ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪತಿ-ಪತ್ನಿ ನಡುವೆ ಮೂಗು ತುರಿಸೋ ಅತ್ತೆಯರೇ ಹುಷಾರ್‌! ಜಸ್ಟ್ ಮಿಸ್ಸಾದ್ರೂ ಕೇಸ್‌ ಆಗುತ್ತೆ

MIL tries to damage couple's affection:ದಂಪತಿಗಳ ಬಂಧವನ್ನು ಹಾಳು ಮಾಡಲು ಪ್ರಯತ್ನಿಸುವ ಮೂರನೇ ವ್ಯಕ್ತಿ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು ಎಂದು ವಕೀಲರೊಬ್ಬರು ಇನ್ಸ್ಟಾಗ್ರಾಂನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಲು ಮುಂದಾಗಿದೆ.

ನವದೆಹಲಿ: ಪತಿ-ಪತ್ನಿ ನಡುವಿನ ಬಾಂಧವ್ಯವು ಜನ್ಮ-ಜನ್ಮಗಳ ಅನುಬಂಧ ಎಂದು ಹೇಳಲಾಗುತ್ತದೆ. ಆದರೆ, ಇತ್ತೀಚೆಗೆ ಅನೇಕ ಮದುವೆಗಳು ಮುರಿದು ಬೀಳುತ್ತಿವೆ. ಕೆಲವು ಗಂಡ-ಹೆಂಡತಿಯ ನಡುವಿನ ಮನಸ್ತಾಪದಿಂದ ಮುರಿದು ಬಿದ್ದರೆ, ಇನ್ನೂ ಕೆಲವು ಮೂರನೇ ವ್ಯಕ್ತಿ ಅಥವಾ ಅತ್ತೆಯಿಂದ (MIL) ದಾಂಪತ್ಯ ಜೀವನ ಮುರಿದುಬೀಳುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಇದೀಗ ಈ ಪ್ರಕರಣಕ್ಕೆ ದೆಹಲಿ ಹೈಕೋರ್ಟ್ (Delhi High court) ಮಹತ್ವದ ತೀರ್ಪು ನೀಡಲು ಮುಂದಾಗಿದೆ. ದಂಪತಿಯ ಬಂಧವನ್ನು ಹಾಳು ಮಾಡಲು ಪ್ರಯತ್ನಿಸುವ ಮೂರನೇ ವ್ಯಕ್ತಿ ವಿರುದ್ಧ ಪ್ರಕರಣವನ್ನು ದಾಖಲಿಸಬಹುದಾಗಿದೆ. ಈ ನಿರ್ಧಾರವು ಸಂಗಾತಿಗಳು ತಮ್ಮ ಮದುವೆಯಲ್ಲಿ ಹಸ್ತಕ್ಷೇಪ ಮಾಡುವವರಿಂದಲೇ ಪರಿಹಾರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ (Viral News).

ಅತ್ತೆಯು ತಮ್ಮ ಮಗ ಮತ್ತು ಅವನ ಹೆಂಡತಿ ಅಥನಾ ಅವಳ ಮಗಳು-ಅಳಿಯನ ನಡುವೆ ಜಗಳವನ್ನು ಉಂಟು ಮಾಡಿದರೆ ಅವರನ್ನು ಸಹ ಹೊಣೆಗಾರರನ್ನಾಗಿ ಮಾಡಬಹುದೇ ಎಂಬ ಆಸಕ್ತಿದಾಯಕ ವಿಚಾರವನ್ನು ವಕೀಲರೊಬ್ಬರು ಮಾತನಾಡಿದ್ದಾರೆ. ತಮ್ಮ ಮಕ್ಕಳ ದಾಂಪತ್ಯ ಜೀವನಕ್ಕೆ ಹಾನಿ ಮಾಡುವ ಅಥವಾ ಉದ್ವಿಗ್ನತೆ ಸೃಷ್ಟಿಸುವುದನ್ನು ತಪ್ಪಿಸಲು ಅತ್ತೆಗೆ ಖಡಕ್ ವಾರ್ನಿಂಗ್ ನೀಡಲಾಗಿದೆ.

