ಶ್ರೀನಗರ, ಆ. 10: ಲಷ್ಕರ್-ಎ-ತೊಯ್ಬಾ (Lashkar-e-Taiba) ಭಯೋತ್ಪದಕ ಸಂಘಟನೆಯೊಂದಿಗೆ ಲಿಂಕ್ ಹೊಂದಿರುವ ಯುನೈಟೆಡ್ ಲಿಬರೇಷನ್ ಕೌನ್ಸಿಲ್ (United Liberation Council) ಜಮ್ಮು ಮತ್ತು ಕಾಶ್ಮೀರದ ಪಂಡಿತ್ ಅಧಿಕಾರಿಗಳಿಗೆ ಕುಟುಂಬದ ವೈಯಕ್ತಿಕ ವಿವರಗಳು ತಮ್ಮ ಬಳಿ ಇವೆ ಎಂದು ಬೆದರಿಕೆ ಹಾಕಿದೆ. ಈ ಎಚ್ಚರಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಪ್ರದೇಶದಲ್ಲಿ ತಕ್ಷಣವೇ ಭದ್ರತೆಯನ್ನು ಪರೀಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪಂಡಿತ್ ಅಧಿಕಾರಿಗಳಿಗೆ ಯುನೈಟೆಡ್ ಲಿಬರೆಷನ್ ಕೌನ್ಸಿಲ್ ಉಗ್ರ ಸಂಘಟನೆಯು ಬೆದರಿಕೆ ಪತ್ರ ಕಳುಹಿಸಿದೆ. ಭಾರತೀಯ ಗುಪ್ತಚರ ಸಂಘಟನೆಗಳ ಪ್ರಕಾರ ಇದು ಲಷ್ಕರ್-ಎ-ತೊಯ್ಬಾದ ಮತ್ತೊಂದು ಸಂಘಟನೆ. ಅಧಿಕಾರಿಗಳ ಕುಟುಂಬದ ಮಾಹಿತಿ, ಕೆಲಸದ ಸ್ಥಳ ಹಾಗೂ ವಾಸಸ್ಥಳದ ಸಂಪೂರ್ಣ ಮಾಹಿತಿ ತಮ್ಮಲ್ಲಿದೆ ಎಂದು ಹೇಳಿಕೊಂಡಿರುವ ಉಗ್ರರು, ಪಂಡಿತರು ಜಮ್ಮುವಿಗೆ ಮರಳಿದರೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಪತ್ರದಲ್ಲಿ ಉಗ್ರ ಬೆಂಬಲಿಗರ ಆಸ್ತಿ ಮುಟ್ಟುಗೋಲು, ಕುಟುಂಬಸ್ಥರಿಗೆ ಕಿರುಕುಳ ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಜಮ್ಮು ಕಾಶ್ಮೀರದ ಉಪರಾಜ್ಯಪಾಲರಿಗೆ, ಪೋಲಿಸ್ ಮಹಾನಿರ್ದೇಶಕರಿಗೆ ಮತ್ತು ನವದೆಹಲಿಯ ಉನ್ನತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಈ ಪತ್ರದ ಸತ್ಯಾಸತ್ಯತೆಯನ್ನು ಶ್ರೀನಗರದ ಹಿರಿಯ ಪತ್ರಕರ್ತರೊಬ್ಬರು ಇಂಡಿಯಾ ಟುಡೆ ಡಿಜಿಟಲ್‌ಗೆ ದೃಡಪಡಿಸಿದ್ದು, ಇಂತಹ ಬೆದರಿಕೆ ಪತ್ರಗಳು ಜಮ್ಮುವಿನಲ್ಲಿ ತೀವ್ರ ಭೀತಿ ಮತ್ತು ಆತಂಕವನ್ನು ಹೆಚ್ಚಿಸುತ್ತವೆ ಎಂದು ಹೇಳಿದ್ದಾರೆ.
