Merchant navy officer murder: ಪತಿಯ ರುಂಡವಿಲ್ಲದ ಡೆಡ್‌ಬಾಡಿ ಬೆಡ್ ಬಾಕ್ಸ್‌ನಲ್ಲಿಟ್ಟು ಅದ್ರ ಮೇಲೆ ಮಲಗಿದ್ಳಂತೆ ಕಿರಾತಕಿ!
Merchant navy officer murder: ಕಳೆದೆರಡು ದಿನಗಳಿಂದ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿರುವ ಮೀರತ್‌ನ ಮರ್ಚೆಂಟ್ ನೇಮಿ ಅಧಿಕಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನ್ನಕ್ಕೊಂದು ರಣ ಭೀಕರ ಸಂಗತಿಗಳು ಬಯಲಾಗ್ತಿದೆ. ಬಾಯ್‌ಫ್ರೆಂಡ್ ಜೊತೆಗೂ ಕಿಡಿಗೇಡಿ ಪತ್ನಿ ಈ ಕೃತ್ಯ ಎಸಗಿದ್ದು, ಇದೀಗ ಇಬ್ಬರೂ ಜೈಲು ಕಂಬಿ ಎಣಿಸುತ್ತಿದ್ದಾರೆ. ಆದರೆ ಮೃತ ಸೌರಭ್‌ನನ್ನು ಹಂತಕರು ಎಷ್ಟು ಕ್ರೂರವಾಗಿ ಕೊಲೆಗೈದಿದ್ದಾರೆ ಎಂಬುದನ್ನು ಕೇಳಿ ತನಿಖಾಧಿಕಾರಿಗಳೇ ದಂಗಾಗಿದ್ದಾರೆ.


ಮೀರತ್: ಮರ್ಚೆಂಟ್ ನೇವಿ ಆಫೀಸರ್ ಸೌರಭ್ ರಜಪೂತ್ ಹತ್ಯೆ(Merchant navy officer murder) ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತನಿಖೆ ವೇಳೆ ಬಗೆದಷ್ಟು ರಣ ಭೀಕರ ಸಂಗತಿಗಳು ಹಂತಕರು ಬಾಯ್ಬಿಟ್ಟಿದ್ದಾರೆ. ಆರೋಪಿಗಳಾದ ಸೌರಭ್ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಬಾಯ್‌ಫ್ರೆಂಡ್ ಸಾಹಿಲ್ ಶುಕ್ಲಾ ತಾವು ಹತ್ಯೆಗೆ ಯಾವ ರೀತಿಯಲ್ಲಿ ಸಂಚು ರೂಪಿಸಿದ್ದರು? ಅದನ್ನು ಮುಚ್ಚಿಡಲು ಯಾವ ರೀತಿಯ ಪ್ರಯತ್ನಗಳು ನಡೆಸಿದ್ದರು ಎಂಬ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅದರಲ್ಲೂ ಸೌರಭ್‌ನನ್ನು ಹತ್ಯೆ ಮಾಡಿದ ಬಳಿಕ ಆತನ ರುಂಡವಿಲ್ಲದ ಶರೀರವನ್ನು ತನ್ನ ಡಬಲ್ ಬೆಡ್‌ನ ಕೆಳಗೆ ಇದ್ದ ಬಾಕ್ಸ್‌ನಲ್ಲಿ ತುಂಬಿ ಇಡೀ ರಾತ್ರಿ ಮುಸ್ಕಾನ್ ಅದರ ಮೇಲೆ ಮಲಗಿದ್ದ ಶಾಕಿಂಗ್ ಸಂಗತಿ ಪೊಲೀಸರನ್ನೇ ದಂಗಾಗಿಸಿದೆ.