ವಿಡಿಯೊ ವೀಕ್ಷಿಸಿ:



ವಕೀಲರು ಈ ಬಗ್ಗೆ ಮುಖ್ಯ ಅಂಶಗಳನ್ನು ವಿವರಿಸಿದ್ದಾರೆ. ಯಾರಾದರೂ ತಮ್ಮ ಹಕ್ಕನ್ನು ಹೇಗೆ ನೋಂದಾಯಿಸಬಹುದು ಎಂಬ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಇದು ಭಾರತದ ಹೊರಗೆ ತುಂಬಾ ಸಾಮಾನ್ಯವಾದ ವಿಚಾರ. ಆದರೆ, ಭಾರತದಲ್ಲಿನ ನ್ಯಾಯಾಲಯಗಳು ಸಿವಿಲ್ ಮೊಕದ್ದಮೆ ಹೂಡಲು ಈ ಕಾರಣವನ್ನು ಪರಿಗಣಿಸಬಹುದು. ದೆಹಲಿ ಹೈಕೋರ್ಟ್ ಅಂತಹ ಹಕ್ಕನ್ನು ಪಡೆಯಬಹುದು ಎಂಬ ತೀರ್ಪು ನೀಡಿದ ನಂತರ, ದಾಂಪತ್ಯದಲ್ಲಿ ಹಸ್ತಕ್ಷೇಪ ಮಾಡಿದ ನಂತರ ಮೂರನೇ ವ್ಯಕ್ತಿ ವಿರುದ್ಧ ಮೊಕದ್ದಮೆ ಹೂಡಬಹುದು ಎಂದು ಇನ್ಸ್ಟಾಗ್ರಾಂನಲ್ಲಿ ವಕೀಲರು ವಿವರಿಸಿದ್ದಾರೆ.

ಅತ್ತೆಯ ಉದ್ದೇಶಪೂರ್ವಕ ಹಸ್ತಕ್ಷೇಪ, ಅತ್ತೆ ಅಥವಾ ಮೂರನೇ ವ್ಯಕ್ತಿ ವೈವಾಹಿಕ ಸಂಬಂಧವನ್ನು ನಾಶಮಾಡುವ ಉದ್ದೇಶದಿಂದ ವರ್ತಿಸಿದ್ದಾರೆ ಅನ್ನೋದನ್ನು ಸಾಕ್ಷಿ ಸಹಿತ ಪ್ರೂವ್ ಮಾಡಬೇಕು. ತಾವು ಗಂಡ-ಹೆಂಡತಿ ಚೆನ್ನಾಗಿದ್ದೆವು, ಆದರೆ, ಅತ್ತೆಯಿಂದ ನಮ್ಮಲ್ಲಿ ಸಮಸ್ಯೆ ಶುರುವಾಯಿತು ಅನ್ನೋದನ್ನು ಸಾಬೀತುಪಡಿಸಬೇಕು ಎಂದು ವಕೀಲರು ವಿವರಿಸಿದ್ದಾರೆ.

ಅತ್ತೆ ತಮ್ಮ ದಾಂಪತ್ಯ ಜೀವನಕ್ಕೆ ಅಡ್ಡಿಪಡಿಸಿದ್ದಾರೆ ಅನ್ನೋದನ್ನು ಸಾಬೀತಪಡಿಸಬೇಕು. ಇದಕ್ಕಾಗಿ ಸ್ನೇಹಿತರು, ನೆರೆಮನೆಯವರು ಅಥವಾ ಕುಟುಂಬ ಸದಸ್ಯರ ಸಾಕ್ಷಿ ಹೇಳಿಕೆಗಳು, ಫೋಟೋ ಅಥವಾ ವಿಡಿಯೊಗಳು, ಸಂದೇಶಗಳು ಅಥವಾ ದಾಖಲೆಗಳಿದ್ದರೆ ಸಿವಿಲ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಬಹುದು. ಈ ಮೂಲಕ ನೀವು ಹಣಕಾಸಿನ ಪರಿಹಾರವನ್ನು ಕೋರಬಹುದು.

ಇನ್ಸ್ಟಾಗ್ರಾಂನಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ಮಂದಿ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಪತಿಯೇ ಮೂರನೇ ವ್ಯಕ್ತಿ ಜೊತೆ ಸೇರಿದರೆ ಏನು ಮಾಡುವುದು ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ದಂಪತಿಗಳ ಮಧ್ಯೆ ಡಿವೋರ್ಸ್ ಆಗಲು ಅತ್ತೆ, ನಾದಿನಿ ಮತ್ತು ಗಂಡಂದಿರೇ ಕಾರಣೆ ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ.

ಇಂತಹ ತೀರ್ಪು ಬಂದರೆ, ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತವೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಅಂದಹಾಗೆ, ಈ ಹೊಸ ಕಾನೂನಿನ ಅಂತಿಮ ತೀರ್ಪು ಇನ್ನೂ ಬಾಕಿಯಿದೆ ಎಂದು ವಕೀಲರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಛೇ... ಇವೆರೆಂಥಾ ಮನಷ್ಯರು! ಗಾಯಗೊಂಡ ನವಿಲನ್ನು ರಕ್ಷಿಸುವ ಬದಲು ಗರಿಗಳನ್ನು ಕಿತ್ತ ಜನ