ನವದೆಹಲಿ: ಹಿಂದೂ ಸಂಪ್ರದಾಯದ (Hindu rituals) ಪ್ರಕಾರ ಶಾಸ್ತ್ರೋಕ್ತವಾಗಿ ನಡೆಯದ ಮದುವೆಯನ್ನು ಮದುವೆ (Hindu marriage) ಎಂದು ಪರಿಗಣಿಸಲಾಗುವುದಿಲ್ಲ. ಕೇವಲ ನೋಂದಣಿ ಪತ್ರವಿದ್ದ (marriage certificate) ಕಾರಣಕ್ಕೆ ಮದುವೆಯನ್ನು ಸಿಂಧು ಎನ್ನಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಕೇವಲ ವೀಸಾ ಅಥವಾ ಯಾವುದೋ ಕೆಲಸದ ಕಾರಣಕ್ಕಾಗಿ ಮದುವೆಯಾಗುವ ಮೊದಲೇ ನೋಂದಣಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಆದರೆ ಇದು ಒಪ್ಪಂದವಾಗಿದೆ ಮದುವೆಯಲ್ಲ. ಹಿಂದೂ ವಿವಾಹ ಕಾಯ್ದೆಯಡಿ (Hindu marriage act) ಮದುವೆ ಒಂದು ಒಪ್ಪಂದವಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಡಾಲಿ ರಾಣಿ ಮತ್ತು ಮನೀಶ್ ಕುಮಾರ್ ಅವರ ವಿಚ್ಛೇದನ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು, ಹಿಂದೂ ವಿವಾಹವು ಕೇವಲ ಒಂದು ವಹಿವಾಟು ಒಪ್ಪಂದ ಅಥವಾ ಹಾಡು-ಕುಣಿತದ ಕಾರ್ಯಕ್ರಮವಲ್ಲ. ಅದೊಂದು ಪವಿತ್ರ ಸಂಸ್ಕಾರ. ಮದುವೆಯ ನೋಂದಣಿ ಪ್ರಮಾಣಪತ್ರ ಪಡೆದಿರುವ ಮಾತ್ರಕ್ಕೆ ಒಬ್ಬ ಪುರುಷ ಮತ್ತು ಮಹಿಳೆ ಕಾನೂನಾತ್ಮಕವಾಗಿ ಪತಿ-ಪತ್ನಿಯಾಗುವುದಿಲ್ಲ ಎಂದು ಹೇಳಿದೆ.
Roopa Gururaj Column: ಅಚಲ ಪ್ರೇಮದ ನಳ-ದಮಯಂತಿಯರ ಕಥೆ
ಮದುವೆ ಮಾನ್ಯ ಎಂದೆನಿಸಿಕೊಳ್ಳಬೇಕಾದರೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಸೂಕ್ತ ಧಾರ್ಮಿಕ ವಿಧಿ ವಿಧಾನಗಳು ನಡೆಯಲೇಬೇಕು. ಅದರಲ್ಲೂ ವಿಶೇಷವಾಗಿ ಸಪ್ತಪದಿ ವಿಧಿ ನಡೆಯಲೇಬೇಕು ಎಂದು ತಿಳಿಸಿದೆ.
ಪೈಲೆಟ್ ಗಳಾದ ಡಾಲಿ ರಾಣಿ ಮತ್ತು ಮನೀಶ್ ಕುಮಾರ್ ಅವರಿಬ್ಬರು ಖಾಸಗಿ ಸಂಸ್ಥೆಯೊಂದರಿಂದ ವಿವಾಹ ಪ್ರಮಾಣ ಪತ್ರ ಪಡೆದಿದ್ದು, ಬಳಿಕ ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನ ಪಡೆಯಲು ತೀರ್ಮಾನಿಸಿದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ ಅವರಿಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿಲ್ಲ. ಹೀಗಾಗಿ ಇದನ್ನು ಮದುವೆ ಎನ್ನಲಾಗುವುದಿಲ್ಲ ಎಂದು ಹೇಳಿ, ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷ ಅಧಿಕಾರ ಬಳಸಿ ಅವರಿಬ್ಬರ ಮದುವೆಯೇ ನಡೆದಿಲ್ಲ ಎಂದು ಘೋಷಿಸಿ ಪ್ರಕರಣವನ್ನು ವಜಾಗೊಳಿಸಿದೆ.
Namma Metro ticket price hike: ಬೆಂಗಳೂರಿಗರಿಗೆ ಮತ್ತೆ ಬರೆ, ನಮ್ಮ ಮೆಟ್ರೋ ಪ್ರಯಾಣ ದರ ಶೇ.5 ಹೆಚ್ಚಳ
ಹಿಂದೂ ಮದುವೆ ನಿಯಮ ಏನಿದೆ?
ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 7ರ ಪ್ರಕಾರ ಧಾರ್ಮಿಕ ವಿಧಿಗಳು ಅದರಲ್ಲೂ ಮುಖ್ಯವಾಗಿ ಸಪ್ತಪದಿ ಕಡ್ಡಾಯವಾಗಿದೆ. ನೋಂದಣಿ ಪ್ರಮಾಣಪತ್ರ ಕೇವಲ ಪುರಾವೆ ಎಂದು ಪರಿಗಣಿಸಲಾಗಿದೆ. ಕೇವಲ ವೀಸಾ ಅಥವಾ ಬ್ಯಾಂಕ್ ಅಕೌಂಟ್‌ಗೆ ಸೀಮಿತವಾದ ಮದುವೆಯನ್ನು ವಿವಾಹ ಎಂದು ಪರಿಗಣಿಸಲಾಗುವುದಿಲ್ಲ. ವೀಸಾ ಅಥವಾ ಇತರ ಯಾವುದೇ ಉದ್ದೇಶದಿಂದ ವಿವಾಹ ಪ್ರಮಾಣ ಪತ್ರ ಪಡೆಯುವುದು ಕಾನೂನು ಬಾಹಿರವಾಗಿದೆ.