ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಾನವೀಯ ಆಧಾರದಲ್ಲಿ ಇರಾನ್ ನೌಕೆಗೆ ಕೊಚ್ಚಿ ಬಂದರಿನಲ್ಲಿ ನಿಲ್ಲಲು ಅನುಮತಿ: ಜೈ ಶಂಕರ್

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಸೋಮವಾರ ರಾಜ್ಯ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮಾನವೀಯ ಆಧಾರದಲ್ಲಿ ಇರಾನ್ ನೌಕೆಗೆ ಕೊಚ್ಚಿ ಬಂದರಿನಲ್ಲಿ ನಿಲ್ಲಲು ಅನುಮತಿ ನೀಡಿರುವುದಾಗಿ ಹೇಳಿ, ಇದು ಸಂಘರ್ಷ ಸಮಯದಲ್ಲಿ ಮಾಡಬೇಕಾದ ಸರಿಯಾದ ಕೆಲಸ ತಿಳಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಕೊಚ್ಚಿ ಬಂದರಿನಲ್ಲಿ (Kochi port) ಇರಾನಿನ ಹಡಗಿಗೆ ಡಾಕಿಂಗ್ ಮಾಡಲು ಮಾನವೀಯತೆಯ ಆಧಾರದ ಮೇಲೆ ಅನುಮತಿ ನೀಡಲಾಗಿದೆ. ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಸಂಘರ್ಷದ ಈ ಸಂದರ್ಭದಲ್ಲಿ ಇದು ಮಾಡಬೇಕಾದ ಸರಿಯಾದ ಕೆಲಸ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (External Affairs Minister S Jaishankar) ಹೇಳಿದರು. ರಾಜ್ಯ ಸಭೆಯಲ್ಲಿ (Rajya sabha) ಸೋಮವಾರ ಮಾತನಾಡಿದ ಅವರು, ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನೇರ ಮಿಲಿಟರಿ ದಾಳಿಯ ನಡುವೆ ನಡೆದಿದೆ ಎಂದು ತಿಳಿಸಿದರು.

ಕಳೆದ ಫೆಬ್ರವರಿ 28 ರಂದು ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಇರಾನ್ ನಡೆಸುತ್ತಿರುವ ಪ್ರತೀಕಾರ ದಾಳಿಗೆ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ಇರಾನ್ ಮೇಲೆ ಯುಎಸ್ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿಗಳನ್ನು ಮುಂದುವರಿಸುತ್ತಲೇ ಇರುವುದರಿಂದ ಯುಎಸ್ ನೆಲೆಗಳು ಮತ್ತು ಇಸ್ರೇಲ್ ಗುರಿಗಳ ಮೇಲೆ ಇರಾನಿನ ಪ್ರತೀಕಾರದ ದಾಳಿಯನ್ನು ನಡೆಸುತ್ತಿದೆ.

ದೆಹಲಿ-ಗೋವಾ ವಿಮಾನದಲ್ಲಿ ವಾಶ್ ರೂಂ ಒಳಗೆ ಬೀಡಿ ಸೇದಿದ ಪ್ರಯಾಣಿಕ; ಮುಂದೆ ನಡೆದಿದ್ದೇನು?

ರಾಜ್ಯ ಸಭೆಯಲ್ಲಿ ಈ ಕುರಿತು ಮಾತನಾಡಿದ ಜೈಶಂಕರ್, ಫೆಬ್ರವರಿ 28ರಂದು ಇರಾನ್ ಕಡೆಯವರು ಮೂರು ಹಡಗುಗಳಿಗೆ ಭಾರತೀಯ ಬಂದರುಗಳಲ್ಲಿ ಡಾಕಿಂಗ್ ಮಾಡಲು ಅನುಮತಿ ಕೋರಿದ್ದರು. ಮಾರ್ಚ್ 1 ರಂದು ಅವರಿಗೆ ಅನುಮತಿ ನೀಡಲಾಯಿತು. ಐಆರ್ ಐಎಸ್ ಲಾವನ್ ಮಾರ್ಚ್ 4 ರಂದು ಕೊಚ್ಚಿಯಲ್ಲಿ ಡಾಕಿಂಗ್ ಮಾಡಿತು. ಅದರಲ್ಲಿದ್ದ ಸುಮಾರು 183 ಸಿಬ್ಬಂದಿ ಪ್ರಸ್ತುತ ಭಾರತೀಯ ನೌಕಾ ಸೌಲಭ್ಯಗಳಲ್ಲಿ ಇದ್ದಾರೆ ಎಂದರು.

