ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಯದಿಂದ ಇಂಜೆಕ್ಷನ್ ಹಾಕಿಕೊಳ್ಳದ 9 ವರ್ಷದ ಬಾಲಕಿ ರೇಬಿಸ್‌ಗೆ ಬಲಿ

ಮಹಾರಾಷ್ಟ್ರದ ಪಾಲ್ಘರ್‌ನ ಒಂಬತ್ತು ವರ್ಷದ ಬಾಲಕಿ ಮುಂಬೈನ ಆಸ್ಪತ್ರೆಯಲ್ಲಿ ರೇಬೀಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಮೃತಳನ್ನು ನಲಸೋಪರಾ ಪಶ್ಚಿಮದಲ್ಲಿರುವ 'ಸುಬೋಧ್ ಸಾಗರ್' ವಸತಿ ಸೊಸೈಟಿಯ ನಿವಾಸಿ ಕಾಶಿಶ್ ಸಹಾನಿ ಎಂದು ಗುರುತಿಸಲಾಗಿದೆ. ನಾಯಿ ಕಚ್ಚಿದ ಬಳಿಕ ಆಕೆಗೆ ಇಂಜೆಕ್ಷನ್‌ ಹಾಕಿಸಲು ಬಾಲಕಿ ಭಯಪಟ್ಟಿದ್ದಳು.

ಸಂಗ್ರಹ ಚಿತ್ರ

ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನ ಒಂಬತ್ತು ವರ್ಷದ ಬಾಲಕಿ ಮುಂಬೈನ ಆಸ್ಪತ್ರೆಯಲ್ಲಿ ರೇಬೀಸ್‌ಗೆ (Rabies) ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಮೃತಳನ್ನು ನಲಸೋಪರಾ ಪಶ್ಚಿಮದಲ್ಲಿರುವ 'ಸುಬೋಧ್ ಸಾಗರ್' ವಸತಿ ಸೊಸೈಟಿಯ ನಿವಾಸಿ ಕಾಶಿಶ್ ಸಹಾನಿ ಎಂದು ಗುರುತಿಸಲಾಗಿದ್ದು, ಮದರ್ ಮೇರಿ ಶಾಲೆಯಲ್ಲಿ IV ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಆರು ತಿಂಗಳ ಹಿಂದೆ ಕಾಶಿಶ್ ತನ್ನ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯ ಉಗುರಿನಿಂದ ಗೀರು ಬಿದ್ದು ಮರುದಿನವೇ ಚಿಕಿತ್ಸಾಲಯಕ್ಕೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.

ನಾಯಿ ಕಚ್ಚಿದ ಬಳಿಕ ಆಕೆಗೆ ಇಂಜೆಕ್ಷನ್‌ ಹಾಕಿಸಲು ಬಾಲಕಿ ಭಯಪಟ್ಟಿದ್ದಾಳೆ. ಪೋಷಕರು ಲಸಿಕೆ ಹಾಕಿಸದೆ ಹಾಗೆಯೇ ಮನೆಗೆ ಕಡೆದುಕೊಂಡು ಬಂದರು. ಲವು ದಿನಗಳ ಹಿಂದೆ ಕಶಿಶ್ ಆರೋಗ್ಯ ಹದಗೆಟ್ಟಿತ್ತು, ಊಟ ಮಾಡುವುದನ್ನು, ಕುಡಿಯುವುದನ್ನು ಕೂಡ ಬಿಟ್ಟಿದ್ದಳು, ಕಣ್ಣುಗಳು ಕೆಂಪಾಗಿದ್ದವು. ಆಕೆಯ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಆಕೆಯ ಕುಟುಂಬವು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕಸ್ತೂರಬಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಸೋಮವಾರ(ಮಾರ್ಚ್​ 23)ರಂದು ಆಕೆ ಕೊನೆಯುಸಿರೆಳೆದಿದ್ದಾಳೆ.

ಕಾಶಿಶ್ ಅವರ ಆರೋಗ್ಯ ವರದಿಯಲ್ಲಿ ರೇಬೀಸ್ ಸೋಂಕು ಅವರ ಸಾವಿಗೆ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಕೆಯ ಸಾವಿನ ಬಳಿಕ ಪುರಸಭೆಯು ಅವರ ಕುಟುಂಬ ಸದಸ್ಯರು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದ ನೆರೆಹೊರೆಯವರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ನಾಯಿ ಅಥವಾ ಬೆಕ್ಕುಗಳಿಂದ ಕಚ್ಚುವಿಕೆ ಅಥವಾ ಸಣ್ಣ ಗೀರುಗಳನ್ನು ನಿರ್ಲಕ್ಷಿಸಬೇಡಿ ಎಂದು ವೈದ್ಯರು ಜನರಲ್ಲಿ ಮನವಿ ಮಾಡಿದ್ದಾರೆ.

ಕೊಲಂಬಿಯಾದಲ್ಲಿ ಮಿಲಿಟರಿ ವಿಮಾನ ಪತನ, 66 ಮಂದಿ ಸಾವು: ಭಯಾನಕ ವಿಡಿಯೊ ವೈರಲ್‌

ಹೆಣ್ಣು ಮಗುವನ್ನು ಕೊಂದ ತಂದೆ!

ಹೆಣ್ಣು ಮಗು ಹುಟ್ಟಿದೆ ಎಂದು 15 ದಿನದ ಹಸುಗೂಸನ್ನು ಕೊಲೆ ಮಾಡಿದ್ದ ಪಾಪಿ ತಂದೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿದೆ. ಹದಿನೈದು ದಿನದ ನವಜಾತ ಶಿಶು ಪ್ರಿಯಾಂಕಾ(15 ದಿನ) ಕೊಲೆಯಾದ ದುರ್ದೈವಿ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಭೀಮರಾಯ ಚಿಪ್ಪಾಡಿ ಕೊಲೆ ಮಾಡಿರುವ ಪಾಪಿ ತಂದೆ. ಸ್ವಂತ ತಂದೆಯಿಂದಲೇ ಮಗುವಿನ ಹತ್ಯೆ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

Vishakha Bhat Heggar

View all posts by this author