ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air India Express: ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದ ಹೈಜಾಕ್‌ಗೆ ಯತ್ನ? ನಡೆದಿದ್ದೇನು?

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸೋಮವಾರ ಪ್ರಯಾಣಿಕನೊಬ್ಬ ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ ಎಂಬ ಆಘಾತಕಾರಿ ಅಂಶ ತಿಳಿದು ಬಂದಿದೆ. ಪ್ರಯಾಣಿಕನು ಇತರ ಎಂಟು ಸಹಚರರೊಂದಿಗೆ ಪ್ರಯಾಣಿಸುತ್ತಿದ್ದನೆಂದು ವರದಿಯಾಗಿದೆ.

ಲಖನೌ: ಬೆಂಗಳೂರಿನ (Bengaluru) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ (Varanasi) ಹೊರಟಿದ್ದ ಏರ್ ಇಂಡಿಯಾ (Air India) ಎಕ್ಸ್‌ಪ್ರೆಸ್ ವಿಮಾನದಲ್ಲಿ ಸೋಮವಾರ ಪ್ರಯಾಣಿಕನೊಬ್ಬ ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ ಎಂಬ ಆಘಾತಕಾರಿ ಅಂಶ ತಿಳಿದು ಬಂದಿದೆ. IX-1086 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನು ಕಾಕ್‌ಪಿಟ್ ಪ್ರದೇಶವನ್ನು ಪ್ರವೇಶಿಸಿದ್ದಲ್ಲದೆ, ಸರಿಯಾದ ಪಾಸ್‌ಕೋಡ್ ಅನ್ನು ಸಹ ನಮೂದಿಸಿದ್ದಾನೆ ಎಂದು ವರದಿಯಾಗಿದೆ. ಆದರೆ, ಸಂಭಾವ್ಯ ವಿಮಾನ ಹೈಜಾಕ್‌ ಭಯದಿಂದ ಕ್ಯಾಪ್ಟನ್ ಬಾಗಿಲು ತೆರೆಯಲು ನಿರಾಕರಿಸಿದ್ದ.

ಪ್ರಯಾಣಿಕನು ಇತರ ಎಂಟು ಸಹಚರರೊಂದಿಗೆ ಪ್ರಯಾಣಿಸುತ್ತಿದ್ದನೆಂದು ವರದಿಯಾಗಿದೆ. ವಾರಣಾಸಿಯಲ್ಲಿ ವಿಮಾನ ಇಳಿದಾಗ ಎಲ್ಲಾ ಒಂಬತ್ತು ಪ್ರಯಾಣಿಕರನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಗೆ ಹಸ್ತಾಂತರಿಸಲಾಯಿತು. ಕೆಲ ಸಮಯ ಸಹ ಪ್ರಯಾಣಿಕರಲ್ಲಿ ಆತಂಕ ಮೂಡಿತ್ತು. ಸದ್ಯ ವಿಮಾನ ಸೇಫ್‌ ಆಗಿ ಲ್ಯಾಂಡ್‌ ಆಗಿದೆ.

ಏರ್‌ ಇಂಡಿಯಾ ಈ ಕುರಿತು ಮಾಹಿತಿ ನೀಡಿದ್ದು, ವಾರಣಾಸಿಗೆ ಹೋಗುವ ನಮ್ಮ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯವನ್ನು ಹುಡುಕುತ್ತಿರುವಾಗ ಕಾಕ್‌ಪಿಟ್ ಪ್ರವೇಶ ಪ್ರದೇಶವನ್ನು ಸಮೀಪಿಸಿದ ಘಟನೆಯ ಕುರಿತು ಮಾಧ್ಯಮ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಬಲವಾದ ಸುರಕ್ಷತೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿವೆ. ಹಾಗಾಗಿ ಇದರಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ. ಈ ವಿಷಯವನ್ನು ಲ್ಯಾಂಡಿಂಗ್ ಸಮಯದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಮತ್ತು ಪ್ರಸ್ತುತ ಈ ಘಟನೆ ತನಿಖೆಯಲ್ಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Bomb Threat: ದೆಹಲಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ- ಹೈ ಅಲರ್ಟ್‌ ಘೋಷಣೆ

ಏರ್‌ ಇಂಡಿಯಾ ವಿಮಾನದಲ್ಲಿ ಕಳೆದ ವರ್ಷವೂ ಈ ರೀತಿ ಆಗಿತ್ತು. ಕೋಯಿಕ್ಕೋಡ್‌ನಿಂದ ಬಹರೇನ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ಬಾಗಿಲು ತೆರೆಯಲು ಪ್ರಯತ್ನಿಸಿದ ಮತ್ತು ನಿಲ್ಲಿಸಿದಾಗ ಸಹ ಪ್ರಯಾಣಿಕರೊಂದಿಗೆ ನಿಂದಿಸಿದ ಪ್ರಕರಣದಲ್ಲಿ 25 ವರ್ಷದ ವ್ಯಕ್ತಿ ವಿರುದ್ಧ ಸಹಾರ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಯಾಣಿಕ ಕೋಝಿಕ್ಕೋಡ್‌ನಿಂದ ಬಹ್ರೇನ್‌ಗೆ ಹಾರುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈ ಮೂಲದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸಹಾಯಕ ಭದ್ರತಾ ಅಧಿಕಾರಿಯೊಬ್ಬರು ಪೊಲೀಸ್ ದೂರು ದಾಖಲಿಸಿದ್ದರು.