ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಲಕ್ಕಾಡ್‌ನಲ್ಲಿ ಭೀಕರ ಅಪಘಾತ: 9 ಜನ ಸಾವು

ಪಾಲಕ್ಕಾಡ್‌ನಲ್ಲಿ ಭೀಕರ ಅಪಘಾತ: 9 ಜನ ಸಾವು

image-0c8c09ac-09e0-4e73-86d6-794bc7a24cfa.jpg
ಪಾಲಕ್ಕಾಡ್‌: ಕೇರಳದ ಪಾಲಕ್ಕಾಡ್‌ನಲ್ಲಿ ಭೀಕರ ಅಪಘಾತ ಸಂಭವಿಸಿ 9 ಜನ ಸಾವು ಕಂಡಿದ್ದು, 35 ಮಂದಿ ಗಾಯಗೊಂಡಿ ದ್ದಾರೆ. ಬುಧವಾರ ರಾತ್ರಿ ಪಾಲಕ್ಕಾಡ್‌ ನ ವಡಕ್ಕೆಂಚೇರಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಪ್ರವಾಸಿ ವಾಹನವು ಕೇರಳ ಸರ್ಕಾರಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪ್ರವಾಸಿ ಬಸ್ ವಡಕ್ಕೆಂಚೇರಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗೆ ಹಿಂಬದಿ ಯಿಂದ ಡಿಕ್ಕಿ ಹೊಡೆದು ಐವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮೂವರು ಕೆಎಸ್‌ ಆರ್‌ಟಿಸಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಗಾಯಗೊಂಡ 35 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವಾಸಿ ಬಸ್ ನಲ್ಲಿ ಎರ್ನಾಕುಲಂ ಜಿಲ್ಲೆಯ ಬಸೆಲಿಯೋಸ್ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದರು. ಅವರು ತಮಿಳುನಾಡಿನ ಊಟಿ ಕಡೆಗೆ ಹೊರಟಿದ್ದು, ಬಸ್ ಕೊಯಮತ್ತೂರು ಕಡೆಗೆ ಹೋಗುತ್ತಿತ್ತು.