ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naxalism: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಗಣನೀಯ ಇಳಿಕೆ- ಮೋದಿ ಸರ್ಕಾರದಿಂದ ಮಹತ್ವದ ಸಾಧನೆ!

Naxal-affected districts: ದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಯಶಸ್ವಿಯಾಗಿದ್ದು, ಈಗ ದೇಶಾದ್ಯಂತ ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ನಕ್ಸಲರು ತಮ್ಮ ಬಲವನ್ನು ಉಳಿಸಿಕೊಂಡಿದ್ದಾರೆ. ಇದು ನಕ್ಸಲ್ ಮುಕ್ತ ಭಾರತವನ್ನು ಸೃಷ್ಟಿಸುವ ಮೋದಿ ಸರ್ಕಾರದ ಗುರಿಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ನವದೆಹಲಿ: ದೇಶದಲ್ಲಿ ಈಗ ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ನಕ್ಸಲ್ ಚಟುವಟಿಕೆಗಳು (Naxal-Affected Districts) ನಡೆಯುತ್ತಿದೆ. ಉಳಿದೆಡೆ ಬಹುತೇಕ ಸ್ತಬ್ಧವಾಗಿದೆ. ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿರುವ ಮೂರು ಸಿಪಿಐ (CPI Maoist) ನಕ್ಸಲ್ ಪೀಡಿತ ಜಿಲ್ಲೆಗಳೆಂದರೆ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ಎಂದು ಕೇಂದ್ರ ಗೃಹ ಸಚಿವಾಲಯ (Ministry of Home Affairs) ತಿಳಿಸಿದೆ. ದೇಶದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಕುರಿತು ಬುಧವಾರ ಮಾಹಿತಿ ನೀಡಿರುವ ಗೃಹ ಸಚಿವಾಲಯ, ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಯಶಸ್ವಿಯಾಗಿದ್ದು ಸುಮಾರು 88 ಸಿಪಿಐ ಮಾವೋವಾದಿ ಸದಸ್ಯರು ಶರಣಾಗಿದ್ದಾರೆ ಎಂದು ಹೇಳಿದೆ.

ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿರುವ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು ಆರರಿಂದ ಮೂರಕ್ಕೆ ಇಳಿಸಲಾಗಿದೆ. ಪ್ರಸ್ತುತ, ಛತ್ತೀಸ್‌ಗಢದ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ನಕ್ಸಲ್ ಚಟುವಟಿಕೆಯಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ತಿಳಿಸಿದೆ.

ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ಸಿಪಿಐ (ಮಾವೋವಾದಿ) ನ 88 ಸದಸ್ಯರು ಶರಣಾಗಿದ್ದು, ಇದು ನಕ್ಸಲ್ ವಿರೋಧಿ ಅಭಿಯಾನದಲ್ಲಿ ಮತ್ತೊಂದು ಯಶಸ್ಸು. ನಕ್ಸಲ್ ಮುಕ್ತ ಭಾರತವನ್ನು ಸೃಷ್ಟಿಸುವ ಮೋದಿ ಸರ್ಕಾರದ ಗುರಿಯತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು 18 ರಿಂದ ಕೇವಲ 11 ಕ್ಕೆ ಇಳಿಸಲಾಗಿದೆ. ಮುಂದಿನ ಮಾರ್ಚ್ ವೊಳಗೆ ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಇದೆ ಎಂದು ಹೇಳಿದೆ.



ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸಿಪಿಐ ಪ್ರಧಾನ ಕಾರ್ಯದರ್ಶಿ ಮತ್ತು ಇತರ 8 ಪೊಲಿಟ್‌ಬ್ಯೂರೋ, ಕೇಂದ್ರ ಸಮಿತಿ ಸದಸ್ಯರು ಸೇರಿದಂತೆ 312 ಎಲ್‌ಡಬ್ಲ್ಯೂಇ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಒಟ್ಟು 836 ಎಲ್‌ಡಬ್ಲ್ಯೂಇ ಕಾರ್ಯಕರ್ತರನ್ನು ಬಂಧಿಸಲಾಗಿದೆ. 1,639 ಮಂದಿ ಶರಣಾಗಿದ್ದಾರೆ.

ನಕ್ಸಲ್ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು, ಕಠಿಣ ನೀತಿಯನ್ನು ಜಾರಿಗೆ ತಂದಿದೆ. ಗುಪ್ತಚರ ಮಾಹಿತಿ ಆಧಾರದಲ್ಲಿ ವಿವಿಧ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಎಂದು ಗೃಹ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Naxal Surrender: ಸಿಎಂ ಎದುರು 60 ಸಹಚರರ ಜೊತೆ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಕಮಾಂಡರ್‌ ಶರಣಾಗತಿ

ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಕಮಾಂಡರ್‌ ಶರಣಾಗತಿ

ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಮಲ್ಲೋಜುಲ ವೇಣುಗೋಪಾಲ್ ರಾವ್ ಅಲಿಯಾಸ್ ಭೂಪತಿ, ತನ್ನ 60 ಸಹಚರರೊಂದಿಗೆ ಮಂಗಳವಾರ ಗಡಚಿರೋಲಿ ಪೊಲೀಸರಿಗೆ ಶರಣಾಗಿದ್ದಾರೆ. ಈ ಶರಣಾಗತಿ ಪ್ರಕ್ರಿಯೆಯು ಮಹಾರಾಷ್ಟ್ರ ಫಡ್ನವೀಸ್ ಮುಖ್ಯಮಂತ್ರಿ ದೇವೇಂದ್ರ ಅವರ ಸಮ್ಮುಖದಲ್ಲಿ ನಡೆದಿದ್ದು, ಇದು ನಕ್ಸಲ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಸಾಧನೆ ಎಂದೆನಿಸಿದೆ.

ಈ ಕುರಿತು ಪ್ರತಿಕ್ರಿಸಿರುವ ಸಿಎಂ ಫಡ್ನವೀಸ್, ಇದು ಮಹಾರಾಷ್ಟ್ರದ ಇತಿಹಾಸದಲ್ಲಿ ಐತಿಹಾಸಿಕ ದಿನ. ಇಂದು ನಕ್ಸಲ್ ಕಮಾಂಡರ್ ಮಲ್ಲೋಜುಲ ವೇಣುಗೋಪಾಲ್ ರಾವ್ ತನ್ನ ಸಹಚರರೊಂದಿಗೆ ಶರಣಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಮ್ಮ ಪೊಲೀಸ್ ಇಲಾಖೆ ಅವರೊಂದಿಗೆ ಮಾತುಕತೆ ನಡೆಸಿ, ಮುಖ್ಯವಾಹಿನಿಗೆ ಮರಳುವಂತೆ ಮನವಿ ಮಾಡುತ್ತಿತ್ತು ಎಂದಿದ್ದಾರೆ. ಅಲ್ಲದೇ, ನಕ್ಸಲ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಭೂಪತಿಗೆ ಸ್ಪಷ್ಟಪಡಿಸಲಾಗಿತ್ತು ಮತ್ತು ಆತನಿಗೆ ಶರಣಾಗಲು ಅವಕಾಶ ನೀಡಲಾಗಿತ್ತು. ಈ ಶರಣಾಗತಿಯೊಂದೆಗೆ ರಾಜ್ಯದಲ್ಲಿದ್ದ ನಕ್ಸಲಿಸಂನ ಬೆನ್ನೆಲಬನ್ನು ಮುರಿದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author