ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರ‍್ಯಾಪಿಡೋ ಬುಕ್ ಮಾಡಿದ ಯುವತಿಗೆ ಸರ್‌ಪ್ರೈಸ್‌: ಸಾಮಾನ್ಯ ಸ್ಕೂಟರ್‌ ಬದಲಿಗೆ ಬಂದಿದ್ದು BMW ಬೈಕ್!

Viral Video: ಸಾಮಾನ್ಯವಾಗಿ ರ‍್ಯಾಪಿಡೋ ಬುಕ್ ಮಾಡಿದಾಗ ಸ್ಕೂಟರ್ ಅಥವಾ ಸಾಮಾನ್ಯ ಬೈಕ್‌ಗಳು ಬಂದು ಗ್ರಾಹಕರನ್ನು ಆಯ್ದ ಸ್ಥಳಕ್ಕೆ ತಲುಪಿಸುತ್ತವೆ. ಆದರೆ ಮುಂಬೈಯ ಮಹಿಳೆಯೊಬ್ಬರು ರ‍್ಯಾಪಿಡೋ ಬುಕ್ ಮಾಡಿದಾಗ ಅವರಿಗೆ ಅಚ್ಚರಿ ಕಾದಿತ್ತು‌. ಸವಾರನು ಐಷಾರಾಮಿ BMW ಬೈಕ್‌ನ ಪಿಕ್‌ಅಪ್‌ ಮಾಡಲು ಮೂಲಕ ಆಗಮಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ರ‍್ಯಾಪಿಡೋ ಬುಕ್ ಮಾಡಿದ ಯುವತಿ: ಐಷಾರಾಮಿ ಬೈಕ್ ನೋಡಿ ಶಾಕ್

BMW ಬೈಕ್‌ನಲ್ಲಿ ಬಂದ ಯುವಕ -

Profile
Pushpa Kumari Mar 3, 2026 9:02 PM

ಮುಂಬೈ, ಮಾ. 3: ಈಗೆಲ್ಲ ಓಲಾ, ಊಬರ್​​, ರ‍್ಯಾಪಿಡೋ ಬುಕ್ ಮಾಡಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಕಡಿಮೆ ಬೆಲೆಗೆ ಸುಲಭವಾಗಿ ಗಮ್ಯ ತಲುಪಲು ರ‍್ಯಾಪಿಡೋ ಉತ್ತಮ ಆಯ್ಕೆ. ಸಾಮಾನ್ಯವಾಗಿ ರ‍್ಯಾಪಿಡೋ ಬುಕ್ ಮಾಡಿದಾಗ ಸ್ಕೂಟರ್ ಅಥವಾ ಸಾಮಾನ್ಯ ಬೈಕ್‌ಗಳು ಬಂದು ಗ್ರಾಹಕರನ್ನು ಆಯ್ದ ಸ್ಥಳಕ್ಕೆ ತಲುಪಿಸುತ್ತವೆ. ಆದರೆ ಮುಂಬೈಯ ಮಹಿಳೆಯೊಬ್ಬರು ರ‍್ಯಾಪಿಡೋ ಬುಕ್ ಮಾಡಿದಾಗ ಅವರಿಗೆ ಅಚ್ಚರಿ ಕಾದಿತ್ತು‌. ಸವಾರನು ಐಷಾರಾಮಿ BMW ಬೈಕ್‌ನ ಮೂಲಕ ಆಗಮಿಸಿದ್ದು, ಈ ವಿಡಿಯೊವನ್ನು (Viral Video) ಮಹಿಳೆ ಶೇರ್ ಮಾಡಿಕೊಂಡಿದ್ದಾರೆ.

ಮಹಿಳೆ ರೈಡ್-ಹೇಲಿಂಗ್ ಅಪ್ಲಿಕೇಶನ್ ಮೂಲಕ ಬೈಕ್ ಬುಕ್ ಮಾಡಿ ತನ್ನ ಚಾಲಕ ಬರುವವರೆಗೆ ರಸ್ತೆಬದಿಯಲ್ಲಿ ಕಾಯುತ್ತಿದ್ದರು. ಶೀಘ್ರದಲ್ಲೇ ತನ್ನ ಪಿಕಪ್ ನಿರೀಕ್ಷಿಸಿ, ಸವಾರ ವಾಹನ ನಿಲ್ಲಿಸುವವರೆಗೂ ತಾಳ್ಮೆಯಿಂದ ನಿಂತಿದ್ದಳು.ಬ ಸಾಮಾನ್ಯ ಬೈಕ್‌ ಬರುತ್ತದೆ ಎಂದು ನಿರೀಕ್ಷಿಸುತ್ತಿದ್ದವರಿಗೆ ಅಚ್ಚರಿ ಕಾದಿತ್ತು. ಐಷಾರಾಮಿ ಬೈಕ್ ನೋಡಿದ ಕ್ಷಣ ಬೆರಗಾಗಿದ್ದಾರೆ.‌ ಅವರು ಬೈಕ್ ಬುಕ್ ಮಾಡಿ ಕಾಯುತ್ತಿದ್ದಾಗ, ಅವರ ಮುಂದೆ ಬಂದು ನಿಂತಿದ್ದು ಒಂದು ಐಷಾರಾಮಿ BMW ಬೈಕ್ ಆಗಿತ್ತು.

ವಿಡಿಯೊ ನೋಡಿ:

ಚಾಲಕ ಬಂದಾಗ ಆಕೆ ಒಂದು ಕ್ಷಣ ಬೆಚ್ಚಿಬಿದ್ದರು. ಬಂದಿದ್ದ ಚಾಲಕ ಕೇವಲ ಸ್ಮಾರ್ಟ್ ಆಗಿ ಕಾಣುತ್ತಿರಲಿಲ್ಲ, ಬದಲಿಗೆ ಅತ್ಯಂತ ದುಬಾರಿ ಬೈಕ್‌ನಲ್ಲಿ ಎಂಟ್ರಿ ನೀಡಿದ್ದರು. ಅವನು ಬೂದು ಬಣ್ಣದ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್‌‌ ಧರಿಸಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್; ವೈರಲ್‌ ಆಗ್ತಿರೋ ವಿಡಿಯೋ ನೋಡಿ

ಇದನ್ನು ಕಂಡ ಯುವತಿ ತಮಾಷೆಯಾಗಿ, "ಭಯ್ಯಾ, ನೀವು ಸಿಂಗಲ್ ಆ?" ಎಂದು ಕೇಳುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆದ ನಂತರ ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಒಬ್ಬರು ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.

ವಿಡಿಯೊದ ಅಸಲಿಯತ್ತೇನು?

ಈ ವಿಡಿಯೊದ ಅಸಲಿಯತ್ತು ಇದೀಗ ಹೊರ ಬಿದ್ದಿದೆ. ಬೈಕ್ ಸವಾರ ಮತ್ತು ವಿಡಿಯೊ ಮಾಡಿದ ಮಹಿಳೆ ಸ್ನೇಹಿತರಾಗಿದ್ದಾರೆ.‌ ಕೇವಲ ಮನರಂಜನೆಗಾಗಿ ಈ ಸ್ಕ್ರಿಪ್ಟೆಡ್ ವಿಡಿಯೊ ಮಾಡಲಾಗಿದೆ ಎಂದು ತಿಳಿದು ಬಂದಿದೆ.