ಕೈಗೆಟುಕುವ ಮತ್ತು ಸುಸ್ಥಿರ ಅಂತರ್‌ನಗರ ಸಾರಿಗೆ ವ್ಯವಸ್ಥೆಯಲ್ಲಿ ಪರಿವರ್ತನೆ ತರುತ್ತಿರುವ ಜಾಗತಿಕ ಟ್ರಾವೆಲ್-ಟೆಕ್ ಕಂಪನಿ ಫ್ಲಿಕ್ಸ್ʼಬಸ್, ವಿಶ್ವ ಪ್ರವಾಸೋದ್ಯಮ ದಿನ(World Tourism Day)ದ ಅಂಗವಾಗಿ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದೊಂದಿಗೆ *ಸಹಕಾರ ಒಪ್ಪಂದ (Memorandum of Understanding – MoU)ಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿದೆ. ತನ್ನ ವಿಸ್ತರಿಸುತ್ತಿರುವ ಜಾಲದ ಮೂಲಕ ಭಾರತವನ್ನು ಪ್ರಮುಖ ಜಾಗತಿಕ ಪ್ರವಾಸಿ ತಾಣವಾಗಿ ಜಂಟಿಯಾಗಿ ಉತ್ತೇಜಿಸುವುದು ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ.
ಈ MoUಗೆ ಭಾರತ ಸರ್ಕಾರದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ಭುವನೇಶ್ ಕುಮಾರ್ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಸುಮನ್ ಬಿಲ್ಲಾ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.
ಈ ಸಹಭಾಗಿತ್ವದ ಪ್ರಮುಖ ಉದ್ದೇಶವು ಭಾರತದ ಪ್ರಸಿದ್ಧ ಹಾಗೂ ಕಡಿಮೆ ಅನ್ವೇಷಿಸಲ್ಪಟ್ಟ ಪ್ರವಾಸಿ ತಾಣಗಳನ್ನು ಪ್ರತಿಯೊಂದು ಪ್ರಯಾಣದ ಕೇಂದ್ರಬಿಂದುವಾಗಿ ರೂಪಿಸುವುದಾಗಿದೆ. MoU ಅಡಿಯಲ್ಲಿ, ಫ್ಲಿಕ್ಸ್ʼಬಸ್ ತನ್ನ ವೇದಿಕೆಯಲ್ಲಿ ಪ್ರವಾಸಿ ತಾಣಗಳನ್ನು ಕೇಂದ್ರೀಕರಿಸಿದ ವಿಷಯ ಗಳನ್ನು ಹಾಗೂ Incredible India ಬ್ರ್ಯಾಂಡ್ ಅನ್ನು ಅಳವಡಿಸಿಕೊಳ್ಳಲಿದೆ. ಆಯ್ದ ಅಂತರ್‌ನಗರ ಮಾರ್ಗಗಳಲ್ಲಿ Incredible India ಸಹ-ಬ್ರಾಂಡೆಡ್ ಕೋಚ್‌ಗಳನ್ನು ಸಹ ಪರಿಚಯಿಸಲಾಗುವುದು.
ಇದನ್ನೂ ಓದಿ: Triptii Dimri: ವಿಕ್ಟೋರಿಯಾಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾದ ತೃಪ್ತಿ ಡಿಮ್ರಿ
ಇದರ ಜೊತೆಗೆ, FlixBus ತನ್ನ ವೇದಿಕೆಯಲ್ಲಿ ‘Trails of India’ ಎಂಬ ವಿಶೇಷ ಮೈಕ್ರೋಸೈಟ್ ಅನ್ನು ಅನಾವರಣಗೊಳಿಸಿದೆ. ಭಾರತದ ವೈವಿಧ್ಯಮಯ ಭೌಗೋಳಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಯಲ್ಲಿರುವ ವಿವಿಧ ಪ್ರವಾಸಿ ತಾಣಗಳನ್ನು ಅನ್ವೇಷಿಸಲು ಪ್ರಯಾಣಿಕರಿಗೆ ಪ್ರೇರಣೆ ಹಾಗೂ ಮಾರ್ಗ ದರ್ಶನ ನೀಡುವ ಉದ್ದೇಶದಿಂದ ಈ ಮೈಕ್ರೋಸೈಟ್‌ನಲ್ಲಿ ವಿಷಯಾಧಾರಿತ ಪ್ರವಾಸ ಮಾರ್ಗಗಳು ಮತ್ತು ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಯನ್ನು ಒಳಗೊಂಡಿರುತ್ತದೆ.
