ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಜೆಪಿ ನಾಯಕರಿಗೆ ತಪ್ಪದ ಸಂಕಷ್ಟ: ಸೌರವ್‌ ದಾಸ್‌, ಅಭಿಜಿತ್‌ ದೀಪ್ಕೆ, ಆಶುತೋಷ್‌ ರಾಂಕಾ ವಿರುದ್ಧ ಲುಕ್‌ ಔಟ್‌ ಸರ್ಕ್ಯುಲರ್‌

LOCs against CJP leadres: ಅಕ್ಟೋಬರ್‌ 2ರಂದು ಮಹಾರಾಷ್ಟ್ರದ ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿ ನಡೆಸಿದ ಪ್ರತಿಭಟನೆ ಸಂಬಂಧ ಇದೀಗ ಸಿಜೆಪಿ ನಾಯಕರಾದ ಸೌರವ್‌ ದಾಸ್‌, ಅಭಿಜಿತ್‌ ದೀಪ್ಕೆ, ಆಶುತೋಷ್‌ ರಾಂಕಾ ಅವರಿಗೆ ಪೊಲೀಸರು ಲುಕ್‌ ಔಟ್‌ ಸರ್ಕ್ಯುಲರ್‌ ನೀಡಿದ್ದಾರೆ.

ಸೌರವ್‌ ದಾಸ್‌, ಅಭಿಜಿತ್‌ ದೀಪ್ಕೆ ಮತ್ತು ಆಶುತೋಷ್‌ ರಾಂಕಾ (ಸಂಗ್ರಹ ಚಿತ್ರ)

ಮುಂಬೈ, ನ. 26: ವಿಡಂಬನಾತ್ಮಕ ಆನ್‌ಲೈನ್‌ ಅಭಿಯಾನವಾಗಿ ಆರಂಭವಾದ ಕಾಕ್ರೋಚ್‌ ಜನತಾ ಪಾರ್ಟಿ (Cockroach Janta Party) ಕೆಲವೇ ದಿನಗಳಲ್ಲಿ ಯುವಜನತೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜತೆಗ ದೆಹಲಿಯಲ್ಲಿ ನೀಟ್‌ ಅಕ್ರಮದ ವಿರುದ್ದ ದೊಡ್ಡ ಮಟ್ಟದ ಹೋರಾಟ ನಡೆಸಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೂ ಕಾರಣವಾಯ್ತು. ಆದರೆ ಬಳಿಕ ಅದೇಕೊ ಸಿಜೆಪಿ ಮಂಕಾಗತೊಡಗಿತು. ಎಸ್‌ಐಆರ್‌ ಹೋರಾಟದ ಹೆಸರಿನಲ್ಲಿ ಯುವಜನತೆಯ ದಾರಿ ತಪ್ಪಿಸಲು ಹೋಗಿ ಸರಿಯಾದ ಹೊಡೆತ ಬಿತ್ತು. ಅಕ್ಟೋಬರ್‌ 2ರಂದು ಮಹಾರಾಷ್ಟ್ರದ ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿ ನಡೆಸಿದ ಪ್ರತಿಭಟನೆ ಸಂಬಂಧ ಇದೀಗ ಸಿಜೆಪಿ ನಾಯಕರಾದ ಸೌರವ್‌ ದಾಸ್‌, ಅಭಿಜಿತ್‌ ದೀಪ್ಕೆ, ಆಶುತೋಷ್‌ ರಾಂಕಾ ಅವರಿಗೆ ಪೊಲೀಸರು ಲುಕ್‌ ಔಟ್‌ ಸರ್ಕ್ಯುಲರ್‌ (Look Out Circular) ನೀಡಿದ್ದಾರೆ.

ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆದ ಸುಮಾರು 7 ವಾರಗಳ ಬಳಿಕ ಪೊಲೀಸರು ಸಿಜೆಪಿ ನಾಯಕರಿಗೆ ಈ ಸರ್ಕ್ಯುಲರ್‌ ನೀಡಿದ್ದಾರೆ. ಮುಂಬೈ ಪೊಲೀಸ್ ಅಧಿಕಾರಿಗಳ ಪ್ರಕಾರ, ದಾದರ್‌ನಲ್ಲಿ ಅಕ್ರಮವಾಗಿ ಒಟ್ಟು ಸೇರಿದ್ದಕ್ಕೆ ಮತ್ತು ಘೋಷಣೆಗಳನ್ನು ಕೂಗಿದ್ದಕ್ಕೆ ಅಕ್ಟೋಬರ್ 3ರಂದು ದೀಪ್ಕೆ, ದಾಸ್, ರಂಕಾ ಹಾಗೂ ಸಿಜೆಪಿಯ ಇತರ ಸದಸ್ಯ ವಿರುದ್ಧ ದಾಖಲಾದ ಎಫ್‌ಐಆರ್‌ಗೆೆ ಸಂಬಂಧಿಸಿದಂತೆ ಈ ಸುತ್ತೋಲೆ ಹೊರಡಿಸಲಾಗಿದೆ.

