ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yuzvendra Chahal: ಟೀ ಶರ್ಟ್ ಬರಹದ ಮೂಲಕ ಧನಶ್ರೀಗೆ ಖಡಕ್ ಸಂದೇಶ ಒಪ್ಪಿಕೊಂಡ ಚಹಲ್

Sugar Daddy T-Shirt: ವಿಚ್ಛೇದನ ಬಳಿಕ ಧನಶ್ರೀ ಜೀವನಾಂಶಕ್ಕಾಗಿ 60 ಕೋಟಿ ರೂಪಾಯಿಗಳನ್ನು ಕೇಳುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಅವರು ಜೀವನಾಂಶ ರೂಪದಲ್ಲಿ ನನ್ನಿಂದ ಹಣ ಪಡೆಯಲಿಲ್ಲ. ಅವರ ಕುಟುಂಬ ಇದನ್ನು ನಿರಾಕರಿಸಿದರು. ಮಾತುಕತೆ ಪ್ರಕ್ರಿಯೆಯು ಕಷ್ಟಕರವಾಗಿತ್ತು ಎಂದು ಚಾಹಲ್ ಒಪ್ಪಿಕೊಂಡರು.

ಟೀ ಶರ್ಟ್ ಬರಹದ ಮೂಲಕ ಧನಶ್ರೀಗೆ ಖಡಕ್ ಸಂದೇಶ ಒಪ್ಪಿಕೊಂಡ ಚಹಲ್

Abhilash BC Abhilash BC Aug 1, 2025 12:45 PM

ಮುಂಬಯಿ: ಭಾರತದ ತಾರಾ ಕ್ರಿಕೆಟಿಗ ಯಜುವೇಂದ್ರ ಚಹಲ್(Yuzvendra Chahal) ಮತ್ತು ನಟಿ ಧನಶ್ರೀ ವರ್ಮಾ(Dhanashree Verma) ವಿಚ್ಛೇದನ ಪಡೆದು ಸುಮಾರು 4 ತಿಂಗಳು ಕಳೆದಿದೆ. ಇದೀಗ ಚಹಲ್ ವಿಚ್ಛೇದನ ಪಡೆಯಲು ಕಾರಣ ಏನೆಂಬುದನ್ನು ಸಂದರ್ಶನವೊಂದರಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ವಿಚ್ಛೇದನ ಪಡೆಯಲು ಬಾಂದ್ರಾ ಕೌಟುಂಬಿಕ ನ್ಯಾಯಾಲಕ್ಕೆ ಬಂದಿದ್ದ ವೇಳೆ ತಾವು ಧರಿಸಿದ್ದ "ಬಿ ಯುವರ್ ಓನ್ ಶುಗರ್ ಡ್ಯಾಡಿ” ಟೀ ಶರ್ಟ್(Sugar Daddy T-Shirt) ಬಗ್ಗೆಯೂ ಸ್ಪಷ್ಟನೆ ನೀಡಿದಾರೆ.

ಅಂದು ಚಹಲ್‌ ಧರಿಸಿದ್ದ ಈ ಟೀ ಶರ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಧನಶ್ರೀಗೆ ತಿರುಗೇಟು ನೀಡಲೆಂದೇ ಚಹಲ್‌ ಈ ರೀತಿ ಮಾಡಿದ್ದಾರೆ ಎನ್ನಲಾಗಿತ್ತು. ಇದನ್ನು ಚಹಲ್‌ ಇದೀಗ ಒಪ್ಪಿಕೊಂಡಿದ್ದಾರೆ. ಅಂದು ಧನಶ್ರೀಗೆ ಸಲುವಾಗಿಯೇ ನಾನು ಆ ಟೀ ಶರ್ಟ್ ಧರಿಸಿದ್ದೆ ಎಂದು ಚಹಲ್‌ ದೃಢಪಡಿಸಿದ್ದಾರೆ.

ಚಹಲ್‌, ರಾಜ್ ಶಮಾನಿ ಅವರೊಂದಿಗಿನ ಸಂದರ್ಶನದಲ್ಲಿ ಟೀ ಶರ್ಟ್ ಮೇಲಿನ ಸಂದೇಶದ ಬಗ್ಗೆ ಮಾತ ಮಾತನಾಡುತ್ತಾ,"ಮೇರೆಕೋ ನಹಿ ಕರ್ಣ ಥಾ ಡ್ರಾಮಾ (ನಾನು ಯಾವುದೇ ನಾಟಕ ಮಾಡಲು ಬಯಸಲಿಲ್ಲ). ನಾನು ಒಂದು ಸಂದೇಶವನ್ನು ನೀಡಲು ಬಯಸಿದ್ದೆ ಮತ್ತು ಮೈನೇ ವೋ ದೇ ದಿಯಾ (ನಾನು ಅದನ್ನು ಟೀ ಶರ್ಟ್ ಮೂಲಕ ನೀಡಿದ್ದೇನೆ)" ಎಂದು ಹೇಳಿದರು.

ವಿಚ್ಛೇದನ ಬಳಿಕ ಧನಶ್ರೀ ಜೀವನಾಂಶಕ್ಕಾಗಿ 60 ಕೋಟಿ ರೂಪಾಯಿಗಳನ್ನು ಕೇಳುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಅವರು ಜೀವನಾಂಶ ರೂಪದಲ್ಲಿ ನನ್ನಿಂದ ಹಣ ಪಡೆಯಲಿಲ್ಲ. ಅವರ ಕುಟುಂಬ ಇದನ್ನು ನಿರಾಕರಿಸಿದರು. ಮಾತುಕತೆ ಪ್ರಕ್ರಿಯೆಯು ಕಷ್ಟಕರವಾಗಿತ್ತು ಎಂದು ಚಾಹಲ್ ಒಪ್ಪಿಕೊಂಡರು.

ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಕ್ರಿಕೆಟಿಗ ನೃತ್ಯ ಪಾಠಗಳಿಗಾಗಿ ಧನಶ್ರೀ ಅವರನ್ನು ಸಂಪರ್ಕಿಸಿದಾಗ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿತು. ನಂತರ ಡಿಸೆಂಬರ್ 2020 ರಲ್ಲಿ ಈ ಜೋಡಿ ವಿವಾಹವಾದರು. ಆದರೆ ಈ ವರ್ಷದ ಆರಂಭದಲ್ಲಿ ಈ ಜೋಡಿ ವಿಚ್ಛೇದನ ಪಡೆಯಿತು.

ಇದನ್ನೂ ಓದಿ IND vs ENG 5th Test: ಗಾಯಗೊಂಡ ಕ್ರಿಸ್‌ ವೋಕ್ಸ್‌ ಆಡುವುದು ಅನುಮಾನ