ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೆ ಮಾವನ ಉಂಗುರ ಎರಡು ಆಭರಣ ಕಂಪನಿಗಳಿಗೆ ಆರ್ಡರ್, ಸೆ.15ರಂದು ಚಾಲನೆ

ಪ್ರತಿ ಉಂಗುರವೂ ಒಂದು ಗ್ರಾಮ್ ಚಿನ್ನವನ್ನು ಹೊಂದಿರಲಿದೆ. ‘ತಾಯ್ ಮಾಮನ್ ತಂಗ ಮೊದಿರಂ ತಿಟ್ಟಂ’ ಅಥವಾ ‘ಸೋದರಮಾವನ ಚಿನ್ನದ ಉಂಗುರ ಯೋಜನೆ’ಯಡಿಯಲ್ಲಿ ತಮಿಳು ನಾಡು ಸರ್ಕಾ ರವು ಸುಮಾರು 1.28 ಲಕ್ಷ ಚಿನ್ನದ ಉಂಗುರ ಗಳನ್ನು ಸಿದ್ಧಪಡಿಸಲು ಆದೇಶ ಹೊರಡಿಸಿದೆ. ಈ ಉಂಗುರ ಗಳ ಒಟ್ಟು ಬೆಲೆ ಸುಮಾರು 220 ಕೋಟಿ ರು. ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಚೆನ್ನೈ: ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆಯೇ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ರಾಜ್ಯದ ಸರ್ಕಾರಿ ಆಸ್ಪತ್ರೆಗ ಳಲ್ಲಿ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲು ಸಿದ್ಧತೆ ನಡೆಸಿದ್ದಾರೆ. ಭರ್ಜರಿ ಕೊಡುಗೆ ನೀಡಿದ್ದಾರೆ. ನವಜಾತ ಶಿಶುಗಳಿಗೆ ‘ಸೋದ ರಮಾ ವನಿಂದ ಚಿನ್ನದ ಉಂಗುರ’ ಯೋಜನೆ ಯಡಿ ಚಿನ್ನದ ಉಂಗುರಗಳನ್ನು ಸಿದ್ಧಪಡಿಸಲು ತಮಿಳುನಾಡು ಸರ್ಕಾರ ಇಬ್ಬರು ಆಭರಣ ವ್ಯಾಪಾರಿ ಗಳಿಗೆ ಆದೇಶ ನೀಡಿದೆ.

ಪ್ರತಿ ಉಂಗುರವೂ ಒಂದು ಗ್ರಾಮ್ ಚಿನ್ನವನ್ನು ಹೊಂದಿರಲಿದೆ. ‘ತಾಯ್ ಮಾಮನ್ ತಂಗ ಮೊದಿರಂ ತಿಟ್ಟಂ’ ಅಥವಾ ‘ಸೋದರಮಾವನ ಚಿನ್ನದ ಉಂಗುರ ಯೋಜನೆ’ಯಡಿಯಲ್ಲಿ ತಮಿಳು ನಾಡು ಸರ್ಕಾ ರವು ಸುಮಾರು 1.28 ಲಕ್ಷ ಚಿನ್ನದ ಉಂಗುರ ಗಳನ್ನು ಸಿದ್ಧಪಡಿಸಲು ಆದೇಶ ಹೊರಡಿಸಿದೆ. ಈ ಉಂಗುರಗಳ ಒಟ್ಟು ಬೆಲೆ ಸುಮಾರು 220 ಕೋಟಿ ರು. ಎಂದು ಅಧಿಕಾರಿ ಯೊಬ್ಬರು ಶನಿವಾರ ತಿಳಿಸಿದ್ದಾರೆ.

ಇದನ್ನೂ ಓದಿ: Vijay-Trisha: ವಿಚ್ಛೇದನ ಪ್ರಕರಣದ ನಡುವೆ ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!

ಈ ಹಿಂದೆ ಸರ್ಕಾರ ಟೆಂಡರ್ ಕರೆದಿದ್ದಾಗ 441667 ಉಂಗುರಗಳು ಬೇಕೆಂದು ತಿಳಿಸಲಾಗಿತ್ತು. ಈ ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದೊರೈ ಅವರ ಜನ್ಮದಿನವಾದ ಸೆ.15ರಂದು ಚಾಲನೆ ನೀಡಲು ನಿರ್ಧರಿಸ ಲಾಗಿದೆ.

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಫಲಾನುಭವಿಗಳಿಗೆ ಅಗತ್ಯವಿರುವ 1,28,499 ಚಿನ್ನದ ಉಂಗುರ ಗಳನ್ನು ಪೂರೈಸಲು ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮವು ಜೋಯ್ ಅಲುಕ್ಕಾಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್‌ಗೆ 70:30 ಅನುಪಾತದಲ್ಲಿ ಕೆಲಸದ ಆದೇಶ ನೀಡಿದೆ ಎಂದು ಸರ್ಕಾರ ತಿಳಿಸಿದೆ.