ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಯೋ ಐಪಿಒ ಘೋಷಿಸಿದ ಮುಖೇಶ್‌ ಅಂಬಾನಿ; 27 ಕೋಟಿ ರೂ. ಷೇರುಗಳ ಬಿಡುಗಡೆಗೆ ಸಿದ್ಧತೆ

ದೇಶದ ಸ್ಟಾಕ್‌ ಮಾರ್ಕೆಟ್‌ ಇತಿಹಾಸದಲ್ಲೇ ಅತ್ಯಂತ ಬಹುನಿರೀಕ್ಷಿತ ಐಪಿಒಗಳಲ್ಲಿ ಒಂದೆಂದು ಪರಿಗಣಿಸಲಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಪ್ರಕ್ರಿಯೆಯು ಅಧಿಕೃತವಾಗಿ ಆರಂಭಗೊಂಡಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಆಡಳಿತ ಮಂಡಳಿಯು, 27 ಕೋಟಿ ಈಕ್ವಿಟಿ ಷೇರುಗಳ ಫ್ರೆಶ್ ಇಶ್ಯೂಗೆ (ಹೊಸ ಷೇರುಗಳ ವಿತರಣೆ) ಅನುಮೋದನೆ ನೀಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್, ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಮಾಹಿತಿ ನೀಡಿದೆ.

ಸಂಗ್ರಹ ಚಿತ್ರ

ಮುಂಬೈ 19 ಜೂನ್ 2026: ದೇಶದ ಸ್ಟಾಕ್‌ ಮಾರ್ಕೆಟ್‌ ಇತಿಹಾಸದಲ್ಲೇ ಅತ್ಯಂತ ಬಹುನಿರೀಕ್ಷಿತ ಐಪಿಒಗಳಲ್ಲಿ ಒಂದೆಂದು ಪರಿಗಣಿಸಲಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ (Jio) ಐಪಿಒ ಪ್ರಕ್ರಿಯೆಯು ಅಧಿಕೃತವಾಗಿ ಆರಂಭಗೊಂಡಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಆಡಳಿತ ಮಂಡಳಿಯು, 27 ಕೋಟಿ ಈಕ್ವಿಟಿ ಷೇರುಗಳ ಫ್ರೆಶ್ ಇಶ್ಯೂಗೆ (ಹೊಸ ಷೇರುಗಳ ವಿತರಣೆ) ಅನುಮೋದನೆ ನೀಡಿದೆ ಎಂದು ರಿಲಯನ್ಸ್ (Mukesh Ambani) ಇಂಡಸ್ಟ್ರೀಸ್, ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಮಾಹಿತಿ ನೀಡಿದೆ. ಈ ಷೇರುಗಳ ಮುಖಬೆಲೆ (ಫೇಸ್ ವ್ಯಾಲ್ಯೂ) ಪ್ರತಿ ಷೇರಿಗೆ 10 ರೂಪಾಯಿ ಆಗಿರಲಿದ್ದು, ಇಶ್ಯೂ ದರವನ್ನು ಬುಕ್ ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ನಿರ್ಧರಿಸಲಾಗುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಜಿಯೋ ಪ್ಲಾಟ್‌ಫಾರ್ಮ್ಸ್ ಮಂಡಳಿಯು ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ಗೆ (DRHP) ಅನುಮೋದನೆ ನೀಡಿದ್ದು, ಇದನ್ನು ಇಂದು ಸೆಬಿ (SEBI) ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಐಪಿಒ ಅಗತ್ಯ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಕಂಪನಿಯು ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಎಜಿಎಂನಲ್ಲಿ ಮುಖೇಶ್ ಅಂಬಾನಿ ಅವರು ಇದನ್ನು " ರಿಲಯನ್ಸ್ ಕುಟುಂಬ ಮತ್ತು ಅದರ ಲಕ್ಷಾಂತರ ಷೇರುದಾರರಿಗೆ ಒಂದು ಭಾವುಕ ಕ್ಷಣʼʼ ಎಂದು ಬಣ್ಣಿಸಿದರು. ರಿಲಯನ್ಸ್ ಮತ್ತು ಅದರ ಷೇರುದಾರರ ನಡುವಿನ ಸಂಬಂಧವು ಹೆಮ್ಮೆ, ನಂಬಿಕೆ, ಗೌರವ ಮತ್ತು ಬೆಳವಣಿಗೆಯನ್ನು ಆಧರಿಸಿದ ಆಳವಾದ ಹಾಗೂ ಪವಿತ್ರವಾದ ಸಂಬಂಧವಾಗಿದೆ ಎಂದು ಅವರು ಹೇಳಿದರು.

