Pashupati Paras: ಚುನಾವಣೆ ಸನಿಹದಲ್ಲೇ ಬಿಜೆಪಿಗೆ ಬಿಗ್ ಶಾಕ್; NDAಗೆ ಪಶುಪತಿ ಪಾರಸ್ ಗುಡ್ ಬೈ!
ಬಿಹಾರ ವಿಧಾನಸಭಾ ಚುನಾವಣೆಗೆ ಹೊಸ್ತಿಲಲ್ಲಿ ಬಿಜೆಪಿ- ಜೆಡಿಯು ನೇತೃತ್ವದ NDA ಮೈತ್ರಿಕೂಟ ತೊರೆದಿರುವುದಾಗಿ ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಪಶುಪತಿ ಕುಮಾರ್ ಪಾರಸ್ ಅವರು ಸೋಮವಾರ ಔಪಚಾರಿಕವಾಗಿ ಘೋಷಿಸಿದ್ದಾರೆ. ಇನ್ನು ಮುಂದೆ ಆರ್ ಎಲ್ ಜಿಪಿ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಮೈತ್ರಿಕೂಟದ ಭಾಗವಾಗಲ್ಲ ಎಂದು ಹೇಳಿದ್ದಾರೆ.


ಪಟನಾ: ಬಿಹಾರ ವಿಧಾನಸಭಾ ಚುನಾವಣೆಗೆ ಹೊಸ್ತಿಲಲ್ಲಿ ಬಿಜೆಪಿ- ಜೆಡಿಯು ನೇತೃತ್ವದ NDA ಮೈತ್ರಿಕೂಟ ತೊರೆದಿರುವುದಾಗಿ ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ (RLGP) ಮುಖ್ಯಸ್ಥ ಪಶುಪತಿ ಕುಮಾರ್ ಪಾರಸ್ (Pashupati Paras) ಅವರು ಸೋಮವಾರ ಔಪಚಾರಿಕವಾಗಿ ಘೋಷಿಸಿದ್ದಾರೆ. ಇನ್ನು ಮುಂದೆ ಆರ್ ಎಲ್ ಜಿಪಿ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಮೈತ್ರಿಕೂಟದ ಭಾಗವಾಗಲ್ಲ ಎಂದು ಹೇಳಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಟಿಕೆಟ್ ನಿರಾಕರಿಸಿದ ನಂತರ ಪಾರಸ್ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.
ಈ ಘೋಷಣೆ ಮಾಡಿದ ಪರಾಸ್, ತಮ್ಮ ಪಕ್ಷವು ದಲಿತ ಪಕ್ಷವಾಗಿದ್ದರಿಂದ ಅನ್ಯಾಯವನ್ನು ಎದುರಿಸಿದೆ ಮತ್ತು ಬಿಹಾರದ ಬಿಜೆಪಿ ಮತ್ತು ಜೆಡಿಯು ರಾಜ್ಯ ಮುಖ್ಯಸ್ಥರು ಎನ್‌ಡಿಎ ಸಭೆಗಳಲ್ಲಿ ತಮ್ಮ ಪಕ್ಷದ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ಹೇಳಿದರು. "ನಾನು 2014 ರಿಂದ ಎನ್‌ಡಿಎಯಲ್ಲಿದ್ದೇನೆ. ಇಂದಿನಿಂದ ನನ್ನ ಪಕ್ಷವು ಎನ್‌ಡಿಎ ಜೊತೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ" ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: BJP-AIADMK alliance: ಅಣ್ಣಾಮಲೈ ರಾಜೀನಾಮೆ ಬೆನ್ನಲ್ಲೇ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಘೋಷಣೆ
ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾರಸ್, ಇನ್ನು ಮುಂದೆ ನಮಗೆ ಎನ್‌ಡಿಎ ಜೊತೆ ಯಾವುದೇ ಸಂಬಂಧವಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಸೂಕ್ತ ಸ್ಥಾನಗಳನ್ನು ಹಂಚಿಕೆ ಮಾಡುವ ಮೈತ್ರಿಯೊಂದಿಗೆ ಹೋಗುವುದಾಗಿ ತಿಳಿಸಿದರು. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾರಸ್, ಇನ್ನು ಮುಂದೆ ನಮಗೆ ಎನ್‌ಡಿಎ ಜೊತೆ ಯಾವುದೇ ಸಂಬಂಧವಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಸೂಕ್ತ ಸ್ಥಾನಗಳನ್ನು ಹಂಚಿಕೆ ಮಾಡುವ ಮೈತ್ರಿಯೊಂದಿಗೆ ಹೋಗುವುದಾಗಿ ತಿಳಿಸಿದ್ದಾರೆ.