ನವದೆಹಲಿ, ಮೇ 25: 10 ದಿನಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್(Petrol-Diesel Prices Hiked) ಬೆಲೆಗಳನ್ನು ಮತ್ತೆ ದೇಶಾದ್ಯಂತ ಪ್ರತಿ ಲೀಟರ್‌ಗೆ ಸರಾಸರಿ ₹2.80 ಪೈಸೆ ಹೆಚ್ಚಿಸಲಾಗಿದೆ. ಇದರಿಂದಾಗಿ ಸೋಮವಾರ (ಮೇ 25, 2026) ದೆಹಲಿಯಲ್ಲಿ ಪೆಟ್ರೋಲ್‌ನ ಬೆಲೆ ಲೀಟರ್‌ಗೆ ₹102.12 ಮತ್ತು ಡೀಸೆಲ್‌ನ ಬೆಲೆ ಲೀಟರ್ ₹95.20ಗೆ ತಲುಪಿದೆ. ಇದೀಗ ಮೇ 15ರಿಂದ ಇಂಧನ ಬೆಲೆ ಏರಿಕೆಯ ನಂತರ ಎರಡು ವಾರದೊಳಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಸರಿಸುಮಾರು ₹7.5ರಷ್ಟು ಜಾಸ್ತಿ ಆದಂತಾಗಿದೆ.
ಮೇ 15 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ತಲಾ ₹3 ಮತ್ತು ಮೇ 19 ರಂದು ಲೀಟರ್‌ಗೆ ₹90 ಪೈಸೆ ಹೆಚ್ಚಿಸಲಾಯಿತು. ಇದರ ನಂತರ ಮೇ 23ರಂದು ಪೆಟ್ರೋಲ್ ಲೀಟರ್‌ಗೆ 87 ಪೈಸೆ ಮತ್ತು ಡೀಸೆಲ್ ದರದಲ್ಲಿ 91 ಪೈಸೆ ಹೆಚ್ಚಿಸಲಾಯಿತು.
ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ; 10 ದಿನಗಳಲ್ಲಿ 3ನೇ ಬಾರಿ ತೈಲ ದರ ಏರಿಕೆ
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ ಜಾಗತಿಕ ಹಡಗು ಸಂಚಾರ ಮಾರ್ಗವಾದ ಹೊರ್ಮುಜ್ ಜಲಸಂಧಿ ಮುಚ್ಚಿದ್ದರಿಂದ ಇಂಧನ ಪೂರೈಕೆ ಸರಪಳಿಗೆ ಅಡಚಣೆಯಾಗಿತ್ತು. ಇದರಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಶೇ 50ರಷ್ಟು ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು
ದೆಹಲಿ- ₹102.12(ಪೆಟ್ರೋಲ್), ₹95.20(ಡೀಸೆಲ್)
ಮುಂಬೈ- ₹111.21 (ಪೆಟ್ರೋಲ್), ₹97.83 (ಡೀಸೆಲ್)
ಕೋಲ್ಕತ್ತಾ- ₹113.51 (ಪೆಟ್ರೋಲ್), ₹99.82 (ಡೀಸೆಲ್)