ನವದೆಹಲಿ, ನ.11: ಈಗಾಗಲೇ ನಂದಿನಿ ಹಾಲಿನ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನಸಾಮಾನ್ಯರಿಗೆ ಮತ್ತೊಂದು ಬರೆ ಬಿದ್ದಿದೆ. ದೇಶದ ಪ್ರಸಿದ್ಧ ಡೈರಿ ಬ್ರ್ಯಾಂಡ್ 'ಮದರ್ ಡೈರಿ' (Mother Dairy) ಕೂಡ ಬೆಲೆ ಏರಿಕೆಯ ಹಾದಿ ಹಿಡಿದಿದ್ದು, ದೇಶಾದ್ಯಂತ ಹಾಲಿನ ದರ ಮತ್ತಷ್ಟು ದುಬಾರಿಯಾಗಲಿದೆ. ಹಾಲಿನ ದರವನ್ನು ಲೀಟರ್ಗೆ 2 ರಿಂದ 4 ರೂಪಾಯಿಗಳಷ್ಟು ಹೆಚ್ಚಿಸಿದೆ. ಪರಿಷ್ಕೃತ ದರಗಳು ನ. 12 ರಿಂದಲೇ ಜಾರಿಗೆ ಬರಲಿವೆ.
ನಂದಿನಿ ಬ್ರ್ಯಾಂಡ್ನ ಬೆಲೆ ಏರಿಕೆಯಿಂದ ಜನರು ಖಾಸಗಿ ಬ್ರ್ಯಾಂಡ್ಗಳತ್ತ ಮುಖ ಮಾಡಿದ್ದರು ಆದರೆ ಇದೀಗ ಮದರ್ ಡೈರಿ ಕೂಡಾ ಹಾಲಿನ ದರ ಏರಿಕೆ ಮಾಡಿದ್ದು ಮಧ್ಯಮ ವರ್ಗದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತಕ ವರ್ಷದಲ್ಲಿ ಎರಡನೇ ಬಾರಿಗೆ ಮದರ್ ಡೈರಿ ತನ್ನ ದರವನ್ನು ಏರಿಕೆ ಮಾಡಿದೆ. ಕೊನೆಯದಾಗಿ ಮೇ 14, 2026 ರಂದು ಬೆಲೆಗಳನ್ನು ಹೆಚ್ಚಿಸಿತ್ತು.
ರಾಜ್ಯ ಸರ್ಕಾರ ಮತ್ತು ಕೆಎಂಎಫ್ ನವೆಂಬರ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8 ರಿಂದ ₹12 ರವರೆಗೆ ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ಗೆ ₹14 ರಷ್ಟು ಹೆಚ್ಚಿಸಿತ್ತು.
ನಂದಿನಿ ಹಾಲಿನ ಪ್ಯಾಕೆಟ್ನಲ್ಲಿ ಸತ್ತ ಜೇಡ ಪತ್ತೆ; ಮಹಿಳೆಯಿಂದ ಕೆಎಂಎಫ್ಗೆ ದೂರು ದಾಖಲು
ಹೈನುಗಾರ ರೈತರಿಂದ ಹಾಲು ಖರೀದಿಸುವ ವೆಚ್ಚ ಹಾಗೂ ರವಾನೆ ಮುಂತಾದ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಕಾರಣದಿಂದಾಗಿ ಈ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಯಿತು ಎಂದು ಕಂಪನಿ ಮೂಲಗಳು ತಿಳಿಸಿವೆ.
ಯಾವ ಹಾಲಿನ ಬೆಲೆಯಲ್ಲಿ ಎಷ್ಟು ಹೆಚ್ಚಳ?
ಫುಲ್ ಕ್ರೀಮ್ ಹಾಲು ಪ್ರತಿ ಲೀಟರ್ಗೆ 72 ರಿಂದ 76 ರೂ. ಗೆ ಹೆಚ್ಚಳ.
ಟೋನ್ಡ್ ಹಾಲು ಲೀಟರ್ಗೆ 60 ರಿಂದ 62 ರೂ.
ಡಬಲ್ ಟೋನ್ದ್ ಹಾಲು 56 ರೂ.
ಹಸುವಿನ ಹಾಲು ಪ್ರತಿ ಲೀಟರ್ಗೆ 3 ರೂ. ಗೆ ಏರಿಕೆಯಾಗಿ 65 ರೂ. ಗೆ ಮಾರಾಟ ಮಾಡಲಾಗುತ್ತಿದೆ.
ಟೋಕನ್ ಹಾಲು 60 ರೂ ಗೆ ಹೆಚ್ಚಳ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ರೈತರಿಂದ ಹಾಲು ಸಂಗ್ರಹಿಸುವ ವೆಚ್ಚ ಶೇ 7 ರಿಂದ 8 ರಷ್ಟು ಏರಿಕೆಯಾಗಿದೆ. ಮದರ್ ಡೈರಿ ತನ್ನ ಒಟ್ಟು ಆದಾಯದ ಶೇಕಡಾ 75 ರಿಂದ 80 ರಷ್ಟು ಮೊತ್ತವನ್ನು ನೇರವಾಗಿ ರೈತರಿಗೇ ವರ್ಗಾಯಿಸುವುದರಿಂದ, ವೆಚ್ಚ ಸರಿದೂಗಿಸಲು ಅನಿವರ್ಯವಾಗಿರುವಾಗಿ ಗ್ರಾಹಕರ ಮೇಲೆ ಬೆಲೆ ಹೊರೆ ಹಾಕಲಾಗಿದೆ.
1974ರಲ್ಲಿ ಕಾರ್ಯಾರಂಭಗೊಂಡ ಮದರ್ ಡೈರಿಯ ರಾಷ್ಟ್ರೀಯು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಂಗಸಂಸ್ಥೆಯಾಗಿ ಕಾರ್ಯಾನಿರ್ವಹಿಸುತ್ತಿದೆ. ಮದರ್ ಡೈರಿ ಕಂಪನಿಯು ದಹಲಿ ಎನ್ಸಿಆರ್ ಮಾರುಕಟ್ಟೆಯಲ್ಲಿ ತನ್ನದೆ ಮಳಿಗೆ, ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ಪ್ರತಿದಿನ ಸುಮಾರು 35 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತದೆ. ಇದರ ಒಟ್ಟು ದೈನಂದಿನ ಹಾಲಿನ ಮಾರಾಟವು 50 ಲಕ್ಷ ಲೀಟರ್ಗಿಂತ ಹೆಚ್ಚಾಗಿದೆ.