ಜೈಪುರ: ಮಿಸ್ ಯೂನಿವರ್ಸ್ ಇಂಡಿಯಾ 2026 ರ ಗ್ರ್ಯಾಂಡ್ ಫಿನಾಲೆ (Miss Universe India 2026 ) ಭಾನುವಾರ ಸಂಜೆ ಜೈಪುರದಲ್ಲಿ ನಡೆಯಿತು. ಈ ಬಾರಿ ಕೇರಳದ ಕಾಜಿಯಾ ಲಿಜ್ ಮೆಜೋ 2026 ರ (Kaziah Liz Mejo) ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಅಲಂಕರಿಸಿದರು. ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಈಗ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ 52 ಫೈನಲಿಸ್ಟ್‌ಗಳು ಭಾಗವಹಿಸಿದ್ದರು. 19 ವರ್ಷದ ಕಾಜಿಯಾ ಮಾವೆಲಿಕ್ಕರದ ಕಾನೂನು ವಿದ್ಯಾರ್ಥಿನಿ ಮತ್ತು ರೂಪದರ್ಶಿಯಾಗಿದ್ದಾರೆ. ಅವರು 2025 ರಲ್ಲಿ ಮಿಸ್ ಟೀನ್ ಇಂಟರ್ನ್ಯಾಷನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಮೊದಲ ರನ್ನರ್ ಅಪ್ ಮತ್ತು ಮಿಸ್ ಇಂಟರ್ನ್ಯಾಷನಲ್ ಇಂಡಿಯಾ 2026 ಪ್ರಶಸ್ತಿಯನ್ನು ತಮಿಳುನಾಡಿನ ವೈಷ್ಣವಿ ಗಣೇಶ್ ಪಡೆದರು . ಗುಜರಾತ್‌ನ ಅನುಶ್ರೀ ಸತವ್ಲೇಕರ್ ಎರಡನೇ ರನ್ನರ್ ಅಪ್ ಆಗಿದ್ದಾರೆ. 2026 ರ ಅಂತಿಮ ಸ್ಪರ್ಧೆಯಲ್ಲಿ 1994 ರಲ್ಲಿ ಭಾರತದ ಮೊದಲ ಮಿಸ್ ಯೂನಿವರ್ಸ್ ಆದ ಸುಶ್ಮಿತಾ ಸೇನ್ ನೇತೃತ್ವದ ಉನ್ನತ ಮಟ್ಟದ ತೀರ್ಪುಗಾರರ ತಂಡವಿತ್ತು. ಈ ಸಮಿತಿಯಲ್ಲಿ 2001 ರ ಮಿಸ್ ಯೂನಿವರ್ಸ್ ಇಂಡಿಯಾದ ಮಾಜಿ ಪ್ರಶಸ್ತಿ ವಿಜೇತರಾದ ಸೆಲೀನಾ ಜೇಟ್ಲಿ ಮತ್ತು 2015 ರ ಮಿಸ್ ಯೂನಿವರ್ಸ್ ಇಂಡಿಯಾದ ಉರ್ವಶಿ ರೌಟೇಲಾ ಕೂಡ ಇದ್ದರು.
ತೀರ್ಪುಗಾರರ ಇತರ ಸದಸ್ಯರಲ್ಲಿ ರಿಯಾ ಸಿಂಘಾ, ಮಿಸ್ ಯೂನಿವರ್ಸ್ ಇಂಡಿಯಾ 2024; ಚಲನಚಿತ್ರ ನಿರ್ಮಾಪಕಿ ಪ್ರಜ್ಞಾ ಕಪೂರ್; ಉದ್ಯಮಿ ವಿಶಾ ಲಾಧಿಯಾ; ಮಿಸ್ ಚಾರ್ಮ್ 2025 ಅನ್ನಾ ಬ್ಲಾಂಕೊ; ಮತ್ತು ಚರ್ಮರೋಗ ತಜ್ಞ ಡಾ. ಸ್ತುತಿ ಖರೆ ಶುಕ್ಲಾ ಇತರರು ಸೇರಿದ್ದಾರೆ.
ಮದುವೆಯಾದ 5 ತಿಂಗಳಲ್ಲೇ ಶವವಾಗಿ ಪತ್ತೆಯಾದ ಎಂಬಿಎ ಪದವೀಧರೆ, ಮಾಜಿ ಮಿಸ್ ಪುಣೆ ತ್ವಿಶಾ ಶರ್ಮಾ ಯಾರು?
ಮಿಸ್ ಯೂನಿವರ್ಸ್ ಇಂಡಿಯಾ ಎಂಬುದು ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದ ಪ್ರತಿನಿಧಿಯನ್ನು ಆಯ್ಕೆ ಮಾಡುವ ರಾಷ್ಟ್ರೀಯ ಸ್ಪರ್ಧೆಯಾಗಿದೆ. ಗ್ಲಮಾನಂದ ಗ್ರೂಪ್ 2024 ರಲ್ಲಿ ಭಾರತೀಯ ಫ್ರಾಂಚೈಸಿಯನ್ನು ವಹಿಸಿಕೊಂಡಾಗಿನಿಂದ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಕಾಜಿಯಾ ಲಿಕ್ಸ್ ಮೆಜೋ ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.