ಚಂಡೀಗಢ, ಮಾ.14: ಪಾಕಿಸ್ತಾನದ ಐಎಸ್‌ಐ ಬೆಂಬಲಿತ (Pakistan ISI link) ಭಯೋತ್ಪಾದನಾ ಹಾಗೂ ಗಡಿಪಾರು ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಪಂಜಾಬ್‌ನ ಅಮೃತಸರ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ (Punjab Police operation). ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ (DGP) ತಿಳಿಸಿದ್ದಾರೆ.
ಬಂಧಿತರಿಂದ ರೈಫಲ್‌ಗಳು, ಪಿಸ್ತೂಲು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಜಾಲವು ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವ ಉದ್ದೇಶ ಹೊಂದಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ವಿದೇಶಿ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಈ ಜಾಲವು ಯುವಕರನ್ನು ಭಾರತದ ವಿರುದ್ಧ ಎತ್ತಿಕಟ್ಟುವುದು ಹಾಗೂ ಭಾರತ ವಿರೋಧಿ ಮತ್ತು ಪೊಲೀಸ್ ವಿರೋಧಿ ಪ್ರಚಾರಗಳನ್ನು ಹರಡುವ ಕಾರ್ಯಗಳಲ್ಲಿ ತೊಡಗಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
"ಪಾಕಿಸ್ತಾನದ ಅತೀ ದೊಡ್ಡ ರಫ್ತು ಭಯೋತ್ಪಾದನೆ"; ಟ್ರಂಪ್ ಆಪ್ತೆಯಿಂದಲೇ ಅಮೆರಿಕಕ್ಕೆ ಎಚ್ಚರಿಕೆ
ಅಮೃತಸರ ಗ್ರಾಮೀಣದ ಘರಿಂಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜಾಲದ ಮುಂದಿನ ಹಾಗೂ ಹಿಂದಿನ ಸಂಪರ್ಕಗಳನ್ನು ಪತ್ತೆಹಚ್ಚಿ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ. ಭಯೋತ್ಪಾದನೆ, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಗಳ ವಿರುದ್ಧ ಪಂಜಾಬ್ ಪೊಲೀಸ್ ಶೂನ್ಯ ಸಹಿಷ್ಣುತೆ ನೀತಿಯನ್ನು ಮುಂದುವರಿಸುತ್ತದೆ ಎಂದು ಪಂಜಾಬ್ ಪೊಲೀಸ್ ಡಿಜಿಪಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ 2 ಮ್ಯಾಗಜೀನ್‌ಗಳು ಮತ್ತು 36 ಲೈವ್ ಕಾರ್ಟ್ರಿಡ್ಜ್‌ಗಳು, ಒಂದು AK-47 ರೈಫಲ್ ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು ಫೆಬ್ರವರಿ 22ರಂದು, ಕೌಂಟರ್ ಇಂಟೆಲಿಜೆನ್ಸ್ ಜಲಂಧರ್ ಹಾಗೂ ಎಸ್‌ಎಎಸ್ ನಗರ ಕೌಂಟರ್ ಇಂಟೆಲಿಜೆನ್ಸ್ ತಂಡಗಳು ಸಂಯುಕ್ತ ಕಾರ್ಯಾಚರಣೆ ನಡೆಸಿ, 2026ರ ಜನವರಿ 1ರಂದು ಹಿಮಾಚಲ ಪ್ರದೇಶದ ನಾಳಾಗಢ್ ಪೊಲೀಸ್ ಠಾಣೆಯಲ್ಲಿ ನಡೆದ ಐಇಡಿ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಷ್ಯಾ ಒಟ್ಟಾಗಿ ನಿಂತಿವೆ; ಮೋದಿ
ಪ್ರಕಟಣೆಯ ಪ್ರಕಾರ, ಬಂಧಿತ ಆರೋಪಿಗಳನ್ನು ಮಹಾವೀರ್ ಅಲಿಯಾಸ್ ಕಾಕಾ ಮತ್ತು ಮನ್‌ಪ್ರೀತ್ ಅಲಿಯಾಸ್ ಮಣಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪಂಜಾಬ್‌ನ ಎಸ್‌ಬಿಎಸ್ ನಗರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಆರೋಪಿಗಳ ಬಳಿಯಿಂದ ಒಂದು 9 ಮಿಮೀ ಗ್ಲಾಕ್ ಪಿಸ್ತೂಲು ಹಾಗೂ ಲೈವ್ ಕಾರ್ಟಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ನೊಂದಿಗೆ ಸಂಬಂಧ ಹೊಂದಿರುವ ವಿದೇಶಿ ಮೂಲದ ಮಾಸ್ಟರ್‌ಮೈಂಡ್‌ಗಳಾದ ಗೋಪಿ ನವಾಶೇರಿಯಾ ಮತ್ತು ಜಸ್ಸಿ ಕುಲಂ ಅವರ ನಿರ್ದೇಶನದಡಿ ಆರೋಪಿಗಳು ಕಾರ್ಯನಿರ್ವಹಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ.
ಹೆಚ್ಚಿನ ತನಿಖೆಯಲ್ಲಿ ಆರೋಪಿಗಳು ತಮ್ಮ ಸಹಚರರೊಂದಿಗೆ ಸೇರಿ ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳ ಸೂಚನೆಯ ಮೇರೆಗೆ IED ಹಾಗೂ ಹ್ಯಾಂಡ್ ಗ್ರೆನೇಡ್‌ಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ನಲಗಢ ಪೊಲೀಸ್ ಠಾಣೆಯಲ್ಲಿ ಸ್ಫೋಟ ನಡೆಸಲು ಒಂದು ಐಇಡಿ (ಆರ್‌ಡಿಎಕ್ಸ್) ಬಳಸಲಾಗಿದೆ.