ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಬಿ ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಅಂಕಿತ; ಹಿಂದಿನ ನರೇಗಾ ಯೋಜನೆಗಿಂತ ಹೇಗೆ ಭಿನ್ನ? ಫಲಾನುಭವಿಗಳಿಗೆ ಯಾವೆಲ್ಲ ಅನುಕೂಲಗಳಿವೆ?

Differences Between VB G RAM G and MGNREGA: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರನ್ನು ಬದಲಾಯಿಸಿ ಕೇಂದ್ರ ಸರ್ಕಾರ ವಿಕಸಿತ ಭಾರತ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆಯನ್ನು ಜಾರಿಗೊಳಿಸಿದೆ. ಈ ಮಸೂದೆಯಿಂದ ಯೋಜನೆಯ ಹಣಕಾಸು ಮಾದರಿಯಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ. ಅವು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

(ಸಂಗ್ರಹ ಚಿತ್ರ)

ನವದೆಹಲಿ: ವಿರೋಧ ಪಕ್ಷಗಳ ವಿರೋಧದ ನಡುವೆಯೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (Mahatma Gandhi National Rural Employment Guarantee Act) ಹೆಸರನ್ನು ಬದಲಾಯಿಸಿದ ಕೇಂದ್ರ ಸರ್ಕಾರ ವಿಕಸಿತ ಭಾರತ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆಯನ್ನು (Viksit Bharat Guarantee for Rozgar and Ajeevika Mission) ಜಾರಿಗೊಳಿಸಿದೆ. ಹೊಸ ಮಸೂದೆಯಲ್ಲಿ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಡಲಾಗಿದೆ. ಅಲ್ಲದೇ ಇದರಲ್ಲಿ ಹಣಕಾಸು ಮಾದರಿಯನ್ನು ಬದಲಾಯಿಸಲಾಗಿದೆ. ಹೊಸ ಮಸೂದೆಯಲ್ಲಿ ಕಾರ್ಮಿಕರಿಗೆ ಶಾಸನಬದ್ಧ ವೇತನ ಉದ್ಯೋಗ ಖಾತರಿಯನ್ನು ಹಣಕಾಸು ವರ್ಷದಲ್ಲಿ 125 ದಿನಗಳಿಗೆ ಹೆಚ್ಚಿಸಲಾಗಿದೆ.

ಕಾಂಗ್ರೆಸ್ ಆಡಳಿತ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರು ಬದಲಾಯಿಸಿ ವಿಕಸಿತ ಭಾರತ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆಯಾಗಿ ಸಂಸತ್ತು ಅಂಗೀಕರಿಸಿದ ಬಳಿಕ ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಬಳಿಕ ಇದು ಕಾನೂನಾಗಿ ದೇಶಾದ್ಯಂತ ಜಾರಿಯಾಗಿದೆ. ನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.

ಆರ್ಥಿಕವಾಗಿ ಹಿಂದುಳಿದವರು ವಿದ್ಯಾವಂತರಾದರೆ ಮಾತ್ರ ಆ ಮನೆ ಸಮೃದ್ಧಿ ಹೊಂದುತ್ತದೆ: ಸುಕುಮಾರ್ ಶೆಟ್ಟಿ

ನರೇಗಾ ಮತ್ತು ವಿಬಿ ಜಿ ರಾಮ್ ಜಿ ಯೋಜನೆ ನಡುವಿನ ಪ್ರಮುಖ ವ್ಯತ್ಯಾಸಗಳು ಇಂತಿವೆ.

ಉದ್ಯೋಗ ದಿನ ಹೆಚ್ಚಳ

ವಿಬಿ ಜಿ ರಾಮ್ ಜಿ ಯೋಜನೆಯು ಹಣಕಾಸು ವರ್ಷದಲ್ಲಿ ಖಾತರಿಪಡಿಸಿದ ವೇತನ ಉದ್ಯೋಗ ದಿನಗಳ ಸಂಖ್ಯೆಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದು ನರೇಗಾ ಯೋಜನೆಯಡಿಯಲ್ಲಿ 100 ದಿನಗಳಾಗಿತ್ತು.

