ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಬ್ಬ ಹತ್ತಿರ ಬರುತ್ತಿದ್ದಂತೆ ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕಿಂಗ್: ದಾಖಲೆ ಬರೆದ ರೈಲ್ವೆ ಇಲಾಖೆ

2 million train Tickets Booked: ಐಆರ್‌ಸಿಟಿಸಿ ಸೆಪ್ಟೆಂಬರ್ 7ರಂದು ತನ್ನ ಇತಿಹಾಸದಲ್ಲೇ ಒಂದೇ ದಿನದಲ್ಲಿ ಅತ್ಯಧಿಕ ಬುಕಿಂಗ್ ಸಾಧಿಸಿ ದಾಖಲೆ ಬರೆದಿದೆ. ಸೆಪ್ಟೆಂಬರ್ 8 ರಂದು 19,50,699 ಟಿಕೆಟ್‌ಗಳು ಬುಕ್ ಆಗಿದ್ದವು. ಇದು ಕಳೆದ ವರ್ಷದ ಹಬ್ಬದ ಸೀಸನ್‌ನಲ್ಲಿ ದಾಖಲಾಗಿದ್ದ ಅತ್ಯಧಿಕ ಏಕದಿನ ಬುಕಿಂಗ್, 18,40,203 ಟಿಕೆಟ್‌ಗಳ ಸಂಖ್ಯೆಗಿಂತ ಶೇಕಡಾ ಆರರಷ್ಟು ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಸೆ.11: ಹಬ್ಬ ಹತ್ತಿರ ಬರುತ್ತಿದ್ದಂತೆ ರೈಲು ಟಿಕೆಟ್‌ಗಳಿಗೆ (train tickets) ಭಾರಿ ಬೇಡಿಕೆ ಉಂಟಾಗಿದ್ದು, ರೈಲು ಟಿಕೆಟ್ ಬುಕ್ ಮಾಡುವ ಅಧಿಕೃತ ವೇದಿಕೆಯಾದ ಇಂಡಿಯನ್ ರೈಲ್ವೇ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ (IRCTC), ಸೆಪ್ಟೆಂಬರ್ 7ರಂದು ತನ್ನ ಇತಿಹಾಸದಲ್ಲೇ ಒಂದೇ ದಿನದಲ್ಲಿ ಅತ್ಯಧಿಕ ಬುಕಿಂಗ್ ಸಾಧಿಸಿ ದಾಖಲೆ ಬರೆದಿದೆ. ಸೆಪ್ಟೆಂಬರ್ 7ರಂದು ಐಆರ್‌ಸಿಟಿಸಿ ಮೂಲಕ ಒಟ್ಟು 20,06,353 ಟಿಕೆಟ್‌ಗಳನ್ನು ಬುಕ್ ಮಾಡಲಾಗಿದ್ದು, ದಿನನಿತ್ಯದ ಬುಕಿಂಗ್ ಸಂಖ್ಯೆಯು 20 ಲಕ್ಷದ ಗಡಿಯನ್ನು ದಾಟಿರುವುದು ಇದೇ ಮೊದಲ ಬಾರಿಯಾಗಿದೆ.

ಮರುದಿನವೂ ಬೇಡಿಕೆ ಹೆಚ್ಚಾಗಿತ್ತು, ಸೆಪ್ಟೆಂಬರ್ 8 ರಂದು 19,50,699 ಟಿಕೆಟ್‌ಗಳು ಬುಕ್ ಆಗಿದ್ದವು. ಇದು ಕಳೆದ ವರ್ಷದ ಹಬ್ಬದ ಸೀಸನ್‌ನಲ್ಲಿ ದಾಖಲಾಗಿದ್ದ ಅತ್ಯಧಿಕ ಏಕದಿನ ಬುಕಿಂಗ್, 18,40,203 ಟಿಕೆಟ್‌ಗಳ ಸಂಖ್ಯೆಗಿಂತ ಶೇಕಡಾ ಆರರಷ್ಟು ಹೆಚ್ಚಾಗಿದೆ.

