ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

O Panneer Selvam: ತಮಿಳುನಾಡಿನಲ್ಲಿ NDAಗೆ ಬಿಗ್‌ ಶಾಕ್‌; ಮೈತ್ರಿ ತೊರೆದ ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ

ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ನಾಯಕ, ಓಪಿಎಸ್ ಎಂದೇ ಜನಪ್ರಿಯರಾಗಿರುವ ಓ ಪನ್ನೀರ್‌ಸೆಲ್ವಂ, ಬಿಜೆಪಿ ನೇತೃತ್ವದ NDA ಮೈತ್ರಿಕೂಟ ತೊರೆದಿದ್ದಾರೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ, ಒಪಿಎಸ್ ಬಿಜೆಪಿ ಮೈತ್ರಿಕೂಟದ ಅಡಿಯಲ್ಲಿ ರಾಮನಾಥಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದರು

NDA ಮೈತ್ರಿ ಕೂಟ ತೊರೆದ ಪನ್ನೀರ್‌ಸೆಲ್ವಂ

Vishakha Bhat Vishakha Bhat Jul 31, 2025 4:08 PM

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ನಾಯಕ, ಓಪಿಎಸ್ ಎಂದೇ (O Panneer Selvam) ಜನಪ್ರಿಯರಾಗಿರುವ ಓ ಪನ್ನೀರ್‌ಸೆಲ್ವಂ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ದಿಂದ ಹೊರಬರುವ ನಿರ್ಧಾರವನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಸೆಲ್ವಂ ಈ ನಿರ್ಧಾರವನ್ನು ಘೋಷಿಸಿದ್ದಾರೆ.

ಈ ನಿರ್ಧಾರಕ್ಕೆ ಎನ್‌ಡಿಎ ಮೇಲಿರುವ ಅಸಮಾಧನವೇ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಪನ್ನೀರ್‌ಸೆಲ್ವಂ ಅವರು ಇತ್ತೀಚೆಗೆ ತಮಿಳುನಾಡಿನ ಗಂಗೈಕೊಂಡ ಚೋಳಪುರಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಲುವಾಗಿ ಪತ್ರ ಬರೆದಿದ್ದರು. ಅವರನ್ನು ಭೇಟಿಯಾಗುವುದು ತಮಗೆ "ಅದ್ವಿತೀಯ ಗೌರವ" ಎಂದು ಹೇಳಿದ್ದರು ಮತ್ತು ಔಪಚಾರಿಕವಾಗಿ ಅಪಾಯಿಂಟ್ಮೆಂಟ್ ಕೋರಿದ್ದರು. ಆದಾಗ್ಯೂ, ಅವರಿಗೆ ಮೋದಿ ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ.

ಈ ತಿರಸ್ಕಾರದ ನಂತರ, ಅವರು ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ನಿಧಿಗಳನ್ನು ವಿತರಿಸುವಲ್ಲಿನ ವಿಳಂಬದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರವನ್ನು ಸಾರ್ವಜನಿಕವಾಗಿ ಟೀಕಿಸಿದರು . ಈ ಘಟನೆ ಬಳಿಕ ಅವರು ಮೈತ್ರಿಕೂಟವನ್ನು ತೊರೆದಿದ್ದಾರೆ. , 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಓಪಿಎಸ್ ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಿದರು. "ಪ್ರಸ್ತುತ, ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ. ಭವಿಷ್ಯದಲ್ಲಿ, ಚುನಾವಣೆ ಹತ್ತಿರ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ನಟ ವಿಜಯ್ ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಕೈಜೋಡಿಸುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಿಲ್ಲ.

ಈ ಸುದ್ದಿಯನ್ನೂ ಓದಿ: Tamil Nadu Assembly Election: ಸಮಿಶ್ರ ಸರ್ಕಾರ ರಚನೆಗೆ ಎನ್‌ಡಿಎ ತಂತ್ರ ರೂಪಿಸುತ್ತಿರುವಾಗಲೇ ಮಾಜಿ ಸಚಿವ ಅನ್ವರ್ ರಾಜಾ ಡಿಎಂಕೆಗೆ ಸೇರ್ಪಡೆ

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ, ಒಪಿಎಸ್ ಬಿಜೆಪಿ ಮೈತ್ರಿಕೂಟದ ಅಡಿಯಲ್ಲಿ ರಾಮನಾಥಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅಲ್ಲಿ ಅವರು ಸೋಲನ್ನು ಕಂಡಿದ್ದರು. ಒಂದು ಕಾಲದಲ್ಲಿ ಮಾಜಿ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರ ನೆಚ್ಚಿನವರಾಗಿದ್ದ ಮತ್ತು 50 ವರ್ಷಗಳಿಗೂ ಹೆಚ್ಚು ಕಾಲ ಪಕ್ಷಕ್ಕೆ ಸೇವೆ ಸಲ್ಲಿಸಿದ ಓಪಿಎಸ್ ಪ್ರಸ್ತುತ ಬಲವಾದ ರಾಜಕೀಯ ಆಯ್ಕೆಗಳಿಲ್ಲದೆ ಸಂಕಷ್ಟದಲ್ಲಿದ್ದಾರೆ.