ಈ ಸಹಭಾಗಿತ್ವದ ಮತ್ತೊಂದು ಪ್ರಮುಖ ಅಂಶವೆಂದರೆ ‘Har Safar, Swachh Safar’. ಇದು ಭಾರತದ ವೇಗವಾಗಿ ಬೆಳೆಯುತ್ತಿರುವ ಅಂತರ್‌ನಗರ ಪ್ರಯಾಣಿಕರಲ್ಲಿ ಜಾಗೃತ ಮತ್ತು ಜವಾಬ್ದಾರಿ ಯುತ ಪ್ರವಾಸ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದ ರಾಷ್ಟ್ರೀಯ ಅಭಿಯಾನವಾಗಿದೆ. ಸ್ಥಳೀಯ ಸಮುದಾಯಗಳನ್ನು ಗೌರವಿಸುವುದು, ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುವುದು ಹಾಗೂ ಸುಸ್ಥಿರ ಪ್ರವಾಸ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರಯಾಣಿಕರನ್ನು ಪ್ರೋತ್ಸಾಹಿಸು ವುದು ಇದರ ಉದ್ದೇಶವಾಗಿದೆ.
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಾತ ನಾಡಿ, “ಭಾರತದ ಪ್ರವಾಸೋದ್ಯಮದ ವೈವಿಧ್ಯತೆಯು ದೇಶದ ವೈವಿಧ್ಯತೆಯಷ್ಟೇ ವಿಶಾಲವಾಗಿದೆ. ಪ್ರಸಿದ್ಧ ಪ್ರವಾಸಿ ಮಾರ್ಗಗಳ ಹೊರತಾಗಿಯೂ, ವಿಶಿಷ್ಟ ಸಾಂಸ್ಕೃತಿಕ, ನೈಸರ್ಗಿಕ ಮತ್ತು ಸ್ಥಳೀಯ ಅನುಭವಗಳನ್ನು ಒದಗಿಸುವ ಅನೇಕ ಪ್ರವಾಸಿ ತಾಣಗಳು ದೇಶದಲ್ಲಿವೆ. ಪ್ರಯಾಣಿಕರು ಈ ತಾಣಗಳನ್ನು ಸುಲಭವಾಗಿ ತಲುಪಿ ಅನ್ವೇಷಿಸಲು ಸಾಧ್ಯವಾಗುವಂತೆ ಮಾಡುವುದು ಅವುಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವಲ್ಲಿ ಪ್ರಮುಖವಾಗಿದೆ.
FlixBus ಜೊತೆಗಿನ ನಮ್ಮ ಸಹಭಾಗಿತ್ವವು ಅದರ ತಂತ್ರಜ್ಞಾನ ಆಧಾರಿತ ವೇದಿಕೆ ಮತ್ತು ಅಂತರ್ ನಗರ ಜಾಲವನ್ನು, ಭಾರತದ ಪ್ರವಾಸೋದ್ಯಮ ಕಥೆಯನ್ನು ಇನ್ನಷ್ಟು ದೊಡ್ಡ ಪ್ರೇಕ್ಷಕರಿಗೆ ತಲುಪಿಸುವ ಸಚಿವಾಲಯದ ದೃಷ್ಟಿಕೋನದೊಂದಿಗೆ ಒಗ್ಗೂಡಿಸುತ್ತದೆ. ಪ್ರಯಾಣಿಕರನ್ನು ಹೆಚ್ಚಿನ ಸಂಖ್ಯೆಯ ಪ್ರವಾಸಿ ತಾಣಗಳೊಂದಿಗೆ ಸಂಪರ್ಕಿಸುವುದರ ಜೊತೆಗೆ, ಜವಾಬ್ದಾರಿಯುತ ಪ್ರವಾಸದ ಕುರಿತು ಹೆಚ್ಚಿನ ಅರಿವು ಮೂಡಿಸುವುದು ಸಹ ಅಷ್ಟೇ ಮುಖ್ಯ. ಪ್ರಯಾಣಿಕರಿಗೆ ಸಮೃದ್ಧ ಅನುಭವ ನೀಡುವುದರೊಂದಿಗೆ ಅವರು ಭೇಟಿ ನೀಡುವ ಸ್ಥಳೀಯ ಸಮುದಾಯಗಳು ಮತ್ತು ತಾಣಗಳಿಗೆ ಸಕಾರಾತ್ಮಕ ಕೊಡುಗೆ ನೀಡುವಂತಹ ಪ್ರಯಾಣವನ್ನು ಉತ್ತೇಜಿಸುವುದು ನಮ್ಮ ಉದ್ದೇಶವಾಗಿದೆ.
