ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಗೆ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್

ಭಾರತದ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಡ್ರೋನ್ ಒಳಗೆ ಬಂದಿದ್ದು, ಭಾರತೀಯ ಸೇನೆಯು ಅದರ ಮೇಲೆ ಗುಂಡಿನ ದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಪಾಕಿಸ್ತಾನದ ಡ್ರೋನ್ ಗಳು ಭಾರತದೊಳಗೆ ಪ್ರವೇಶಿಸಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ಪೂಂಚ್: ಜಮ್ಮು ಮತ್ತು ಕಾಶ್ಮೀರದ (Jammu and kashmir) ಪೂಂಚ್ ಜಿಲ್ಲೆಯ (Poonch district) ನಿಯಂತ್ರಣ ರೇಖೆ (Line of Control) ಯನ್ನು ದಾಟಿ ಭಾರತದೊಳಗೆ ಪಾಕಿಸ್ತಾನದ (Pakistan) ಡ್ರೋನ್ (drone) ಪ್ರವೇಶಿಸಿದೆ. ಇದನ್ನು ನೋಡಿದ ಭಾರತೀಯ ಸೇನೆಯು (Indian army) ತಕ್ಷಣ ಅದರ ಮೇಲೆ ಗುಂಡಿನ ದಾಳಿ ನಡೆಸಿದೆ. ಭಾನುವಾರ ಮುಂಜಾನೆ 6.10ರ ಸುಮಾರಿಗೆ ಪಾಕಿಸ್ತಾನದ ಡ್ರೋನ್ ಪೂಂಚ್ ಜಿಲ್ಲೆಯ ದಿಗ್ವಾರ್ ಪ್ರದೇಶದಲ್ಲಿ ಸುತ್ತಾಡಿದ್ದು, ಇದರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿತ್ತು. ತಕ್ಷಣವೇ ಅದು ತಪ್ಪಿಸಿಕೊಂಡು ಹಿಂದಿರುಗಿತ್ತು ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಇದೀಗ ಎರಡನೇ ಬಾರಿಗೆ ಪಾಕಿಸ್ತಾನದ ಡ್ರೋನ್ ಭಾರತದ ಗಡಿ ದಾಟಿ ಒಳಗೆ ನುಸುಳಿವೆ. ಪೂಂಚ್ ಜಿಲ್ಲೆಯ ದಿಗ್ವಾರ್ ಪ್ರದೇಶದಲ್ಲಿ ಸ್ವಲ್ಪ ಸಮಯ ಸುತ್ತಾಡಿದ ಡ್ರೋನ್ ಬಳಿಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಮರಳಿತು. ಭಾರತೀಯ ಸೇನಾ ಪಡೆಯು ಡ್ರೋನ್ ಚಲನೆಯನ್ನು ಪತ್ತೆ ಹಚ್ಚಿ ಅದರ ಮೇಲೆ ಗುಂಡಿನ ದಾಳಿ ನಡೆಸಿತ್ತು.

ಅಮೆರಿಕ-ಇಸ್ರೇಲ್ ಜಂಟಿ ದಾಳಿ; ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತ್ಯೆ

ಗಡಿ ನಿಯಂತ್ರಣ ರೇಖೆಯ ಬಳಿಯ ಮುಂಭಾಗದ ಪೋಸ್ಟ್ ಅನ್ನು ನಿರ್ವಹಿಸುತ್ತಿದ್ದ ಭಾರತೀಯ ಸೇನಾ ಪಡೆಯು ಭಾನುವಾರ ಬೆಳಗ್ಗೆ 6.10 ರ ಸುಮಾರಿಗೆ ಡ್ರೋನ್ ಅನ್ನು ಗಮನಿಸಿ ಅದನ್ನು ಉರುಳಿಸಲು ಒಂದು ಡಜನ್‌ಗೂ ಹೆಚ್ಚು ಸುತ್ತು ಗುಂಡುಗಳನ್ನು ಹರಿಸಿದರು. ಆದರೆ ಡ್ರೋನ್ ಗುಂಡಿನ ದಾಳಿಯನ್ನು ತಪ್ಪಿಸಿಕೊಂಡು ತಕ್ಷಣವೇ ಹಿಂದಿರುಗಿತ್ತು.

ದುಬೈ ಏರ್‌ಪೋರ್ಟ್‌ ಮೇಲೆ ಇರಾನ್‌ ದಾಳಿ; ಡ್ರೋನ್ ಪ್ರತಾಪ್ ಸೇರಿ 150 ಕ್ಕೂ ಹೆಚ್ಚು ಕನ್ನಡಿಗರು ನಿಲ್ದಾಣದಲ್ಲೇ ಲಾಕ್‌!

ಪಾಕಿಸ್ತಾನದ ಡ್ರೋನ್ ಯಾವುದೇ ದಾಳಿಯಾಗಿಲ್ಲ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಫೆಬ್ರವರಿ 27 ರಂದು ಇದೇ ಪ್ರದೇಶದಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿದ್ದು, ಆಗಲೂ ಭಾರತೀಯ ಸೇನಾ ಪಡೆ ಅದರ ಮೇಲೆ ಗುಂಡಿನ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author