Mahakumbh 2025 : ಮಹಾಕುಂಭ ಮೇಳಕ್ಕೆ ಹೋಗುವವರಿಗೆ ಸಿಹಿ ಸುದ್ದಿ; ವಿಮಾನ ಟಿಕೆಟ್ ದರ ಅರ್ಧದಷ್ಟು ಇಳಿಕೆ!
ಮಹಾಕುಂಭ ಮೇಳಕ್ಕೆ ಹೋಗುವ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ದೊರೆಕಿದ್ದು, ವಿಮಾನ ದರ ಅರ್ಧದಷ್ಟು ಇಳಿಕೆ ಕಂಡಿದೆ. ವಿಮಾನಯಾನ ಸಂಸ್ಥೆಗಳ ಟಿಕೆಟ್ ದರ ಏರಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ ಟಿಕೆಟ್ ದರ ಕಡಿತಗೊಳಿಸಲು ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ.
ಲಖನೌ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ (Mahakumbh 2025) ನಡೆಯುತ್ತಿದೆ. ಆದರೆ ಗಗನಕ್ಕೇರಿದ ವಿಮಾನಗಳ ಟಿಕೆಟ್ ಬೆಲೆಯಿಂದಾಗಿ ಪ್ರಯಾಣಿಕರು ಪರಡಾಡುವಂತಾಗಿತ್ತು. ಇದೀಗ ಕುಂಭ ಮೇಳಕ್ಕೆ ತೆರಳುವವರಿಗೆ ಸಿಹಿ ಸುದ್ದಿಯೊಂದು ದೊರಕಿದೆ. ವಿಮಾನ ಟಿಕೆಟ್ ದರಗಳು ಅರ್ಧದಷ್ಟು ಇಳಿಕೆಯಾಗಿವೆ.
ಪ್ರಯಾಗ್ ರಾಜ್ ಗೆ ಸೇವೆ ನೀಡುತ್ತಿರುವ ವಿಮಾನಯಾನ ಸಂಸ್ಥೆಗಳ ಟಿಕೆಟ್ ದರ ಏರಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ ಟಿಕೆಟ್ ದರ ಕಡಿತಗೊಳಿಸಲು ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ. ಟಿಕೆಟ್ ದರ ಮಿತಿಯಲ್ಲಿರಿಸುವಂತೆ ತಿಳಿಸಿದೆ.
ಸದ್ಯ ವಿಮಾನಯಾನ ಟಿಕೆಟ್ ದರವನ್ನು 30 ರಿಂದ 50% ರಷ್ಟು ಕಡಿಮೆ ಮಾಡಲಾಗಿದೆ. ಹೀಗಾಗಿ ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರಿಗೆ ಕೊಂಚ ನೆಮ್ಮದಿ ದೊರಕಿದಂತಾಗಿದೆ. ಮಹಾಕುಂಭ ಮೇಳ ಪ್ರಾರಂಭವಾದಗಿನಿಂದಲೂ ಪ್ರಯಾಗ್‌ರಾಜ್ ವಿಮಾನಗಳ ಏರ್ ಟಿಕೆಟ್ ದರಗಳು ಗಣನೀಯವಾಗಿ ಏರಿಕೆ ಕಂಡಿತ್ತು. ಅದರಲ್ಲಿಯೂ ವಿಶೇಷವಾಗಿ ಮೌನಿ ಅಮವಾಸ್ಯೆಯಂದು ಅತೀ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದರಿಂದ ಟಿಕೆಟ್ ಬೆಲೆ ಹೆಚ್ಚಾಗಿತ್ತು.
ಆದರೆ ಅದಕ್ಕೀಗ ಕಡಿವಾಣ ಬಿದ್ದಿದೆ. ಇತ್ತೀಚೆಗೆ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನಿರಂತರವಾಗಿ ಏರುತ್ತಿರುವ ವಿಮಾನ ಟಿಕೆಟ್ ದರಗಳ ಪ್ರವೃತ್ತಿಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಅದು ಜಾರಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ : Kumbhamela Stampede: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ-ಸಿಎಂ ಯೋಗಿ ಫಸ್ಟ್ ರಿಯಾಕ್ಷನ್
ಮಹಾಕುಂಭ ಮೇಳ ಫೆ. 26ರ ವರೆಗೂ ನಡೆಯಲಿದ್ದು, ಕೋಟ್ಯಾಂತರ ಭಕ್ತರು ತ್ರಿವೇಣಿಯಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.