ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಮಾಚಲ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್‌ ಪಕ್ಕದಲ್ಲೇ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ 30 ಪ್ರಯಾಣಿಕರು ಪಾರು

Mandi Landslide: ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮ ಸುರಿದ ಪರಿಣಾಮ ರಸ್ತೆಗಳೆಲ್ಲ ಬ್ಲಾಕ್‌ ಆಗಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ. ಈ ಮಧ್ಯೆ ಮಂಡಿ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ ಸಮೀಪ ಭೀಕರ ಗುಡ್ಡ ಕುಸಿತವಾಗಿದ್ದು, ಕೂದಲೆಳೆ ಅಂತರದಲ್ಲಿ 30 ಪ್ರಯಾಣಿಕರು ಪಾರಾಗಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಹಿಮಾಚಲ ಪ್ರದೇಶದಲ್ಲಿ ಗುಡ್ಡ ಕುಸಿತ; ಬಸ್‌ ಪ್ರಯಾಣಿಕರು ಪಾರು

ಶಿಮ್ಲಾ, ಜ. 24: ಹಿಮಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಹವಾಮಾನ ಹದಗೆಟ್ಟಿದ್ದು, ನಿರಂತರ ಮಳೆಯಾಗುವ ಜತೆಗೆ ಹಿಮಪಾತವೂ ಕಂಡು ಬಂದಿದೆ. ಭಾರಿ ಹಿಮ ಸುರಿದ ಪರಿಣಾಮ ರಸ್ತೆಗಳೆಲ್ಲ ಬ್ಲಾಕ್‌ ಆಗಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ. ಕೆಲವೆಡೆ ಕಿಲೋ ಮೀಟರ್‌ಗಟ್ಟಲೆ ವಾಹನಗಳು ರಸ್ತೆಯಲ್ಲೇ ಬಾಕಿ ಆಗಿವೆ. ಈ ಮಧ್ಯೆ ಮಂಡಿ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ ಸಮೀಪ ಭೀಕರ ಗುಡ್ಡ ಕುಸಿತವಾಗಿದ್ದು, ಕೂದಲೆಳೆ ಅಂತರದಲ್ಲಿ 30 ಪ್ರಯಾಣಿಕರು ಪಾರಾಗಿದ್ದಾರೆ (Mandi Landslide). ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಪಾಂಡೋಹ್‌ನಿಂದ ಮೊವಿಸೇರಿಗೆ ತೆರಳುತ್ತಿದ್ದ ಬಸ್‌ನ ಕೆಲವೇ ಅಡಿಯ ಅಂತರದಲ್ಲಿ ಗುಡ್ಡ ಕುಸಿದು ರಸ್ತೆಗೆ ಬೃಹತ್‌ ಪ್ರಮಾಣದ ಮಣ್ಣು ಬಿದ್ದಿದೆ. ಬಸ್‌ ಚಾಲಕ ಕೂಡಲೇ ಬಸ್‌ ನಿಲ್ಲಿಸಿದ್ದು, ಪ್ರಾಯಾಣಿಕರು ಇಳಿದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಈ ಮೂಲಕ ಕೂದಲೆಳೆ ಅಂತರದಲ್ಲಿ ಅಪಾಯವೊಂದು ತಪ್ಪಿದೆ. ಈ ರಸ್ತೆಯ ಒಂದು ಬದಿ ಗುಡ್ಡ ಇದ್ದರೆ ಮತ್ತೊಂಡು ಬದಿ ಪ್ರತಾಪವಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ವಿಡಿಯೊದಲ್ಲಿ ಏನಿದೆ?

ಗುಡ್ಡ ಕುಸಿತದ ಸೂಚನೆ ಸಿಕ್ಕ ಕೂಡಲೇ ಚಾಲಕ ಬಸ್‌ ನಿಲ್ಲಿಸಿದ್ದಾನೆ. ಪ್ರಯಾಣಿಕರೆಲ್ಲ ಇಳಿದ ಬಳಿಕ ಬಸ್‌ ಅನ್ನು ಸ್ವಲ್ಪ ಹಿಂದಕ್ಕೆ ಚಲಾಯಿಸಿದ್ದಾನೆ. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ʼʼಘಟನೆ ವೇಳೆ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ಮಣ್ಣು ಕುಸಿಯುತ್ತಿದ್ದಂತೆ ಪ್ರಯಾಣಿಕರು ಭಯಭೀತರಾದರು. ಕೂಡಲೇ ಅವರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಪ್ರಾಣ

ಚಾಲಕನ ಸಮಯ ಪ್ರಜ್ಞೆ ಹಲವು ಪ್ರಯಾಣಿಕರ ಜೀವ ಉಳಿಸಿದೆ. ಚಾಲಕ ಬಿಟ್ಟು ಮತ್ತು ಕಂಡಕ್ಟರ್‌ ಮನು ಅವರ ಈ ನಡೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿದೆ. ಸಿಬ್ಬಂದಿ ರಸ್ತೆಗೆ ಬಿದ್ದ ಮಣ್ಣು ಬದಿಗೆ ಸರಿಸಿ ದುರಸ್ತಿ ಕಾರ್ಯ ನಡೆಸಿದರು.

ಕೇಕ್‌ ಕಟ್‌ ಮಾಡಿಸಿ ಮರಿಯಾನೆಯ ಹುಟ್ಟುಹಬ್ಬ ಆಚರಿಸಿದ ಪ್ರಾಣಿ ಪ್ರಿಯ; ವಿಡಿಯೊ ವೈರಲ್

ಘಟನೆ ವಿವರ

ಠಾಕೂರ್‌ ಕೋಚ್‌ ಖಾಸಗಿ ಬಸ್‌ ಶನಿವಾರ (ಜನವರಿ 24) ಪಾಂಡೋಹ್‌ನಿಂದ ಮೊವಿಸೇರಿಗೆ ತೆರಳುತ್ತಿದ್ದ ವೇಳೆ ಬೆಳಗ್ಗೆ ಸುಮಾರು 8:55ರ ವೇಳೆಗೆ ಥಮ್ಲಾ ಖಾದ್ ಎಂಬಲ್ಲಿ ಇದ್ದಕ್ಕಿದ್ದಂತೆ ಗುಡ್ಡ ಕುಸಿಯಿತು. ಅನುಭವಿ ಚಾಲಕ ಬಿಟ್ಟು ಬಸ್‌ ಅನ್ನು ನಿಯಂತ್ರಿಸಿ ಭಾರಿ ದುರಂತದಿಂದ ಪ್ರಯಾಣಿಕರನ್ನು ಪಾರು ಮಾಡಿದರು. ಕಂಡಕ್ಟರ್‌ ಮನು ಕೂಡ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಸದ್ಯ ಈ ಸದ್ಯ ವಿಡಿಯೊ ನೋಡಿದ ನೆಟ್ಟಿಗರು ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ ಎಂದು ನಿಟ್ಟಿಸಿರು ಬಿಟ್ಟಿದ್ದಾರೆ. ʼʼಬಸ್‌ನಿಂದ ಕೇವಲ 1 ಅಡಿ ಅಂತರದಲ್ಲಿ ಗುಡ್ಡ ಕುಸಿದಿದ್ದು, ಬಿಟ್ಟು ಮತ್ತು ಮನು ಹಲವು ಪ್ರಯಾಣಿಕರ ಜೀವ ಉಳಿಸಿದ್ದಾರೆʼʼ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.