಬುದು ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿಯವರ ಈ ಹೇಳಿಕೆಯ ಬೆನ್ನಲ್ಲೇ, ಕಾಂಗ್ರೆಸ್‌ನ ಹಲವು ನಾಯಕರು, ಹಾಗೂ ಎಐಸಿಸಿ ಮಾಧ್ಯಮ ಸಂಯೋಜಕರು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯಾದ ಸೀಮಾ ಖನ್ನಾ ಅವರ ಕಡೆಗೆ ಬೊಟ್ಟು ಮಾಡಲಾರಂಭಿಸಿದ್ದಾರೆ. ಚುನಾವಣಾ ದತ್ತಾಂಶಗಳು, ಇಸಿನೆಟ್ ವ್ಯವಸ್ಥೆಗಳು ಮತ್ತು ಮತದಾರರ ಪಟ್ಟಿ ನಿಯಂತ್ರಣ ಕಾರ್ಯವಿಧಾನಗಳಲ್ಲಿ ಸೀಮಾ ಖನ್ನಾ ಅವರ ಹೆಸರು ಈ ಹಿಂದೆ ಕೇಳಿಬಂದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ರಾಜಕೀಯ ವಿಶ್ಲೇಷಕ ಮತ್ತು ಕಾಂಗ್ರೆಸ್‌ ಕಾರ್ಯಕರ್ತ ವಿಜಯ್‌ ತೊಟ್ಟಾಥಿಲ್‌ ಅವರು ರಾಹುಲ್‌ ಉಲ್ಲೇಖಿಸಿರುವ ಮಹಿಳೆ ಬಹುಶಃ ಸೀಮಾ ಖನ್ನಾಆಗಿರಬಹುದು ಎಂದು ಹೇಳಿದ್ದಾರೆ. ಇನ್ನೂ ಎಐಸಿಸಿ ಮಾಧ್ಯಮ ಸಂಯೋಜಕಿ ಹರ್ಮೀತ್‌ ಕೌರ್‌ ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದು, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ʼʼಸೀಮಾ ಖನ್ನಾ ಎಲ್ಲಿದ್ದಾಳೆ? ಅವಳು ಡೆಹ್ರಾಡೂನ್‌ನಲ್ಲಿ ಅಡಗಿದ್ದಾಳೆಯೇ? ಮತ್ತು ಅವಳನ್ನು ರಕ್ಷಿಸುತ್ತಿರುವವರು ಯಾರು? ನೆನಪಿಡಿ ಇಸಿಐ ಡೇಟಾ ಇನ್ನೂ ಅವರ ನಿಯಂತ್ರಣದಲ್ಲಿದೆ. ಅವಳನ್ನು ಯಾರು ರಕ್ಷಿಸುತ್ತಿದ್ದಾರೆ, ಮತ್ತು ಅವರು ಏನು ಮಾರೆಮಾಡಲು ಯತ್ನಿಸುತ್ತಿದ್ದಾರೆ? ಎಂದು ರಾಹುಲ್‌ ಹೇಳಿಕೆ ನೀಡಿರುವ ವಿಡಿಯೋವನ್ನು ಹಂಚಿಕೊಂಡು ಕೌರ್‌ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ವಲಯಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸೀಮಾ ಖನ್ನಾ ಅವರೇ ಆ ಮಹಿಳೆ ಇರಬಹುದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು, ಅವರು ಸದ್ಯ ಡೆಹ್ರಾಡೂನ್‌ನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮೂಲಗಳಿಂದ ಸ್ಪಷ್ಟನೆ ದೊರೆತಿಲ್ಲ. ಚುನಾವಣಾ ಆಯೋಗ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದಲೂ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಸೀಮಾ ಖನ್ನಾ ಯಾರು?

ಡಾ. ಸೀಮಾ ಖನ್ನಾ ಅವರು ಭಾರತೀಯ ಚುನಾವಣಾ ಆಯೋಗದಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣಾ ದತ್ತಾಂಶ ಹಾಗೂ ತಾಂತ್ರಿಕ ವ್ಯವಸ್ಥೆಗಳ ಉಸ್ತುವಾರಿ ಹೊಣೆ ಹೊತ್ತಿರುವ ಇವರನ್ನು, ರಾಹುಲ್ ಗಾಂಧಿ ಅವರು ಎಸ್‌ಐಆರ್ ವಿವಾದದ ಸಂದರ್ಭದಲ್ಲಿ ''ಡೆಹ್ರಾಡೂನ್‌ನಲ್ಲಿ ಅಡಗಿರುವ ಮಹಿಳೆ" ಎಂದು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ ಎಂದು ಕಾಂಗ್ರೆಸ್ ವಲಯಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲಾಗುತ್ತಿದೆಯಾದರೂ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ; ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಇದ್ದ ಬಸ್‌ ಟೈರ್‌ ಪಂಕ್ಚರ್‌

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಮತದಾರರ ದತ್ತಾಂಶ ನಿರ್ವಹಣೆ ಹಾಗೂ ಸಾಫ್ಟ್‌ವೇರ್ ವ್ಯವಸ್ಥೆಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ. ಈ ರಾಜಕೀಯ ತಿಕ್ಕಾಟದ ನಡುವೆ ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆಯು ವಿವಾದಕ್ಕೆ ಹೊಸ ಆಯಾಮ ನೀಡಿದೆ.

Vishakha Bhat Heggar

View all posts by this author