Pahalgam terror attack: ಕುತಂತ್ರಿ ಪಾಕ್‌ಗೆ ಮತ್ತೊಂದು ಶಾಕ್; ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳು ಬ್ಯಾನ್; BBC ಗೂ ವಾರ್ನಿಂಗ್
Pak YouTube channels ban: ಪಾಕಿಸ್ತಾನ 16 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್(Pahalgam terror attack) ಮಾಡಲಾಗಿದೆ. ಕೋಮುವಾದ, ಪ್ರಚೋದನಾಕಾರಿ ಮಾಹಿತಿ ಹರಡುತ್ತಿರುವ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಭಾರತ ನಿಷೇಧಿಸಿದೆ. ಇನ್ನು ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.


ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ(Pahalgam terror attack) ಬೆನ್ನಲ್ಲೇ ಭಯೋತ್ಪಾದಕ ಪೋಷಕ ಪಾಕಿಸ್ತಾನದ ವಿರುದ್ಧ ಭಾರತ ಹತ್ತು ಹಲವು ಕ್ರಮಗಳನ್ನು ಕೈಗೊಂಡಿವೆ. ಇದೀಗ ಪಾಕಿಸ್ತಾನ 16 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್(Pak YouTube channels ban) ಮಾಡಲಾಗಿದೆ. ಕೋಮುವಾದ, ಪ್ರಚೋದನಾಕಾರಿ ಮಾಹಿತಿ ಹರಡುತ್ತಿರುವ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಭಾರತ ನಿಷೇಧಿಸಿದೆ. ಇನ್ನು ತಪ್ಪು ಮಾಹಿತಿ ಪಸರಿಸುತ್ತಿರುವ ಆರೋಪದ ಮೇಲೆ ಬಿಬಿಸಿಗೂ ಖಡಕ್ ವಾರ್ನಿಂಗ್ ನೀಡಲಾಗಿದೆ. ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆ ಭಾರತದದಲ್ಲಿ ಬ್ಲಾಕ್(X Account Suspended) ಮಾಡಲಾಗಿತ್ತು.
ಯಾವೆಲ್ಲಾ ಯೂಟ್ಯೂಬ್ ಚ್ಯಾನೆಲ್ಸ್ ಬ್ಯಾನ್?
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತಾರ್ ಶೋಯೆಬ್ ಅಖ್ತರ್ ಅವರ 3.5 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಸೇರಿದಂತೆ ಒಟ್ಟು 16ಚಾನೆಲ್‌ಗಳ ಮೇಲೆ ಬ್ಯಾನ್ ಹೇರಲಾಗಿದೆ. ಜೊತೆಗೆ ಮುನೀಬ್ ಫಾರೂಕ್, ಉಮರ್ ಚೀಮಾ, ಅಸ್ಮಾ ಶಿರಾಜಿ ಮತ್ತು ಇರ್ಷಾದ್ ಭಟ್ಟಿ ಸೇರಿದಂತೆ ಪ್ರಸಿದ್ಧ ಪತ್ರಕರ್ತರ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ. ಈ ಯೂಟ್ಯೂಬ್ ಚಾನೆಲ್‌ಗಳು ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮವೆಂದು ಪರಿಗಣಿಸಲಾದ ವಿಚಾರಗಳನ್ನು ಹರಡುತ್ತಿವೆ, ಜೊತೆಗೆ ಭಾರತ, ಅದರ ಸೇನೆ ಮತ್ತು ಭದ್ರತಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇನ್ನು ಈ ಎಲ್ಲಾ ಚ್ಯಾನೆಲ್‌ಗಳ ಒಟ್ಟು ಚಂದಾದಾರರ ಸಂಖ್ಯೆ ಸುಮಾರು 63 ಮಿಲಿಯನ್.
ಬ್ಯಾನ್ ಆಗಿರುವ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
- ಡಾನ್ ನ್ಯೂಸ್
- ಇರ್ಷಾದ್ ಭಟ್ಟಿ
- ಸಮಾ ಟಿವಿ
- ARY ನ್ಯೂಸ್
- BOL ನ್ಯೂಸ್
- ರಾಟರ್
- ಪಾಕಿಸ್ತಾನದ ರೆಫರೆನ್ಸ್
- ಜಿಯೋ ನ್ಯೂಸ್
- ಸಾಮಾ ಕ್ರೀಡೆ
- GNN
- ಉಜೈರ್ ಕ್ರಿಕೆಟ್
- ಉಮರ್ ಚೀಮಾ ವಿಶೇಷ
- ಅಸ್ಮಾ ಶಿರಾಜಿ
- ಮುನೀಬ್ ಫರೂಗ್
- ಸುನೋ ನ್ಯೂಸ್
- ರಾಜಿ ನಾಮಾ
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಬೆನ್ನಲ್ಲೇ, ಭಾರತವು ಪಾಕಿಸ್ತಾನದ ವಿರುದ್ಧ ಏಳು ಪ್ರಮುಖ ಕ್ರಮಗಳನ್ನು ಘೋಷಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಈ ದಾಳಿಯ ಹಿಂದಿರುವ ಭಯೋತ್ಪಾದಕರನ್ನು ಮತ್ತು ಅವರ ಬೆಂಬಲಿಗರನ್ನು "ಗುರುತಿಸಿ, ಟ್ರ್ಯಾಕ್ ಮಾಡಿ ಮತ್ತು ಶಿಕ್ಷಿಸುವುದಾಗಿ" ಘೋಷಿಸಿದ್ದಾರೆ. "ಭಯೋತ್ಪಾದಕರನ್ನು ಭೂಮಿಯ ಯಾವುದೇ ಮೂಲೆಯಲ್ಲಿದ್ದರೂ ಬೆನ್ನಟ್ಟಿ ಸದೆಬಡಿಯುತ್ತೇವೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Pahalgam Attack: ಪಹಲ್ಗಾಮ್ ದಾಳಿ ನಡೆದ ವಾರದೊಳಗೆ ಮತ್ತೆ ಪ್ರವಾಸಿಗರ ಕಲರವ; ಚಿಗುರಿದ ಭರವಸೆ