ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರೆನ್ಸಿ ನೋಟುಗಳಲ್ಲಿ ಬದಲಾವಣೆಗಳಿಲ್ಲ: ಆರ್‌.ಬಿ.ಐ ಸ್ಪಷ್ಟನೆ

ಕರೆನ್ಸಿ ನೋಟುಗಳಲ್ಲಿ ಬದಲಾವಣೆಗಳಿಲ್ಲ: ಆರ್‌.ಬಿ.ಐ ಸ್ಪಷ್ಟನೆ

image-58c1af0e-33da-4b25-867a-ed6a10e35cdf.jpg
ನವದೆಹಲಿ: ಈಗ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ. 'ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮಾ ಗಾಂಧಿಯವರ ಮುಖವನ್ನು ಇತರರ ಮುಖದೊಂದಿಗೆ ಬದಲಾಯಿಸುವ ಮೂಲಕ ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತಿದೆ ಎಂದು ವರದಿಯಾಗಿತ್ತು. ಈ ಬಗ್ಗೆ RBI ಸ್ಪಷ್ಟನೆ ನೀಡಿದ್ದು, ರಿಸರ್ವ್ ಬ್ಯಾಂಕ್‌ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.