ಕಾಯ್ದಿರಿಸಿದ ರೈಲ್ವೆ ಟಿಕೆಟ್‌ಗಳಲ್ಲಿ ಸುಮಾರು ಶೇ. 89 ರಷ್ಟು ಈಗ ಆನ್‌ಲೈನ್‌ನಲ್ಲಿ ಬುಕ್ ಮಾಡಲಾಗುತ್ತಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಹೆಚ್ಚುತ್ತಿರುವ ಸಂಖ್ಯೆಯನ್ನು ನಿಭಾಯಿಸಲು, ಹೊಸ ಸರ್ವರ್‌ಗಳನ್ನು ನಿಯೋಜಿಸಲಾಗಿದ್ದು, ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ.

ಕ್ಲಿಯರ್‌ ಟ್ರಿಪ್‌ ನಲ್ಲಿ ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯ: ಐಆರ್‌ಸಿಟಿಸಿ ಜೊತೆ ಕೈಜೋಡಿಸಿದ ಫ್ಲಿಪ್‌ ಕಾರ್ಟ್ ಅಂಗಸಂಸ್ಥೆ

ಐಆರ್‌ಸಿಟಿಸಿ 2026ರ ಜುಲೈ 15 ರಂದು ಹೊಸ ವೆಬ್‌ಸೈಟ್ ಮತ್ತು ಬಳಕೆದಾರರ ಇಂಟರ್‌ಫೇಸ್ ಅನ್ನು ಪ್ರಾರಂಭಿಸಿತು. ಇದು ಪ್ರಯಾಣಿಕರಿಗೆ ವಿಭಿನ್ನ ವರ್ಗಗಳ ಸೀಟುಗಳ ಲಭ್ಯತೆಯನ್ನು ಒಂದೇ ಪರದೆಯ ಮೇಲೆ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ರೈಲ್ವೆ ಟಿಕೆಟ್ ಬುಕಿಂಗ್ ವೇದಿಕೆಯು ಬಾಟ್‌ಗಳು ಮತ್ತು ವಂಚನೆಯ ಬುಕಿಂಗ್ ಚಟುವಟಿಕೆಗಳ ವಿರುದ್ಧ ತನ್ನ ಕ್ರಮವನ್ನು ತೀವ್ರಗೊಳಿಸಿದೆ. ಐಆರ್‌ಸಿಟಿಸಿ ತನ್ನ ಆಂಟಿ-ಬಾಟ್ ವ್ಯವಸ್ಥೆಯು ಅನುಮಾನಾಸ್ಪದ ಬಾಟ್ ದಟ್ಟಣೆಯನ್ನು ಶೇಕಡಾ 55 ರಿಂದ 65 ರಷ್ಟು ಕಡಿಮೆ ಮಾಡಿದೆ ಎಂದು ಐಆರ್‌ಸಿಟಿಸಿ ಹೇಳಿದೆ.

ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಒಂದು ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಬುಕಿಂಗ್ ವಿಂಡೋ ತೆರೆದ ನಂತರದ ಮೊದಲ 10 ನಿಮಿಷಗಳಲ್ಲಿ, ಬೆಳಗ್ಗೆ 8 ರಿಂದ 8:10ರ ವರೆಗೆ ಅಧಿಕೃತ ಟಿಕೆಟ್ ಏಜೆಂಟ್‌ಗಳು ಟಿಕೆಟ್ ಬುಕ್ ಮಾಡಲು ಅನುಮತಿಸುವುದಿಲ್ಲ. ಬುಕಿಂಗ್ ವಿಂಡೋ ತೆರೆದಾಗ ಟಿಕೆಟ್ ಬುಕ್ ಮಾಡುವ ಬಳಕೆದಾರರಿಗೆ ಆಧಾರ್ ಪರಿಶೀಲನೆ ಕೂಡ ಕಡ್ಡಾಯವಾಗಿದೆ.

ವಂಚನೆಯ ಚಟುವಟಿಕೆಗಳ ವಿರುದ್ಧ ಕೈಗೊಂಡ ಕಠಿಣ ಕ್ರಮದ ಭಾಗವಾಗಿ, ಐಆರ್‌ಸಿಟಿಸಿ (IRCTC) ಬರೋಬ್ಬರಿ 3.04 ಕೋಟಿ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದೆ. ಹಾಗೆಯೇ, 6.33 ಕೋಟಿ ಐಡಿಗಳನ್ನು ಮರು-ಪರಿಶೀಲನೆಗಾಗಿ ಗುರುತಿಸಿದೆ.