ಈ ಸಹಭಾಗಿತ್ವವು ಹೊಸ ಪ್ರವಾಸಿ ತಾಣಗಳ ಅನ್ವೇಷಣೆಗೆ ಹೊಸ ಅವಕಾಶಗಳನ್ನು ತೆರೆಯುವುದರ ಜೊತೆಗೆ, ಹೆಚ್ಚು ಜಾಗೃತ ಮತ್ತು ಎಲ್ಲರನ್ನು ಒಳಗೊಂಡ ಪ್ರವಾಸ ಅನುಭವವನ್ನು ಉತ್ತೇಜಿಸುತ್ತದೆ ಎಂಬ ವಿಶ್ವಾಸ ನಮಗಿದೆ.”
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ಭುವನೇಶ್ ಕುಮಾರ್ ಅವರು ಮಾತನಾಡಿ, “ಪ್ರವಾಸಿ ತಾಣಗಳನ್ನು ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಿಸುವಲ್ಲಿ ಸಾರಿಗೆ ವ್ಯವಸ್ಥೆಯು ಪರಿವರ್ತನಾತ್ಮಕ ಪಾತ್ರ ವಹಿಸಬಹುದು. ವಿಶೇಷವಾಗಿ ಈಗಾಗಲೇ ಸ್ಥಾಪಿತವಾಗಿರುವ ಪ್ರವಾಸಿ ಮಾರ್ಗಗಳ ಹೊರಗಿರುವ ತಾಣಗಳಿಗೆ ಇದು ಹೆಚ್ಚು ಪ್ರಸ್ತುತವಾಗಿದೆ. FlixBusನ ತಂತ್ರ ಜ್ಞಾನ ಆಧಾರಿತ ವಿಧಾನ ಮತ್ತು ವಿಸ್ತರಿಸುತ್ತಿರುವ ಅಂತರ್‌ನಗರ ಜಾಲವು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ತಲುಪಲು ಹಾಗೂ ಭಾರತದಾದ್ಯಂತ ಇನ್ನಷ್ಟು ಪ್ರವಾಸಿ ತಾಣಗಳು ಮತ್ತು ಪ್ರವಾಸೋದ್ಯಮ ಅನುಭವಗಳೊಂದಿಗೆ ಅವರನ್ನು ಸಂಪರ್ಕಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಈ ಸಹಭಾಗಿತ್ವದ ಮೂಲಕ, ಪ್ರಯಾಣದ ಅನುಭವವನ್ನೇ ಜವಾಬ್ದಾರಿಯುತ ಪ್ರವಾಸೋದ್ಯಮದ ಕುರಿತು ಹೆಚ್ಚಿನ ಅರಿವು ಮೂಡಿಸುವ ಸಾಧನವಾಗಿ ಬಳಸಿಕೊಳ್ಳಬಹುದು. ಪ್ರಯಾಣಿಕರು ಭೇಟಿ ನೀಡುವ ಸ್ಥಳಗಳು ಹಾಗೂ ಅವರು ಸಂಪರ್ಕಿಸುವ ಸ್ಥಳೀಯ ಸಮುದಾಯಗಳ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಹೊಂದುವಂತೆ ಪ್ರೋತ್ಸಾಹಿಸಬಹುದು.