ಪನೂನ್ ಕಾಶ್ಮೀರದ ಮಾಧ್ಯಮ ಕಾರ್ಯದರ್ಶಿ ಎಂ.ಕೆ. ದಾರ ಈ ಬೆದರಿಕೆಯನ್ನ ತಿವ್ರವಾಗಿ ಖಂಡಿಸಿದ್ದು, ʼ‘ಕಾಶ್ಮೀರಿ ಹಿಂದೂಗಳು ಇನ್ನು ಎಷ್ಟು ಕಾಲ ಹೆದರಿ ಬದುಕಬೇಕು?’ʼ ಎಂದು ಪ್ರಶ್ನಿಸಿದ್ದಾರೆ. ''1990ರಲ್ಲಿ ಕಾಶ್ಮೀರದಲ್ಲಿ ಉಂಟಾದ ಉಗ್ರ ಹತ್ಯೆಗಳಿಂದಾಗಿ ಕಾಶ್ಮೀರಿ ಪಂಡಿತರು ಕಣಿವೆಯನ್ನ ತ್ಯಜಿಸಿ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು’' ಎಂದು ಹೇಳಿದ್ದಾರೆ.
ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕನ ಬಂಧನ
ಸ್ಥಳೀಯ ಮಸೀದಿಗಳ ಮೂಲಕ ಕಾಶ್ಮೀರ ಪಂಡಿತರಿಗೆ ಬೆದರಿಕೆ ಹಾಕಿದ್ದ ಉಗ್ರರು ಇಸ್ಲಾಂಗೆ ಮತಾಂತರಗೊಳ್ಳಲು, ಕಾಶ್ಮೀರಿ ಕಣಿವೆಯಿಂದ ಹೊರ ನಡೆಯುವಂತೆ, ಇಲ್ಲ ಸಾವನ್ನು ಎದುರಿಸಿ ಎಂದು ಬೆದರಿಕೆ ಹಾಕಿದ್ದರು. ಇದು ಕಾಶ್ಮೀರ ಪಂಡಿತರ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿತ್ತು. ತಮ್ಮ ಮನೆಯನ್ನು ತೊರೆದ ಸಾಕಷ್ಟು ಪಂಡಿತರು ದೇಶದ ವಿವಿಧ ಭಾಗಗಳಿಗೆ ವಲಸೆ ಹೋದರು, ಅವರಲ್ಲಿನ ಹೆಚ್ಚಿನ ಜನರು ಜಮ್ಮುವಿನಲ್ಲಿ ಆಶ್ರಯ ಪಡೆದಿದ್ದಾರೆ.
ಎಲ್‌ಇಟಿ ಬೆಂಬಲಿತ ಉಗ್ರ ಸಂಘಟನೆಯಿಂದ ಬೆದರಿಕೆ ಪತ್ರ
ಎಲ್‌ಇಟಿ ಬೆಂಬಲಿತ ಯುನೈಟೆಡ್ ಲಿಬರೆಷನ್ ಕೌನ್ಸಿಲ್ ಉಗ್ರ ಸಂಘಟನೆಯು ಕಂದಾಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳನ್ನ ಗುರಿಯಾಗಿಸಿಕೊಂಡಿದೆ. ಈ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಡಿತ್ ಅಧಿಕಾರಿಗಳಿಗೆ ಪ್ರತೀಕಾರದ ಬೆದರಿಕೆ ಹಾಕಿದೆ.
ಯುಎಲ್‌ಸಿ ಉಗ್ರ ಸಂಘಟನೆಯು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಆರು ಸರ್ಕಾರಿ ನೌಕರರ ಹೆಸರನ್ನು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಿದೆ. ಆದರೆ ನೌಕರರ ಯಾವುದೇ ವಿವರಗಳನ್ನ ಇಂಡಿಯಾ ಟುಡೆ ಡಿಜಿಟಲ್ ಬಹಿರಂಗಪಡಿಸಿಲ್ಲ.
ಇಷ್ಟೇ ಅಲ್ಲದೆ ಬೆದರಿಕೆ ಪತ್ರದಲ್ಲಿ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ಪೊಲೀಸ್ ಪಡೆಯಲ್ಲಿ ಹೆಚ್ಚಾಗಿ ಸ್ಥಳೀಯ ನಿವಾಸಿಗಳು ಇರುವುದರಿಂದ ಸುಲಭವಾಗಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಪತ್ರಕ್ಕೆ ಉಗ್ರ ಸಂಘಟನೆಯ ಮಾಧ್ಯಮ ಸಂಯೋಜಕ ‘ಅಹಮದ್ ಬಿಲಾಲ್’ ಎಂಬಾತ ಸಹಿ ಮಾಡಿದ್ದು ತನ್ನನ್ನು ‘ಸೋಲ್ಜರ್ ಆಫ್ ರೆಸಿಸ್ಟೆನ್ಸ್’ ಎಂದು ಕರೆದುಕೊಂಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನೆದರ್‌ಲ್ಯಾಂಡ್ಸನ್ ಯುರೋಪಿಯನ್ ಪೌಂಡೆಷನ್ ಫಾರ್ ಸೌತ್ ಎಷ್ಯನ್ ಸ್ಟಡಿಸ್ ಸಂಸ್ಥೆ ನಿರ್ದೆಶಕ ಜುನೈದ್ ಕುರೇಷಿ ಸೇರಿ ಕಾಶ್ಮೀರಿ ಮುಸ್ಲಿಮರು, ಬೆದರಿಕೆ ಪತ್ರವನ್ನು ತೀವ್ರವಾಗಿ ಖಂಡಿಸಿದ್ದಾರೆ. ʼʼಈ ಹಿಂದೆ ಕಾಶ್ಮೀರಿ ಪಂಡಿತರನ್ನ ರಕ್ಷಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಕಾಶ್ಮೀರಿ ಮುಸ್ಲಿಮರು ಅವರ ಬೆಂಬಲಿಕ್ಕೆ ನಿಂತಿದ್ದಾರೆ. ಇಂತಹ ದಾಳಿಗಳು ಮತ್ತೆ ನಡೆಯಲು ಬಿಡುವುದಿಲ್ಲʼʼ ಎಂದು ಜುನೈದ್ ಕುರೇಷಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾದ ಫೈನಾನ್ಸರ್ ಖಾರಿ ಅಬ್ದು ರೆಹಮಾನ್‌ನ ಹತ್ಯೆ
ಪನೂನ್ ಕಾಶ್ಮೀರ ಸಂಘಟನೆಯಿಂದ ಖಂಡನೆ
ಕಾಶ್ಮೀರ ಪಂಡಿತರ ಸಂಘಟನೆ ಪನೂನ್ ಕಾಶ್ಮೀರದ ಸಂಚಾಲಕ ಅಗ್ನಿಶೇಖರ ಈ ಬೆದರಿಕೆಯನ್ನು ತೀವ್ರವಾಗಿ ಖಂಡಿಸಿದೆ. ಜಮ್ಮು ಕಾಶ್ಮೀರದ ಉಪ ರಾಜ್ಯಪಾಲ ಮನೋಜ ಸಿನ್ಹಾ ಈ ಕುರಿತು ಪರಿಶೀಲಿಸಿ ಬೆದರಿಕೆ ಬಂದ ಕುಟುಂಬಗಳಿಗೆ ತಕ್ಷಣವೇ ರಕ್ಷಣೆ ನೀಡಬೇಕು. ಜತೆಗೆ ಇದರ ಹಿಂದೆ ಯಾರಿದ್ದಾರೆ ಮತ್ತು ಮಾಹಿತಿ ಹೇಗೆ ಸೋರಿಕೆಯಾಯಿತು ಎಂಬುವುದರ ಕುರಿತು ಸಮಗ್ರ ತನಿಖೆ ಆದೇಶಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.