ಸಂಘರ್ಷದ ಸಮಯದಲ್ಲಿ ಇದು ಸರಿಯಾದ ಕೆಲಸ ಎಂದು ನಾವು ನಂಬುತ್ತೇವೆ. ಭಾರತದ ಈ ಮಾನವೀಯ ಕಾರ್ಯಕ್ಕಾಗಿ ಇರಾನ್ ವಿದೇಶಾಂಗ ಸಚಿವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದ ತಿಳಿಸಿದ ಅವರು, ಐಆರ್ ಐಎಸ್ ಲಾವನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ತಪಾಸಣೆ ಮತ್ತು ಮಾರ್ಗದರ್ಶನಕ್ಕಾಗಿ ತುರ್ತು ಡಾಕಿಂಗ್ ಅನ್ನು ಕೋರಲಾಗಿತ್ತು. ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂ ಮತ್ತು ಮಿಲನ್ 2026 ಬಹುರಾಷ್ಟ್ರೀಯ ನೌಕಾ ವ್ಯಾಯಾಮದಲ್ಲಿ ಈ ಹಡಗು ಭಾಗವಹಿಸಿತ್ತು ಎಂದು ಅವರು ಹೇಳಿದರು.

ಇರಾನ್‌ನ ಮತ್ತೊಂದು ಯುದ್ಧನೌಕೆ ಐಆರ್ ಐಎಸ್ ದೇನಾ ಅದೇ ದಿನ ಹಿಂದೂ ಮಹಾಸಾಗರದಲ್ಲಿ ಮುಳುಗಿದೆ. ಶ್ರೀಲಂಕಾದ ಗ್ಯಾಲೆ ಬಳಿಯ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ದೇನಾಗೆ ಯುನೈಟೆಡ್ ಸ್ಟೇಟ್ಸ್ ಜಲಾಂತರ್ಗಾಮಿಯಿಂದ ಹಾರಿಸಲಾದ ಟಾರ್ಪಿಡೊ ಡಿಕ್ಕಿ ಹೊಡೆದಿತ್ತು ಎಂದರು.

ಈ ನೌಕೆಯಲ್ಲಿದ್ದ ಸುಮಾರು 87 ಶವಗಳನ್ನು ಶ್ರೀಲಂಕಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 32 ನಾವಿಕರನ್ನು ರಕ್ಷಿಸಿದ್ದಾರೆ. ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಗ್ಯಾಲೆಗೆ ಕರೆದೊಯ್ಯಲಾಗಿದೆ. ಇದರಲ್ಲಿದ್ದ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು.

‘ರಾಷ್ಟ್ರಪತಿಯನ್ನು ನಿಲ್ಲಿಸಿ ನೀವು ಕುಳಿತಿದ್ದೀರಿ’: ಫೋಟೋ ಹರಿಬಿಟ್ಟು ಪ್ರಧಾನಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಈ ದಾಳಿಗೆ ಪ್ರತಿಕ್ರಿಯಿಸಿರುವ ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಇದು "ಸ್ತಬ್ಧ ಸಾವು". ಎರಡನೇ ಮಹಾಯುದ್ಧದ ಅನಂತರ ಯುನೈಟೆಡ್ ಸ್ಟೇಟ್ಸ್ ಟಾರ್ಪಿಡೊ ಬಳಸಿ ಶತ್ರು ಹಡಗನ್ನು ಮುಳುಗಿಸಿದ್ದು ಇದೇ ಮೊದಲು ಎಂಬುದಾಗಿ ಹೇಳಿದ್ದರು. ಐಆರ್ ಐಎಸ್ ದೇನಾ ಕೂಡ ವಿಶಾಖಪಟ್ಟಣಂ ತಾಲೀಮಿನಲ್ಲಿ ಭಾಗವಹಿಸಿತ್ತು. ಅಲ್ಲಿಂದ ಮರಳುವ ಈ ದುರಂತ ಸಂಭವಿಸಿದೆ ಎಂದರು.

ಇನ್ನೊಂದು ಇರಾನ್ ಹಡಗು ಐಆರ್ ಐಎಸ್ ಬುಶೆಹರ್ ನಲ್ಲಿ ಎಂಜಿನ್ ದೋಷ ಕಂಡು ಬಂದಿದ್ದು, ಅದಕ್ಕೆ ಶ್ರೀಲಂಕಾದಲ್ಲಿ ಡಾಕ್ ಮಾಡಲು ಅವಕಾಶ ನೀಡಲಾಗಿದೆ ಎಂದ ತಿಳಿಸಿದ ಜೈಶಂಕರ್, ಭಾರತೀಯ ನಾವಿಕರು ರಾಯಭಾರ ಕಚೇರಿಯ ಮಾರ್ಗದರ್ಶನವನ್ನು ಅನುಸರಿಸಲು ಮತ್ತು ಅನಗತ್ಯ ಹಡಗು ಚಲನೆಯನ್ನು ತಪ್ಪಿಸಲು ಸಲಹೆ ನೀಡಿರುವುದಾಗಿ ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author