ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಬಿಸಿ ಮೀಸಲಾತಿ ಕಡಿತಗೊಳಿಸಿ, ಮುಸ್ಲಿಮರಿಗೆ ನೀಡಲು ವಿರೋಧ ಪಕ್ಷ ಯತ್ನ: ಸಂವಿಧಾನ ದಿನದಂದು ಪ್ರಧಾನಿ ಮೋದಿ ಹೇಳಿಕೆ

PM Narendra Modi: 1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಸಂವಿಧಾನ ರಚನೆಕಾರರು ತಿರಸ್ಕರಿಸಿದ್ದ ಅಜೆಂಡಾವನ್ನು ವಿರೋಧ ಪಕ್ಷವು ಜಾರಿಗೆ ತರಲು ಬಯಸುತ್ತಿವೆ ಎಂದು ಹೇಳಿದರು.

PM Narendra Modi

ನವದೆಹಲಿ, ನ.26: ಮುಸ್ಲಿಮರಿಗೆ ಮೀಸಲಾತಿಯನ್ನು ಪರಿಚಯಿಸುವ ಸಲುವಾಗಿ 'ಇತರ ಹಿಂದುಳಿದ ವರ್ಗಗಳ' (OBC) ಮೀಸಲಾತಿಯನ್ನು ಕಡಿತಗೊಳಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ. ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟವಾದ 'ಸಂವಿಧಾನ ದಿನ'ದ ಲೇಖನವೊಂದರಲ್ಲಿ, ಈ ಕ್ರಮವನ್ನು ಅವರು "ಅತ್ಯಂತ ಆಘಾತಕಾರಿ" ಎಂದು ಬಣ್ಣಿಸಿದ್ದಾರೆ.

1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಸಂವಿಧಾನ ರಚನೆಕಾರರು ತಿರಸ್ಕರಿಸಿದ್ದ ಅಜೆಂಡಾವನ್ನು ವಿರೋಧ ಪಕ್ಷವು ಜಾರಿಗೆ ತರಲು ಬಯಸುತ್ತಿವೆ ಎಂದು ಹೇಳಿದರು.

"ಪ್ರತಿಪಕ್ಷದ ಅತಿದೊಡ್ಡ ಪಕ್ಷವು ಒಬಿಸಿ ಮೀಸಲಾತಿಯನ್ನು ಕಡಿತಗೊಳಿಸಿ, ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತರಲು ಬಯಸುತ್ತಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ನಮ್ಮ ಸಂವಿಧಾನ ರಚನೆಕಾರರು, ವಿಶೇಷವಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂತಹ ಕ್ರಮವನ್ನು ಸಂಪೂರ್ಣವಾಗಿ ವಿರೋಧಿಸಿದ್ದರು" ಎಂದು ಮೋದಿ ಬರೆದಿದ್ದಾರೆ.

ಇದೇ ವೇಳೆ ಸಂಸತ್ತಿನಲ್ಲಿ ವಿರೋಧ ಪಕ್ಷವು ಅಡ್ಡಿಪಡಿಸುವ ಪಾತ್ರವನ್ನು ವಹಿಸುತ್ತಿದೆ ಎಂದು ಅವರು ಆರೋಪಿಸಿದರು.

"ಇದು ಕೇವಲ 'ವಿರೋಧ ಪಕ್ಷ'ವಾಗಿ ಉಳಿಯುವ ಬದಲು, ಅಡ್ಡಿಪಡಿಸುವ ಪಕ್ಷವಾಗಿ ಮಾರ್ಪಟ್ಟಿರುವಂತೆ ತೋರುತ್ತದೆ" ಎಂದು ಅವರು ಬರೆದಿದ್ದಾರೆ. ಅಲ್ಲದೆ, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದು ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಪರ್ಯಾಯವಾಗಲಾರದು ಎಂದು ಅವರು ಹೇಳಿದ್ದಾರೆ.

ಈ ವರ್ಷದ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಅದೇ ವಿರೋಧ ಪಕ್ಷವು ಈ ಮಸೂದೆ ಅಂಗೀಕಾರವಾಗದಂತೆ ತಡೆಯಿತು ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ತಿರಸ್ಕಾರವನ್ನು ವ್ಯಕ್ತಪಡಿಸಿತು ಎಂದು ಆರೋಪಿಸಿದರು.



"ಭಾರತದ 'ನಾರಿ ಶಕ್ತಿ'ಗೆ ನಾನು ಭರವಸೆ ನೀಡುತ್ತೇನೆ. ಅವರಿಗೆ ನ್ಯಾಯ ಒದಗಿಸುವುದನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ," ಎಂದು ಅವರು ಬರೆದಿದ್ದಾರೆ.

ಏಪ್ರಿಲ್‌ನಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಕ್ಷೇತ್ರ ಮರುವಿಂಗಡನೆಯೊಂದಿಗೆ (delimitation) ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನು ಕಲ್ಪಿಸುವ ಗುರಿಯನ್ನು ಹೊಂದಿದ್ದ 'ಸಂವಿಧಾನ (131ನೇ ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿತ್ತು.

ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಔಟ್; ಒಂದೂ ಬಾಲ್‌ ಎದುರಿಸದೆ ಬೌಲ್ಡ್ ಆದ ವಿಂಡೀಸ್‌ ಆಟಗಾರ್ತಿ

ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವುದನ್ನು ವಿರೋಧ ಪಕ್ಷದ ನಾಯಕರು ಆಕ್ಷೇಪಿಸಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್‌ ಅವರು ಈ ಕ್ರಮವನ್ನು "ರಾಜಕೀಯ ಅಧಿಕಾರದಲ್ಲಿನ ಬದಲಾವಣೆ" ಮತ್ತು "ರಾಜಕೀಯ ನೋಟು ಅಮಾನ್ಯೀಕರಣ" ಎಂದು ಬಣ್ಣಿಸಿದ್ದಾರೆ.

ತಮ್ಮ ಲೇಖನದಲ್ಲಿ, ಪ್ರಧಾನಿ ಮೋದಿ ಅವರು "ಐದು ದಶಕಗಳ ಕಾಲ ಭಾರತವನ್ನು ಆಳುವ ಅವಕಾಶವನ್ನು ಹೊಂದಿದ್ದವರನ್ನು" ಗುರಿಯಾಗಿಸಿಕೊಂಡು, ಅವರು ಸಂವಿಧಾನವನ್ನು ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದರು. 1951ರ ಮೊದಲ ತಿದ್ದುಪಡಿಗೆ ಈ ವರ್ಷ 75 ವರ್ಷಗಳು ತುಂಬುತ್ತವೆ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಾರಿಗೆ ಬಂದ 42ನೇ ತಿದ್ದುಪಡಿಗೆ (ಇದು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಮೊಟಕುಗೊಳಿಸಿತ್ತು) 50 ವರ್ಷಗಳು ತುಂಬುತ್ತವೆ ಎಂಬುದನ್ನು ಅವರು ಉಲ್ಲೇಖಿಸಿದರು.

ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು, ಚುನಾಯಿತರಲ್ಲದ ಹಂಗಾಮಿ ಸಂಸತ್ತು 'ಮೂಲಭೂತ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಲು' ಮತ್ತು 'ಸಾರ್ವಜನಿಕ ವಿರೋಧವನ್ನು ಹತ್ತಿಕ್ಕಲು' ಮೊದಲ ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಿತು ಎಂದು ಪ್ರಧಾನಿ ಮೋದಿ ಹೇಳಿದರು.