ಡೆಹ್ರಾಡೂನ್, ಜೂ. 17: ದೇಶದಲ್ಲಿ ನಡೆದ ನೀಟ್ ಕರ್ಮಕಾಂಡಕ್ಕೆ ಮತ್ತೊಂದು ವಿದ್ಯಾರ್ಥಿನಿ ಜೀವ ಕಳೆದುಕೊಂಡಿದ್ದಾಳೆ. ಉತ್ತರಾಖಂಡದ ಡೆಹ್ರಾಡೂನ್ ನಿವಾಸಿ, ನೀಟ್‌ಗೆ ತಯಾರಿ ನಡೆಸುತ್ತಿದ್ದ 23 ವರ್ಷದ ರಿಯಾ ಕುಮಾರಿ ತಾಪ ಮಂಗಳವಾರ (ಜೂನ್ 16) ಆತ್ಮಹತ್ಯೆ ಮಾಡಿಕೊಂಡಿದ್ದು, ಶೈಕ್ಷಣಿಕ ಒತ್ತಡವೇ ಇದಕ್ಕೆ ಕಾರಣ ಎನ್ನಲಾಗಿದೆ (Self Harming). 12ನೇ ತರಗತಿಯಲ್ಲಿ ಟಾಪರ್ ಆಗಿದ್ದ ರಿಯಾ ಡೆತ್ ನೋಟ್‌ನಲ್ಲಿ ''ಐ ಲವ್ ಯು ಅಮ್ಮ, ಅಪ್ಪ. ನನ್ನ ಸಾವಿಗೆ ನಾನೇ ಕಾರಣʼʼ ಎಂದು ಬರೆದುಕೊಂಡಿದ್ದಾಳೆ.
ಆಕೆಯಲ್ಲಿ ನೋವಿನ, ಪರೀಕ್ಷೆಯ ಒತ್ತಡದ, ಆತ್ಮಹತ್ಯೆಯ ಯಾವುದೇ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ತಮ್ಮ ಜತೆ ಸಾಮಾನ್ಯವಾಗಿಯೇ ಇದ್ದಳು. ಯಾಕಾಗಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನುವುದು ತಿಳಿಯುತ್ತಿಲ್ಲ ಎಂದು ಮನೆಯವರು ಅಳಲು ತೋಡಿಕೊಡಿದ್ದಾರೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ರಿಯಾ ಅವರ ತಂದೆ ಸೇನೆಯಲ್ಲಿದ್ದರು. ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು. ಎಷ್ಟು ಕರೆದರೂ ರೂಮ್‌ನಿಂದ ಹೊರಗೆ ಬರದಿದ್ದಾಗ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ರಿಯಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ
ಪೊಲೀಸರು ಈ ಬಗ್ಗೆ ಮಾಹಿತಿ ನೀಡಿ, ʼʼರಿಯಾ ಡೆಹ್ರಾಡೂನ್‌ನ ಚಂದ್ರಬಾನಿ ಏರಿಯಾದಲ್ಲಿ ಹೆತ್ತವರೊಂದಿಗೆ ವಾಸವಾಗಿದ್ದರು. ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಅವರು 12ನೇ ತರಗತಿಯಲ್ಲಿ ಶೇಕಡಾ 96.7 ಅಂಕ ಪಡೆದು ಕಾಲೇಜ್ ಟಾಪರ್ ಆಗಿದ್ದರುʼʼ ಎಂದು ಹೇಳಿದ್ದಾರೆ. ʼʼಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದೇವೆʼʼ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನೀಟ್ ಮರು ಪರೀಕ್ಷೆಗೆ ಕೆಲವೇ ದಿನ ಬಾಕಿ ಇರುವಾಗಲೇ ವಿದ್ಯಾರ್ಥಿ ಆತ್ಮಹತ್ಯೆ!
ರಿಯಾ ತಾಯಿ ಬೆಳಗ್ಗಿನ ಉಪಾಹಾರ ಸೇವಿಸಲು ಕರೆಯಲು ಹೋದಾಗ ಸುಮಾರು 10:30ರ ವೇಳೆಗೆ ವಿಚಾರ ಬೆಳಕಿಗೆ ಬಂದಿದೆ. ಡೋರ್ ತೆಗೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ತಾಯಿ ಈ ವಿಚಾರವನ್ನು ತಂದೆಗೆ ತಿಳಿಸಿದರು. ತಂದೆ ಬಲವಂತದಿಂದ ಬಾಗಿಲು ತೆರೆದಾಗ ಅಲ್ಲಿ ರಿಯಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯ್ತು.
ʼʼಸೋಮವಾರ ಇಡೀ ದಿನ ಜಾಗರಣೆ ಮಾಡುವುದಾಗಿ ರಿಯಾ ಹೆತ್ತವರ ಬಳಿ ಹೇಳಿದ್ದಳು. ಅಲ್ಲದೆ ಸಾಮಾನ್ಯವಾಗಿ ಆಕೆ ರಾತ್ರಿ ತುಂಬ ಹೊತ್ತು ಓದಿ ಬೆಳಗ್ಗೆ ತಡವಾಗಿ ಎದ್ದೇಳುತ್ತಿದ್ದಳು. ಅದು ಆಕೆಯ ದಿನಚರಿಯಾಗಿದ್ದರಿಂದ ಮತ್ತು ಚಿಂತೆಯ ಯಾವುದೇ ಲಕ್ಷಣ ಕಂಡು ಬರದ ಹಿನ್ನೆಲೆಯಲ್ಲಿ ಹೆತ್ತವರಿಗೆ ಎಳ್ಳಷ್ಟೂ ಅನುಮಾನ ಬಂದಿರಲಿಲ್ಲʼʼ ಎಂದು ಸರ್ಕಲ್ ಆಫೀಸರ್ ಸಾದರ್ ಅಂಕಿತ್ ಕಂದಾರಿ ವಿವರಿಸಿದ್ದಾರೆ.
ಕಲಬುರಗಿಯ ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್; ನೀಟ್ ಬರೆದಿದ್ದ ವಿದ್ಯಾರ್ಥಿನಿ ಸಾವಿಗೆ ಕಾರಣ ಬಹಿರಂಗ!
ʼʼತನ್ನ ಸಾವಿಗೆ ತಾನೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. ಆತ್ಮಹತ್ಯೆಗೆ ನೀಟ್ ಮರುಪರೀಕ್ಷೆಯ ಒತ್ತಡ ಕಾರಣವೇ ಅಥವಾ ಬೇರೆ ಕಾರಣ ಇರಬಹುದೇ ಎನ್ನುವುದನ್ನು ಪರಿಶೀಲಿಸಲು ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುವುದುʼʼ ಎಂದು ಅವರು ಹೇಳಿದ್ದಾರೆ. ನೀಟ್ ಮರು ಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವವ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ ಈ ಘಟನೆ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಟ್ ಮರು ಪರೀಕ್ಷೆಯನ್ನು ಜೂನ್ 21ರ ಅಪರಾಹ್ನ 2 ಗಂಟೆಯಿಂದ ಸಂಜೆ 5:15ರ ತನಕ ನಡೆಸಲಿದೆ. ಇದಕ್ಕಾಗಿ ವ್ಯಾಪಕ ಸಿದ್ಧತೆ ನಡೆಸಲಾಗುತ್ತಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.