Pahalgam Terror Attack: ಪಹಲ್ಗಾಮ್ ಉಗ್ರರ ದಾಳಿ ರೂವಾರಿ ಶಹೀದ್ ಕುಟ್ಟೆ ಎನ್‌ಕೌಂಟರ್
Terrorist Encounter: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಆರೋಪಿ ಶಾಹಿದ್ ಅಹ್ಮದ್ ಕುಟ್ಟೆ ಸೇನಾ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಪಹಲ್ಗಾಮ್ ದಾಳಿ ಬಳಿಕ ಶೋಪಿಯಾನ್‌ನ ಚೋಟಿಪೋರಾದಲ್ಲಿರುವ ಶಾಹಿದ್ ಕುಟ್ಟೆ ಮನೆಯನ್ನು ಸಹ ಭದ್ರತಾ ಪಡೆಗಳು ನೆಲಸಮಗೊಳಿಸಿದ್ದವು. ಕುಟ್ಟೆ ಲಷ್ಕರ್-ಎ-ತೈಬಾದ ಪ್ರಾಕ್ಸಿ ಗ್ರೂಪ್ ಟಿಆರ್‌ಎಫ್‌ನ ಪ್ರಮುಖ ಕಮಾಂಡರ್ ಆಗಿದ್ದ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಸದೆ ಬಡಿಯಲಾಗಿದೆ(Terrorist Encounter). ಹತರಾದ ಉಗ್ರರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Terror Attack) ಆರೋಪಿ ಶಾಹಿದ್ ಅಹ್ಮದ್ ಕುಟ್ಟೆ ಒಬ್ಬ ಸೇರಿದ್ದಾನೆ ಎನ್ನಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಪಹಲ್ಗಾಮ್ ದಾಳಿ ಬಳಿಕ ಶೋಪಿಯಾನ್‌ನ ಚೋಟಿಪೋರಾದಲ್ಲಿರುವ ಶಾಹಿದ್ ಕುಟ್ಟೆ ಮನೆಯನ್ನು ಸಹ ಭದ್ರತಾ ಪಡೆಗಳು ನೆಲಸಮಗೊಳಿಸಿದ್ದವು. ಕುಟ್ಟೆ ಲಷ್ಕರ್-ಎ-ತೈಬಾದ ಪ್ರಾಕ್ಸಿ ಗ್ರೂಪ್ ಟಿಆರ್‌ಎಫ್‌ನ ಪ್ರಮುಖ ಕಮಾಂಡರ್ ಆಗಿದ್ದ. ಮಾಹಿತಿಯ ಪ್ರಕಾರ, ಶಾಹಿದ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಬೆಳಗ್ಗೆ ಕುಲ್ಗಾಮ್ ಜಿಲ್ಲೆಯಲ್ಲಿ ಸೇನಾ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಇದಾದ ನಂತರ ಭಯೋತ್ಪಾದಕರು ಶೋಪಿಯಾನ್‌ಗೆ ಎಸ್ಕೇಪ್ ಆಗಿದ್ದರು. ಅವರನ್ನು ಬೆನ್ನಟ್ಟಿದ ಸೇನೆ ಎನ್‌ಕೌಂಟರ್ ಮಾಡಿತ್ತು. ಮೂವರು ಉಗ್ರರು ಸೇನೆಯ ಗುಂಡೇಟಿಗೆ ಸ್ಥಳದಲ್ಲೇ ಹತರಾದರು.
ಶಾಹಿದ್ ಕುಟ್ಟೆ ಯಾರು?
ಕುಟ್ಟೆ ಶೋಪಿಯಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಹಲವಾರು ಭಯೋತ್ಪಾದಕ ಘಟನೆಗಳಲ್ಲಿ ಭಾಗಿಯಾಗಿದ್ದಾನೆಂದು ನಂಬಲಾಗಿದೆ. ಅವರು ಲಷ್ಕರ್-ಎ-ತೊಯ್ಬಾದ ನೇಮಕಾತಿ, ತರಬೇತಿ ಮತ್ತು ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಸಕ್ರಿಯನಾಗಿದ್ದ. ಭಾರತೀಯ ಭದ್ರತಾ ಸಂಸ್ಥೆಗಳ ಪ್ರಕಾರ, ಆತ ಅನೇಕ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಿಸಿಕೊಳ್ಳುವಲ್ಲಿ ಭಾಗಿಯಾಗಿದ್ದ. ಲಷ್ಕರ್-ಎ-ತೊಯ್ಬಾ ಜಾಲವನ್ನು ನಿರ್ವಹಿಸುವಲ್ಲಿ ಕುಟ್ಟೆ ಪ್ರಮುಖ ಪಾತ್ರ ವಹಿಸಿದ್ದಾನೆಂದು ನಂಬಲಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತಿದ್ದ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು, ಸ್ಫೋಟಕ ಪೂರೈಕೆ ಮತ್ತು ಹಣಕಾಸು ಸಂಗ್ರಹದಲ್ಲಿ ಭಾಗಿಯಾಗಿದ್ದ. ಕುಟ್ಟೆ ಸಿಆರ್‌ಪಿಎಫ್ ಮತ್ತು ಇತರ ಭದ್ರತಾ ಪಡೆಗಳ ಮೇಲೆ ದಾಳಿಗಳನ್ನು ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Amitabh Bachchan: ಪಹಲ್ಗಾಮ್ ದಾಳಿಯ 20 ದಿನಗಳ ನಂತರ ಅಮಿತಾಭ್ ಪಸ್ಟ್ ರಿಯಾಕ್ಷನ್
ಪಹಲ್ಗಾಮ್ ಉಗ್ರರ ಪತ್ತೆಗೆ 20 ಲಕ್ಷ ಬಹುಮಾನ
ಆಪರೇಷನ್ ಸಿಂಧೂರ್‌ನಲ್ಲಿ ಭಯೋತ್ಪಾದಕ ಅಡಗುತಾಣಗಳ ಎಲ್ಲಾ ಕುರುಹುಗಳನ್ನು ನಿರ್ಮೂಲನೆ ಮಾಡಿದ ನಂತರ, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಅಮಾಯಕ ಜನರನ್ನು ಕ್ರೂರವಾಗಿ ಕೊಂದ ಭಯೋತ್ಪಾದಕರಿಗಾಗಿ ಎನ್‌ಐಎ ಮತ್ತು ಸೇನೆ ಬಲೆ ಬೀಸಿದೆ. ದಕ್ಷಿಣ ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ, ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಸೇರಿದಂತೆ 3 ಭಯೋತ್ಪಾದಕರ ಚಿತ್ರಗಳನ್ನು ಪೊಲೀಸರು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಈ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗೆ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡುವವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಹೇಳಲಾಗಿದೆ.