ಚಂಡೀಗಢ, ಅ. 1: ಅತ್ಯಾಚಾರದ ವದಂತಿ ಹರಡಿದ ಬಳಿಕ ಪಂಜಾಬ್‌ನ ಫಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾನಿಲಯ (LPU) ಆವರಣದಲ್ಲಿ ನಡೆದ ಹಿಂಸಾಚಾರ ಮತ್ತು ಆಸ್ತಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಮೂರು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಸಿಸಿಟಿವಿ ದೃಶ್ಯಗಳು ಹಾಗೂ ಸಂಗ್ರಹಿಸಿದ ವಿದ್ಯುನ್ಮಾನ ಸಾಕ್ಷ್ಯಗಳ ಆಧಾರದ ಮೇಲೆ ಬಂಧನ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ಹಿಂಸಾಚಾತರದ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಸಂಸ್ಥಾಪಕ-ಕುಲಾಧಿಪತಿ ಅಶೋಕ್ ಮಿತ್ತಲ್ ಶಂಕೆ ವ್ಯಕ್ತಪಡಿಸಿದ್ದಾರೆ.
ಬಂಧಿತರಲ್ಲಿ ಅಬಿ, ಗಗನ್ ಅಲಿಯಾಸ್ ಕಾಲಾ ಹಾಗೂ ಜೇಮ್ಸ್ ದಹಿಯಾ ಎಂಬ ಮೂವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಬಂಧಿತರಲ್ಲಿ ಓರ್ವ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪ್ರತಿಯೊಬ್ಬ ಆರೋಪಿಯು ಹಿಂಸಾಚಾರದಲ್ಲಿ ವಹಿಸಿದ ನಿರ್ದಿಷ್ಟ ಪಾತ್ರದ ಕುರಿತು ತನಿಖೆ ಮುಂದುವರಿದಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ
ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡಿದ ಬಳಿಕ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಆರಂಭವಾಗಿತ್ತು. ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಹಾಗೂ ಆಸ್ತಿ ಧ್ವಂಸ ನಡೆದಿತ್ತು. ಜಲಂಧರ್–ಫಗ್ವಾರಾ ಹೆದ್ದಾರಿಯ ಒಂದು ಭಾಗವನ್ನೂ ಪ್ರತಿಭಟನಾಕಾರರು ತಡೆದಿದ್ದರು. ಆದರೆ, ಅತ್ಯಾಚಾರ ಪ್ರಕರಣದ ಕುರಿತು ಪ್ರತಿಭಟನಾಕಾರರಿಗೆ ಯಾವುದೇ ಮಾಹಿತಿ ಇರಲಿಲ್ಲ. ಸಂತ್ರಸ್ತೆಯ ಗುರುತು, ಘಟನೆ ನಡೆದ ಸ್ಥಳ ಅಥವಾ ಯಾವುದೇ ಅಧಿಕೃತ ದೂರು ಸೇರಿ ಸ್ಪಷ್ಟ ಮಾಹಿತಿ ಗೊತ್ತಿರಲಿಲ್ಲ. ಬಳಿಕ ಹಿಂಸಾಚಾರದಲ್ಲಿ ಹೊರಗಿನವರು ಹಾಗೂ ಸಮಾಜವಿರೋಧಿ ಶಕ್ತಿಗಳು ಭಾಗಿಯಾಗಿರಬಹುದು ಎಂಬ ಆರೋಪಗಳು ಕೇಳಿಬಂದಿವೆ.
ಪಂಜಾಬ್ ಅಸ್ಥಿರಗೊಳಿಸುವ ಸಂಚು ಶಂಕೆ
ವಿಶ್ವವಿದ್ಯಾಲಯದ ಸಂಸ್ಥಾಪಕ-ಕುಲಾಧಿಪತಿ ಅಶೋಕ್ ಮಿತ್ತಲ್, ಈ ಘಟನೆ ಕೇವಲ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ್ದಲ್ಲದೆ ಪಂಜಾಬ್‌ನಲ್ಲಿ ಅಶಾಂತಿ ಸೃಷ್ಟಿಸುವ ದೊಡ್ಡ ಸಂಚಿನ
ಹಾಡಹಗಲೇ ವ್ಯಕ್ತಿಯ ಕತ್ತು ಕೊಯ್ದು ಕೊಲೆ: ಬಾಗೇಪಲ್ಲಿಯಲ್ಲಿ ಬೆಚ್ಚಿಬೀಳಿಸಿದ ಘಟನೆ
ಅತ್ಯಾಚಾರ ಮತ್ತು ವಿದ್ಯಾರ್ಥಿನಿಯ ಆತ್ಮಹತ್ಯೆ ಕುರಿತ ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹರಡಲಾಗಿದೆ. ಆ ಮೂಲಕ ವಿದ್ಯಾರ್ಥಿಗಳನ್ನು ಹೇಗೆ ಪ್ರಚೋದಿಸಲಾಗಿದೆ ಮತ್ತು ಹೊರಗಿನವರು ಹೇಗೆ ಪರಿಸ್ಥಿತಿಗೆ ಪ್ರವೇಶಿಸಿದರು ಎಂಬುದರ ಕುರಿತು ತನಿಖೆ ನಡೆಯಬೇಕಿದೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಗಡಿ ರಾಜ್ಯವಾಗಿರುವುದರಿಂದ ದೇಶದೊಳಗಿನ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳ ಬಗ್ಗೆಯೂ ತನಿಖೆ ನಡೆಸಬೇಕಿದೆ ಎಂದು ಮಿತ್ತಲ್ ಹೇಳಿದ್ದಾರೆ. ರಾಜಪುರದಲ್ಲಿರುವ ಮತ್ತೊಂದು ಖಾಸಗಿ ವಿಶ್ವವಿದ್ಯಾಲಯದಲ್ಲೂ ಇದಕ್ಕೂ ಮುನ್ನ ಇದೇ ರೀತಿಯ ವದಂತಿಗಳು ಹರಡಿದ್ದವು ಎಂದು ಅವರು ಉಲ್ಲೇಖಿಸಿದ್ದಾರೆ.
ಎರಡೂ ಘಟನೆಗಳಲ್ಲಿ ಸಾಮಾಜಿಕ ಜಾಲತಾಣದ ಒಂದೇ ವೇದಿಕೆಯನ್ನು ಬಳಸಲಾಗಿದೆ ಮತ್ತು ವದಂತಿಗಳಲ್ಲೂ ಸಾಮ್ಯತೆ ಕಂಡುಬಂದಿದೆ ಎಂದು ಮಿತ್ತಲ್ ಹೇಳಿದ್ದಾರೆ. ಈ ಘಟನೆಗಳ ನಡುವಿನ ಸಂಬಂಧ ಅಥವಾ ಸಂಚಿನ ಆರೋಪಗಳು ತನಿಖೆಯಿಂದ ಇನ್ನೂ ದೃಢಪಟ್ಟಿಲ್ಲ.
ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಮುಖ ಗುರುತಿಸುವ ವ್ಯವಸ್ಥೆ ಹಾಗೂ ವಾಹನಗಳಿಗಾಗಿ ಸ್ವಯಂಚಾಲಿತ ಭದ್ರತಾ ವ್ಯವಸ್ಥೆ ಸೇರಿ ಹಲವು ಸುರಕ್ಷತಾ ಕ್ರಮಗಳಿದ್ದರೂ ಹಿಂಸಾಚಾರ ನಡೆದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಮಿತ್ತಲ್ ಹೇಳಿದ್ದಾರೆ. ಹೊರರಾಜ್ಯಗಳಿಂದ ವಿದ್ಯಾರ್ಥಿಗಳು ಪಂಜಾಬ್‌ಗೆ ಬಂದು ಶಿಕ್ಷಣ ಪಡೆಯುವುದರಿಂದ ರಾಜ್ಯದ ಆರ್ಥಿಕತೆಗೆ ಕೊಡುಗೆ ಸಿಗುತ್ತದೆ. ಇಂತಹ ಘಟನೆಗಳು ಆ ಆರ್ಥಿಕ ಕೊಡುಗೆಯ ಮೇಲೂ ಪರಿಣಾಮ ಬೀರಬಹುದು ಎಂದು ಅವರು ತಿಳಿಸಿದ್ದಾರೆ.