ಪ್ರವಾಸಿ ತಾಣಗಳ ಅನ್ವೇಷಣೆ, ಸುಲಭ ಪ್ರವೇಶ ಮತ್ತು ಜವಾಬ್ದಾರಿಯುತ ಪ್ರವಾಸವನ್ನು ಒಟ್ಟುಗೂಡಿಸುವ ಮೂಲಕ, ಪ್ರಯಾಣಿಕರಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸುವುದರ ಜೊತೆಗೆ ಭಾರತದಾದ್ಯಂತ ಪ್ರವಾಸೋದ್ಯಮದ ಅವಕಾಶಗಳನ್ನು ಬೆಂಬಲಿಸುವ ಗುರಿಯನ್ನು ನಾವು ಹೊಂದಿದ್ದೇವೆ.”
ಸಹಭಾಗಿತ್ವದ ಕುರಿತು ಪ್ರತಿಕ್ರಿಯಿಸಿದ FlixBus India ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನಾ ಅವರು, “FlixBusನಲ್ಲಿ, ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಸಾರಿಗೆ ವ್ಯವಸ್ಥೆಯು ಶಕ್ತಿಯುತ ವೇಗವರ್ಧಕ ಎಂದು ನಾವು ನಂಬುತ್ತೇವೆ. ಸಾರಿಗೆ ಕ್ಷೇತ್ರವನ್ನು ಮೀರಿದ ಸಹಯೋಗದ ಮೂಲಕ ‘Incredible India’ ಅಭಿಯಾನವನ್ನು ಬೆಂಬಲಿಸಲು ಪ್ರವಾಸೋದ್ಯಮ ಸಚಿವಾಲಯದೊಂದಿಗೆ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ. ನಮ್ಮ ತಂತ್ರಜ್ಞಾನ ವೇದಿಕೆ, ಜಾಗತಿಕ ಪರಿಣತಿ ಮತ್ತು ವಿಸ್ತರಿಸುತ್ತಿರುವ ದೇಶೀಯ ಜಾಲವನ್ನು ಒಗ್ಗೂಡಿಸುವ ಮೂಲಕ, ಭಾರತೀಯ ಪ್ರವಾಸಿ ತಾಣಗಳ ಗೋಚರತೆಯನ್ನು ಹೆಚ್ಚಿಸಲು, ಸಾಂಪ್ರದಾಯಿಕ ಪ್ರವಾಸಿ ಮಾರ್ಗಗಳಾಚೆಗೆ ಪ್ರಯಾಣಿಸಲು ಜನರನ್ನು ಪ್ರೋತ್ಸಾಹಿಸಲು ಮತ್ತು ಹೆಚ್ಚು ಸಂಪರ್ಕಿತ, ಜವಾಬ್ದಾರಿಯುತ ಹಾಗೂ ಸ್ಥಿತಿಸ್ಥಾಪಕ ಪ್ರವಾಸೋದ್ಯಮ ವ್ಯವಸ್ಥೆಗೆ ಕೊಡುಗೆ ನೀಡಲು ನಾವು ಉದ್ದೇಶಿಸಿದ್ದೇವೆ.”
ಪ್ರವಾಸೋದ್ಯಮ ಸಚಿವಾಲಯದ ಪ್ರವಾಸೋದ್ಯಮ ದೃಷ್ಟಿಕೋನವನ್ನು FlixBusನ ತಂತ್ರಜ್ಞಾನ ಆಧಾರಿತ ಸಾರಿಗೆ ವೇದಿಕೆಯೊಂದಿಗೆ ಸಂಯೋಜಿಸುವ ಮೂಲಕ, ಭಾರತದ ವೈವಿಧ್ಯಮಯ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ವಿಸ್ತರಿಸುವುದು, ಜವಾಬ್ದಾರಿಯುತ ಪ್ರವಾಸಕ್ಕೆ ಉತ್ತೇಜನ ನೀಡುವುದು ಹಾಗೂ ದೇಶದ ದೀರ್ಘಕಾಲೀನ ಪ್ರವಾಸೋದ್ಯಮ ಅಭಿವೃದ್ಧಿಯ ಗುರಿಗೆ ಕೊಡುಗೆ ನೀಡುವುದು ಈ ಸಹಯೋಗದ ಉದ್ದೇಶವಾಗಿದೆ.