"ಜಿಯೋ ಐಪಿಒ ಭಾರತವು ಜಾಗತಿಕ ಮಟ್ಟದ, ಜಾಗತಿಕ ಸಾಮರ್ಥ್ಯದ ಮತ್ತು ಜಾಗತಿಕ ಮೌಲ್ಯದ ತಂತ್ರಜ್ಞಾನ ಕಂಪನಿಗಳನ್ನು ನಿರ್ಮಿಸಬಲ್ಲದು ಎಂಬುದನ್ನು ಜಗತ್ತಿಗೆ ತೋರಿಸಿಕೊಡಲಿದೆ. ಜಿಯೋದ ಭವಿಷ್ಯವು ಇನ್ನಷ್ಟು ಉಜ್ವಲವಾಗಿದೆ ಎಂದು ನಾನು ನಿಮಗೆ ಮತ್ತು ಎಲ್ಲಾ ಹೊಸ ಹೂಡಿಕೆದಾರರಿಗೆ ಭರವಸೆ ನೀಡುತ್ತೇನೆ," ಎಂದು ಮುಖೇಶ್ ಅಂಬಾನಿ ತಿಳಿಸಿದರು. " ಈ ವರ್ಷದ ಮೌಲ್ಯ ವೃದ್ಧಿಯ (Value Creation) ಅತ್ಯಂತ ಪ್ರಮುಖ ಮೈಲಿಗಲ್ಲು ಎಂದರೆ ಅದು ಉದ್ದೇಶಿತ ಜಿಯೋ ಐಪಿಒ ಆಗಿದೆ. ಇದು ರಿಲಯನ್ಸ್ ಷೇರುದಾರರಿಗೆ ದೊಡ್ಡ ಮಟ್ಟದ ಮೌಲ್ಯವನ್ನು ಅನ್‌ಲಾಕ್ ಮಾಡುವುದಲ್ಲದೆ, ಹೊಸ ಹೂಡಿಕೆದಾರರಿಗೆ ಆಕರ್ಷಕ ಹೂಡಿಕೆಯ ಅವಕಾಶವನ್ನು ನೀಡಲಿದೆʼʼ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ಚಿತ್ರಣವನ್ನು ಬದಲಾಯಿಸುವಲ್ಲಿ ಜಿಯೋ ನಿರ್ಣಾಯಕ ಪಾತ್ರ ವಹಿಸಿದೆ. ಜಿಯೋ ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ ವಾಯ್ಸ್ ಕರೆಗಳು ದುಬಾರಿಯಾಗಿದ್ದವು, ಡೇಟಾ ದುಬಾರಿಯಾಗಿತ್ತು ಮತ್ತು ಇಂಟರ್ನೆಟ್ ವೇಗವು ಅತ್ಯಂತ ನಿಧಾನವಾಗಿತ್ತು. ಆದರೆ ಜಿಯೋ ವಾಯ್ಸ್ ಕರೆಗಳನ್ನು ಉಚಿತಗೊಳಿಸಿತು ಮತ್ತು ಹೈ-ಸ್ಪೀಡ್ ಡೇಟಾವನ್ನು ಜನರಿಗೆ ಕೈಗೆಟುಕುವಂತೆ ಮಾಡಿತು ಎಂದು ಮುಖೇಶ್ ಅಂಬಾನಿ ಸ್ಮರಿಸಿದರು.

ಇಂದು ಜಿಯೋದ ಗ್ರಾಹಕರ ಸಂಖ್ಯೆ 52.4 ಕೋಟಿಯನ್ನು ಮೀರಿದೆ. ಕಂಪನಿಯ 5ಜಿ ಚಂದಾದಾರರ ಸಂಖ್ಯೆ 26.8 ಕೋಟಿಗಿಂತ ಹೆಚ್ಚಿದ್ದು, ಇದು ಚೀನಾದ ಹೊರಗೆ ಯಾವುದೇ ಒಂದು ದೇಶದ ಆಪರೇಟರ್ ಹೊಂದಿರುವ ಅತಿ ದೊಡ್ಡ ಗ್ರಾಹಕ ಬಳಗವಾಗಿದೆ. ಜಿಯೋ ಏರ್‌ಫೈಬರ್ (JioAirFiber) ಕೂಡ 1.3 ಕೋಟಿ ಮನೆಗಳನ್ನು ತಲುಪಿದ್ದು, ಜಿಯೋ ವಿಶ್ವದ ಅತಿ ದೊಡ್ಡ ಫಿಕ್ಸ್ಡ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಆಪರೇಟರ್ ಆಗಿ ಹೊರಹೊಮ್ಮಿದೆ.

ಜಿಯೋದ ಮುಂದಿನ ಬೆಳವಣಿಗೆಯ ಪ್ರಯಾಣವು ಐದು ಪ್ರಮುಖ ಬದ್ಧತೆಗಳನ್ನು ಆಧರಿಸಿರುತ್ತದೆ. ಅವುಗಳೆಂದರೆ:

ಜಿಯೋ ಟ್ರೂ 5ಜಿ (Jio True 5G) ಯನ್ನು ಭಾರತದ ಮುಂದಿನ ಡಿಜಿಟಲ್ ಜಿಗಿತದ ಮುನ್ನುಡಿಯನ್ನಾಗಿಸುವುದು.

Reliance Jio: ಜಿಯೋ ಪ್ಲಾಟ್‌ಫಾರ್ಮ್ಸ್ ಮೂರನೇ ತ್ರೈಮಾಸಿಕ ಲಾಭ ರೂ. 7,629 ಕೋಟಿಗೆ ಜಿಗಿತ

ಜಿಯೋ ಏರ್‌ಫೈಬರ್ ಮೂಲಕ ದೇಶದ ಪ್ರತಿಯೊಂದು ಭಾಗಕ್ಕೂ ಹೈ-ಸ್ಪೀಡ್ ಹೋಮ್ ಬ್ರಾಡ್‌ಬ್ಯಾಂಡ್ ತಲುಪಿಸುವುದು. ಭಾರತೀಯ ಉದ್ಯಮಗಳು ಮತ್ತು ಸಣ್ಣ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸುವುದು.

ಪ್ರತಿಯೊಬ್ಬರಿಗೂ ಮತ್ತು ಎಲ್ಲೆಡೆ ಕೃತಕ ಬುದ್ಧಿಮತ್ತೆ (AI) ಯನ್ನು ತಲುಪಿಸುವುದು. ಭಾರತದ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ಎಂದು ಮುಖೇಶ್‌ ಅಂಬಾನಿಯವರು ವಿವರಿಸಿದರು.

Vishakha Bhat Heggar

View all posts by this author