ಶಾಲಾ ಜೀವನದ ಹಲವು ವರ್ಷಗಳ ನಂತರ ಮುಸ್ಕಾನ್ ಮತ್ತು ಸಾಹಿಲ್ ಮೊದಲ ಬಾರಿಗೆ ವೈಯಕ್ತಿಕವಾಗಿ ಭೇಟಿಯಾಗಿದ್ದರು. ಮೀರತ್‌ನ ಮಾಲ್‌ವೊಂದರಲ್ಲಿ ವಾಟ್ಸಾಪ್ ಗ್ರೂಪ್ ಆಯೋಜಿಸಿದ್ದ ಪಾರ್ಟಿಯಲ್ಲಿ ಅವರ ಪ್ರೇಮ ಪ್ರಣಯ ಪ್ರಾರಂಭವಾಯಿತು. ಸೌರಭ್ ರಜಪೂತ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಭಾವಿಸಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದೇವೆ. ಸಾಹಿಲ್ ಅವರನ್ನು ಕೊಂದ ನಂತರ, ಸೌರಭ್‌ನ ದೇಹವನ್ನು ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ, ಅವನ ತಲೆಯನ್ನು ರೇಜರ್‌ನಿಂದ ಕತ್ತರಿಸಿ, ನಂತರ ಅವನ ಕೈಗಳನ್ನು ಮಣಿಕಟ್ಟುಗಳಿಂದ ಕತ್ತರಿಸಿದರು. ಮೊದಲಿಗೆ ಆ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಪಾಲಿಥಿನ್ ಚೀಲಗಳಲ್ಲಿ ತುಂಬಿಸಿ, ಪ್ರತ್ಯೇಕ ಸ್ಥಳಗಳಲ್ಲಿ ಹರಡುವುದಾಗಿತ್ತು. ಸೌರಭ್‌ನ ದೇಹವನ್ನು ಒಂದು ಚೀಲದಲ್ಲಿ ಪ್ಯಾಕ್ ಮಾಡಿ ತಮ್ಮ ಡಬಲ್ ಬೆಡ್‌ನ ಪೆಟ್ಟಿಗೆಯೊಳಗೆ ಇಟ್ಟಿದ್ದೆವು. ಅದರ ಮೇಲೆ ಮಲಗಿ ಮುಸ್ಕಾನ್ ರಾತ್ರಿ ಕಳೆದಿದ್ದಳು. ಏತನ್ಮಧ್ಯೆ, ಸಾಹಿಲ್ ತಲೆ ಮತ್ತು ಕೈಗಳನ್ನು ತನ್ನ ಸ್ವಂತ ಮನೆಗೆ ತೆಗೆದುಕೊಂಡು ಹೋಗಿ, 24 ಗಂಟೆಗಳ ಕಾಲ ತನ್ನ ಕೋಣೆಯಲ್ಲಿ ಇರಿಸಿಕೊಂಡಿದ್ದನಂತೆ.
ಮಾರ್ಚ್ 5 ರ ಹೊತ್ತಿಗೆ, ಇಬ್ಬರೂ ಶವವನ್ನು ವಿಲೇವಾರಿ ಮಾಡುವ ತಮ್ಮ ಆರಂಭಿಕ ಯೋಜನೆಯನ್ನು ಕೈಬಿಟ್ಟರು. ಅವರು ಘಂಟಾಘರ್‌ನಿಂದ ದೊಡ್ಡ ನೀಲಿ ಡ್ರಮ್ ಅನ್ನು ಖರೀದಿಸಿ ಸ್ಥಳೀಯ ಮಾರುಕಟ್ಟೆಯಿಂದ ಸಿಮೆಂಟ್ ಖರೀದಿಸಿದರು. ಮುಸ್ಕಾನ್ ಅವರ ನಿವಾಸಕ್ಕೆ ಹಿಂತಿರುಗಿ, ಅವರು ಸೌರಭ್‌ನ ದೇಹವನ್ನು ಡ್ರಮ್‌ನೊಳಗೆ ಇಟ್ಟರು, ನಂತರ ಸಾಹಿಲ್ ತಲೆ ಮತ್ತು ಕೈಗಳನ್ನುಅದಕ್ಕೆ ಹಾಕಿ, ಅದರ ಮೇಲೆ ಸಿಮೆಂಟ್ ಸುರಿದು ಮುಚ್ಚಿದ್ದಾರೆ.
ಈ ಸುದ್ದಿಯನ್ನೂ ಓದಿ: Meerut Murder Case: "ಅಪ್ಪ ಡ್ರಮ್‌ನೊಳಗಿದ್ದಾರೆ," ಎಂದು ನೆರೆಹೊರೆಯವರಿಗೆ ಹೇಳಿದ್ದ ಮೃತ ಮರ್ಚೆಂಟ್ ನೇವಿ ಅಧಿಕಾರಿಯ 6 ವರ್ಷದ ಮಗಳು
ಏನಿದು ಪ್ರಕರಣ?
ಲಂಡನ್‍ನಲ್ಲಿ ಖಾಸಗಿ ಹಡಗಿನ ಕಂಪನಿಯಲ್ಲಿ ನೇವಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸೌರಭ್ ರಜಪೂತ್ ಫೆಬ್ರವರಿಯಲ್ಲಿ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಲು ಮೀರತ್‍ಗೆ ಭೇಟಿ ನೀಡಿದ್ದರು. ಮಾರ್ಚ್ 4ರಂದು ಮಗಳ ಹುಟ್ಟುಹಬ್ಬದ ಪಾರ್ಟಿಯಂದು ಸೌರಭ್ ಅನ್ನು ಪತ್ನಿ ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿಕೊಂಡು ಷಡ್ಯಂತ್ರ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಅವರು ಸೌರಭ್ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಿಮೆಂಟ್ ತುಂಬಿ ಶವವನ್ನು ಮುಚ್ಚಿಟ್ಟಿದ್ದಾರೆ. ಸೌರಭ್ ಕಾಣೆಯಾದ ಬಗ್ಗೆ ಅವನ ಮನೆಯವರು ದೂರು ನೀಡಿದ ಕಾರಣ ಪೊಲೀಸರು ಕಾಣೆಯಾಗಿದ್ದ ಸೌರಭ್ ಹುಡುಕಾಟದಲ್ಲಿದ್ದಾಗ ತನಿಖೆಯ ವೇಳೆ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಆತನ ಕೊಳೆತ ಅವಶೇಷಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.