MoUನ ಪ್ರಮುಖ ಅಂಶಗಳು:
● ಪ್ರವಾಸಿ ತಾಣಗಳ ಪ್ರಚಾರ – FlixBus ಮತ್ತು ಪ್ರವಾಸೋದ್ಯಮ ಸಚಿವಾಲಯವು ಭಾರತವನ್ನು ಪ್ರಮುಖ ಜಾಗತಿಕ ಪ್ರವಾಸಿ ತಾಣವಾಗಿ ಉತ್ತೇಜಿಸಲು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ದೇಶದ ಪ್ರಸಿದ್ಧ ಹಾಗೂ ಕಡಿಮೆ ಅನ್ವೇಷಿಸಲ್ಪಟ್ಟ ಪ್ರವಾಸಿ ತಾಣಗಳನ್ನು ಅನ್ವೇಷಿಸಲು ಪ್ರಯಾಣಿಕರನ್ನು ಪ್ರೋತ್ಸಾಹಿಸುವುದರ ಜೊತೆಗೆ, ಭಾರತ ಸರ್ಕಾರದ Incredible India ಅಭಿಯಾನವನ್ನು ಬೆಂಬಲಿಸ ಲಾಗುವುದು. FlixBus, Incredible India ಗುರುತನ್ನು ಹೊಂದಿರುವ ಸಹ-ಬ್ರಾಂಡೆಡ್ ಕೋಚ್ ಅನ್ನು ಆಯ್ದ ಅಂತರ್‌ನಗರ ಮಾರ್ಗಗಳಲ್ಲಿ ಸಂಚರಿಸುವಂತೆ ಮಾಡಲು ಸಹ ಯೋಜಿಸಿದೆ. ಈ ಮೂಲಕ ಪ್ರತಿಯೊಂದು ಪ್ರಯಾಣವೂ ಭಾರತದ ಪ್ರವಾಸೋದ್ಯಮ ಕಥೆಯ ಪ್ರತಿಬಿಂಬವಾಗಲಿದೆ.
● Trails of India ಮೈಕ್ರೋಸೈಟ್ – FlixBus ತನ್ನ ವೇದಿಕೆಯಲ್ಲಿ ವಿಶೇಷ Trails of India ಮೈಕ್ರೋ ಸೈಟ್ ಅನ್ನು ಆರಂಭಿಸಿದೆ. ಭಾರತದ ಪ್ರವಾಸೋದ್ಯಮದ ವೈವಿಧ್ಯಮಯ ಕೊಡುಗೆಗಳನ್ನು ಅನ್ವೇಷಿಸಲು ಪ್ರಯಾಣಿಕರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಇದರಲ್ಲಿ ಆಯ್ದ ವಿಷಯಾಧಾರಿತ ಪ್ರವಾಸ ಮಾರ್ಗಗಳು ಮತ್ತು ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಯನ್ನು ಒಳಗೊಂಡಿರುತ್ತದೆ.
● Har Safar, Swachh Safar – ಅಂತರ್‌ನಗರ ಪ್ರಯಾಣಿಕರಲ್ಲಿ ಜಾಗೃತ ಮತ್ತು ಸುಸ್ಥಿರ ಪ್ರವಾಸ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದ ಸಹ-ಬ್ರಾಂಡೆಡ್ ಜವಾಬ್ದಾರಿಯುತ ಪ್ರವಾಸೋದ್ಯಮ ಅಭಿಯಾನ. ಇದು ಪ್ರವಾಸೋದ್ಯಮ ಸಚಿವಾಲಯದ ಜವಾಬ್ದಾರಿಯುತ ಪ್ರವಾಸದ ದೃಷ್ಟಿಕೋನ ಹಾಗೂ ಭಾರತ ಸರ್ಕಾರದ Mission LiFE ಉಪಕ್ರಮಕ್ಕೆ ಅನುಗುಣವಾಗಿದೆ.
● ಜ್ಞಾನ ಹಂಚಿಕೆ – ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಅಂತರ್‌ನಗರ ಸಾರಿಗೆಯ ಪಾತ್ರಕ್ಕೆ ಸಂಬಂಧಿಸಿದ ಜಾಗತಿಕ ಒಳನೋಟಗಳನ್ನು FlixBus ಹಂಚಿಕೊಳ್ಳಲಿದೆ. ಭಾರತದ ವಿಶಾಲ ಪ್ರವಾಸೋದ್ಯಮ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಜಂಟಿ ನೀತಿ ಸಂವಾದ ಗಳಲ್ಲಿಯೂ ಭಾಗವಹಿಸಲಿದೆ.