ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UP Horror: ನೌಕಾಪಡೆ ಅಧಿಕಾರಿ ಹತ್ಯೆ ಪ್ರಕರಣ; ಸಹೋದರಿಯೊಂದಿಗೆ ಮಾತನಾಡಿದ್ದ ಚಾಟ್‌ ವೈರಲ್‌

ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಮರ್ಚೆಂಟ್‌ ಅಧಿಕಾರಿಯ ಕೊಲೆಯ ನಂತರ ಸೌರಭ್‌ ತನ್ನ ಸಹೋದರಿಯೊಂದಿಗೆ ಮಾತನಾಡಿದ್ದ ವಾಟ್ಸ್‌ಪ್‌ ಚಾಟ್‌ ವೈರಲ್‌ ಆಗಿದೆ. ಮಾರ್ಚ್ 6 ರಂದು, ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರ ಸಹೋದರಿ ಚಿಂಕಿ ಸೌರಭ್ ಅವರಿಗೆ ವಾಟ್ಸಾಪ್ ಸಂದೇಶ ಬಂದಿದ್ದು, ಹೋಳಿಗೆ ಮೀರತ್‌ಗೆ ಹೋಗುತ್ತೀರಾ ಎಂದು ಕೇಳಿದ್ದಾರೆ.

ಕೊಲೆಯಾದ ಸೌರಭ್‌

ಲಖನೌ: ಉತ್ತರ ಪ್ರದೇಶದ (UP Horror) ಮೀರತ್ ನಲ್ಲಿ ಭಯಾನಕಾರಿ ಘಟನೆಯೊಂದು ನಡೆದಿದ್ದು, ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ಕೊಲೆ ಮಾಡಿಸಿದ್ದಳು. ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್‌ಗೆ ಬಂದಿದ್ದ ನೌಕಾಧಿಕಾರಿ ಸೌರಭ್ ಕುಮಾರ್ ಎಂಬಾತನನ್ನು ಆತನ ಪತ್ನಿಯೇ ಪ್ರಿಯಕರನ ನೆರವಿನಿಂದ ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದಳು. ಇದೀಗ ಸೌರವ್‌ ಕೊಲೆಗೂ ಮುನ್ನ ತನ್ನ ಸಹೋದರಿಯೊಟ್ಟಿಗೆ ಮಾತನಾಡಿದ್ದ ವಾಟ್ಸ್‌ಪ್‌ ಚಾಟ್‌ ವೈರಲ್‌ ಆಗಿದೆ.

ಮಾರ್ಚ್ 6 ರಂದು, ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರ ಸಹೋದರಿ ಚಿಂಕಿ ಸೌರಭ್ ಅವರಿಗೆ ವಾಟ್ಸಾಪ್ ಸಂದೇಶ ಬಂದಿದ್ದು, ಹೋಳಿಗೆ ಮೀರತ್‌ಗೆ ಹೋಗುತ್ತೀರಾ ಎಂದು ಕೇಳಿದ್ದಾರೆ. ಸೌರಭ್‌ ತನ್ನ ಸಹೋದರಿಗೆ ಹೌದು ಎಂದು ಉತ್ತರಿಸಿದ್ದಾರೆ. ಮತ್ತೊಂದು ಸಂದೇಶದಲ್ಲಿ ತಾನು ಹೊರಗಿದ್ದೇನೆ, ಹೋಳಿ ಆದ ನಂತರ ಹಿಂದಿರುಗುತ್ತೇನೆ ಎಂದು ಹೇಳಲಾಗಿದೆ. ಚಿಂಕಿ ಇದನ್ನು ನಿಜ ಎಂದು ನಂಬಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಸೌರಭ್‌ನ ಕೊಲೆ ಆಗಿತ್ತು.

ಸೌರಭ್ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರು ನಡೆಸಿರುವ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಮುಸ್ಕಾನ್ ಆ ಸಂದೇಶಗಳನ್ನು ಕಳುಹಿಸಿದ್ದಾಳೆ ಎಂದು ಕುಟುಂಬಸ್ಥರಿಗೆ ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Murder Case: ಸ್ನೇಹಿತರಿಂದಲೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಕೊಲೆ

ಏನಿದು ಘಟನೆ?

ಕೆಲಸದ ನಿಮಿತ್ತ ಲಂಡನ್‌ನಲ್ಲಿದ್ದ ಸೌರಭ್ ಫೆಬ್ರವರಿ 24 ರಂದು ತನ್ನ ಆರು ವರ್ಷದ ಮಗಳ ಹುಟ್ಟುಹಬ್ಬಕ್ಕೆ ಮನೆಗೆ ಬಂದಿದ್ದರು. . ಆದರೆ ಅವನ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಆತನನ್ನು ಕೊಂದು ನಂತರ ಸೌರಭ್‌ನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ತುಂಬಿ ಸೀಲ್ ಮಾಡಿದ್ದಾರೆ. ಕೊಲೆಗಾತಿ ಮುಸ್ಕಾನ್ ಳ ತಾಯಿ ಮೂಲಕ ಈ ಭೀಕರ ಕೊಲೆ ಪ್ರಕರಣ ಬಯಲಾಗಿದೆ. ವಿಚಾರಣೆಯ ಸಮಯದಲ್ಲಿ, ಸೌರಭ್ ಹತ್ಯೆಯ ಸ್ವಲ್ಪ ಸಮಯದ ನಂತರ ಮುಸ್ಕಾನ್ ಮತ್ತು ಸಾಹಿಲ್ ಹಿಮಾಚಲಕ್ಕೆ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ. ಕೊಲೆಗಾರರು ಇಬ್ಬರು ಕುಟುಂಬಸ್ಥರನ್ನು ದಾರಿ ತಪ್ಪಿಸಲು ಸೌರಭ್‌ ಮೊಬೈಲ್‌ ತೆಗೆದುಕೊಂಡು ಫೋಟೋಗಳನ್ನು ಹಾಕಿದ್ದರು. ಸೌರಭ್ ರಜಪೂತ್ ಹಲವು ದಿನಗಳಿಂದ ಕಾಣದಿದ್ದಾಗ ಅವರ ಕುಟುಂಬ ದೂರು ದಾಖಲಿಸಿದ ಮೇಲೆ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.