ಸಿಜೆಪಿ ನಾಯಕರಿಗೆ ಮುಂಬೈ ಪೊಲೀಸರಿಂದ ಎಲ್‌ಒಸಿ:



ಪೊಲೀಸರು ಹೇಳಿದ್ದೇನು?

ಗಾಂಧಿ ಜಯಂತಿಯಂದು ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಸಿಜೆಪಿ ಪ್ರತಿನಿಧಿ ಅಜಿಂಕ್ಯೆ ಶಿಂಧೆಗೆ ಅನುಮತಿ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಸೌರವ್ ದಾಸ್ ಅವರ ವಿರುದ್ಧ ಎಲ್‌ಒಸಿ ಜಾರಿಗೊಳಿಸಲಾಯಿತು. ಮಹಾರಾಷ್ಟ್ರ ಪೊಲೀಸರ ಕೋರಿಕೆಯ ಮೇರೆಗೆ ಇದನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ಪ್ರಯಾಣಿಸದಂತೆ ತನ್ನನ್ನು ತಡೆಯಲಾಗಿದೆ ಎಂದು ಆರೋಪಿಸಿ ದಾಸ್ ಸೋಮವಾರ (ನವೆಂಬರ್ 23) ಹೈಕೋರ್ಟ್ ಮೊರೆ ಹೋಗಿದ್ದರು.

ಜಾಮೀನು ಸಿಕ್ಕರೂ ಸಿಜೆಪಿ ನಾಯಕ ಸೌರವ್ ದಾಸ್‌ಗೆ ವಿದೇಶ ಪ್ರವಾಸ ಯೋಗವಿಲ್ಲ

ನವೆಂಬರ್ 23ರಂದು ರಾತ್ರಿ ಲಂಡನ್‌ಗೆ ತೆರಳುವ ವಿಮಾನ ಏರುವ ಮೊದಲು ದೆಹಲಿ ವಿಮಾನ ನಿಲ್ದಾಣದ ವಲಸೆ ತಪಾಸಣಾ ಕೌಂಟರ್‌ನಲ್ಲಿ ತಮ್ಮನ್ನು ತಡೆಹಿಡಿಯಲಾಗಿದೆ ಎಂದು ಸೌರವ್ ದಾಸ್ ಆರೋಪಿಸಿದ್ದರು. ʼʼಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ಹಾರುತ್ತಿದ್ದ ನನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಹೇಡಿ ಮೋದಿ ಸರ್ಕಾರ ತಡೆದಿದೆ. ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಎಲ್‌ಎಸ್‌ಇ, ಎಡಿನ್‌ಬರ್ಗ್‌ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಸಿಜೆಪಿ ಚಳುವಳಿ ಕುರಿತು ಭಾಷಣ ಮಾಡಲು ಲಂಡನ್‌ಗೆ ಆಹ್ವಾನಿಸಿದಾಗ, ಈ ಹೇಡಿ ಸರ್ಕಾರ ನನಗೆ ವಿಮಾನ ಹತ್ತಲು ಅವಕಾಶ ನೀಡಲಿಲ್ಲʼʼ ಎಂದಿದ್ದರು.

ಸಿಜೆಪಿ ನಾಯಕರಿಗೆ ಬಿಗ್‌ ರಿಲೀಫ್‌; ಸೌರವ್‌ ದಾಸ್‌, ಅಶುತೋಷ್‌ ರಾಂಕಾ ಬಿಡುಗಡೆಗೆ ಕೋರ್ಟ್‌ ಸೂಚನೆ

ಕಳೆದ ತಿಂಗಳು ಶಿವಾಜಿ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಿವಾಜಿ ಪಾರ್ಕ್ ಪೊಲೀಸರು ಅಭಿಜಿತ್ ದಿಪ್ಕೆ, ಪ್ರಣವ್ ಅಹಿರೆ, ಆಶುತೋಷ್ ರಾಂಕಾ, ಅಜಿಂಕ್ಯ ಶಿಂಧೆ, ಸೌರಭ್ ದಾಸ್, ಅಫ್ರೀನ್ ನವಾಜ್, ಸೌಮ್ಯ ಕೋರ್ಡೆ, ಅಂಕಿತ್ ಭಾರದ್ವಾಜ್, ವಿಜಯ್ ಮಾಲಂಗಿ ಮತ್ತು ಯೋಗೇಶ್ ಇಂಗ್ಲೆ ವಿರುದ್ಧ ಪ್ರಕರಣ ದಾಖಲಿಸಿದ್ದರು. ಎಫ್‌ಐಆರ್‌ನಲ್ಲಿ 400 ಸಿಜೆಪಿ ಬೆಂಬಲಿಗರನ್ನು ಉಲ್ಲೇಖಿಸಲಾಗಿದೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author