ಪಹಲ್ಗಾಮ್: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯಲ್ಲಿ ಹತನಾದ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ (Navy officer Vinay Narwal) ಅವರ ಕೊನೆಯ ವಿಡಿಯೋ ಎನ್ನಲಾದ ದೃಶ್ಯ ಬಹಿರಂಗವಾಗಿದೆ. 18 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ವಿನಯ್ ತಮ್ಮ ಪತ್ನಿ ಹಿಮಾಂಶಿ (Himanshi) ಜೊತೆ ಪಾಕಿಸ್ತಾನಿ ಗೀತೆ "ಝೋಲ್"ಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಇತ್ತೀಚೆಗೆ ವಿವಾಹವಾದ ಈ ಜೋಡಿ, ಸುಂದರವಾದ ಪ್ರಕೃತಿ ಸೌಂದರ್ಯದ ಹಿನ್ನೆಲೆಯಲ್ಲಿ ರೊಮ್ಯಾಂಟಿಕ್ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ಜೋಡಿ ಏಪ್ರಿಲ್ 16 ರಂದು ವಿವಾಹವಾಗಿತ್ತು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕೆಲವರು, ಇದು ವಿನಯ್ ನರ್ವಾಲ್ ಅವರ ಕೊನೆಯ ವಿಡಿಯೋ ಎಂದು ಹೇಳಿಕೊಂಡಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹತನಾದ ಲೆಫ್ಟಿನೆಂಟ್ ವಿನಯ್ ಅವರ ಪತ್ನಿ, ತಮ್ಮ ಪತಿಯ ಪಾರ್ಥಿವ ಶರೀರಕ್ಕೆ ಕಣ್ಣೀರಿನ ವಿದಾಯ ಹೇಳಿದರು. ವಿಡಿಯೋದಲ್ಲಿ ಪತ್ನಿ ಗದ್ಗದಿತಳಾಗಿ ಅಳುತ್ತಿರುವುದು ಮತ್ತು ಪತಿಯ ಮೃತದೇಹವನ್ನು ಅಪ್ಪಿಕೊಂಡಿರುವುದು ಕಂಡುಬಂದಿದೆ. "ನಾವು ಪ್ರತಿದಿನ ಆತನ ಬಗ್ಗೆ ಹೆಮ್ಮೆ ಪಡುತ್ತೇವೆ, ನಾವೆಲ್ಲರೂ ಆತನ ಬಗ್ಗೆ ಹೆಮ್ಮೆ ಪಡಬೇಕು," ಎಂದು ಪತ್ನಿ ಹೇಳಿದರು. "ಆತನ ಆತ್ಮಕ್ಕೆ ಶಾಂತಿ ಸಿಗಲಿ. ಆತ ಎಲ್ಲಿದ್ದರೂ ಅತ್ಯುತ್ತಮ ಜೀವನವನ್ನು ಪಡೆಯಲಿ. ಆತನಿಂದಾಗಿಯೇ ನಾವಿನ್ನೂ ಜೀವಂತವಾಗಿದ್ದೇವೆ" ಎಂದು ಮೃತ ಪತಿಗೆ ವಿದಾಯ ಹೇಳುವಾಗ ಧೈರ್ಯವನ್ನು ತೋರಿದರು.
ವೈರಲಾಗ್ತಿರುವ ವಿಡಿಯೊ ಇಲ್ಲಿದೆ
ಆದರೆ, ಎಕ್ಸ್‌ನ ಕೆಲವು ಬಳಕೆದಾರರು ಈ ವಿಡಿಯೋ ವಿನಯ್ ನರ್ವಾಲ್ ಮತ್ತು ಆತನ ಪತ್ನಿಯದ್ದಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ FPJ ಯಾವುದೇ ಖಾತರಿಯನ್ನು ನೀಡಿಲ್ಲ.
ಈ ಸುದ್ದಿಯನ್ನು ಓದಿ: Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರಿಂದ ಮೃತಪಟ್ಟ ಭರತ್ ಭೂಷಣ್ ಅಂತಿಮ ದರ್ಶನ ಮಾಡಿದ ಸಿಎಂ
ಇತ್ತ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದು ದಿನ ಬಳಿಕ ಬುಧವಾರ ದಕ್ಷಿಣ ಕಾಶ್ಮೀರದ ಕುಲ್ಗಾಂನ ತಂಗ್ಮಾರ್ಗ್ ಪ್ರದೇಶದಲ್ಲಿ ಭಯೋತ್ಪಾದಕರ ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ಆರಂಭವಾಗಿದೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಎತ್ತರದ ಬೈಸಾರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಟ್ಟು 28 ಜನರು ಹತರಾಗಿದ್ದರು.