ನಿಧಿ ಹಂಚಿಕೆ ಬದಲಾವಣೆ

ಮಸೂದೆಯ ಸೆಕ್ಷನ್ 22ರ ಅಡಿಯಲ್ಲಿ ಕೇಂದ್ರ ಶೇ. 60 ಮತ್ತು ರಾಜ್ಯವು ಶೇ. 40ರಷ್ಟು ನಿಧಿಯನ್ನು ಹಂಚಿಕೊಳ್ಳುತ್ತವೆ. ಈಶಾನ್ಯ ರಾಜ್ಯಗಳು, ಹಿಮಾಲಯನ್ ರಾಜ್ಯಗಳು, ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ಕೇಂದ್ರಾಡಳಿತ ಪ್ರದೇಶಗಳಿಗೆ ನಿಧಿಯ ಹಂಚಿಕೆ ಮಾದರಿ 90:10 ಅನುಪಾತದಲ್ಲಿರುತ್ತದೆ. ಆದರೆ ನರೇಗಾದಲ್ಲಿ ಇದಕ್ಕೆ ಸಂಬಂಧಿಸಿದ ಪೂರ್ಣ ನಿಧಿಯನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು.

ಕೆಲಸದ ಲಭ್ಯತೆ

ಹೊಸ ಕಾನೂನಿನಡಿಯಲ್ಲಿ ಬಿತ್ತನೆ ಮತ್ತು ಕೊಯ್ಲಿನ ಗರಿಷ್ಠ ಕೃಷಿ ಋತುಗಳಲ್ಲಿ ಯೋಜನೆಯಲ್ಲಿ 60 ದಿನಗಳ ವಿರಾಮವಿರುತ್ತದೆ. ಇದು ಕೃಷಿಕಾರ್ಯಗಳಿಗೆ ಕಾರ್ಮಿಕರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ; ಭಾರತದಲ್ಲಿರುವ ರಾಯಭಾರಿ ಕಚೇರಿಯೆದರು ಭಾರೀ ಪ್ರತಿಭಟನೆ

ಪೂರೈಕೆ ಮತ್ತು ಬೇಡಿಕೆ

ನರೇಗಾವು ಬೇಡಿಕೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಅಡಿಯಲ್ಲಿ ಗ್ರಾಮೀಣ ಕುಟುಂಬಗಳು ಅಗತ್ಯವಿರುವಂತೆ ಉದ್ಯೋಗವನ್ನು ಪಡೆಯಬಹುದು. ಕೆಲಸವಿಲ್ಲದೇ ಇದ್ದರೂ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಹೊಸ ಮಸೂದೆಯು ಪೂರೈಕೆ ಆಧಾರದಲ್ಲಿರುತ್ತದೆ. ಕೆಲಸದ ಹಂಚಿಕೆಗಳನ್ನು ಮಿತಿಗೊಳಿಸಲಾಗಿದೆ. ಹೆಚ್ಚುವರಿ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕಾಗುತ್ತದೆ. ಕೇಂದ್ರವು ಇದಕ್ಕಾಗಿ 95,000 ಕೋಟಿ ರೂ. ಗಳನ್ನು ಮೀಸಲಿಟ್ಟಿದೆ.

ನಿರ್ವಹಣಾ ಸಂಸ್ಥೆ ಬದಲಾವಣೆ

ನರೇಗವನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ನಿರ್ವಹಣೆ ಮಾಡಿದರೆ ವಿಬಿ ಜಿ ರಾಮ್ ಜಿ ಯೋಜನೆಯನ್ನು ಕೇಂದ್ರ ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕೌನ್ಸಿಲ್ ನಿರ್ವಹಿಸುತ್ತದೆ.

ಹೊಸ ಮಸೂದೆಯಡಿ ನಿಬಂಧನೆಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡವನ್ನು 1,000 ರೂ. ನಿಂದ 10,000 ರೂ. ಗೆ ಹೆಚ್ಚಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author