ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kerala Waqf protest: ಎಲ್ಲಿಯ ವಕ್ಫ್‌ ಮಸೂದೆ.... ಎಲ್ಲಿಯ ಹಮಾಸ್‌ ಉಗ್ರರು? ಕೇರಳ ಪ್ರತಿಭಟನೆಯಲ್ಲಿ ಇವರ ಫೊಟೋ ಏಕೆ?

Kerala Waqf protest: ಕೇರಳದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಮುಸ್ಲಿಂ ಬ್ರದರ್‌ಹುಡ್‌ನ ಪ್ರಮುಖ ಸಿದ್ಧಾಂತವಾದಿ ಸಯ್ಯದ್ ಕುತುಬ್, ಹತ್ಯೆಗೀಡಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್, ಜೈಲಿನಲ್ಲಿರುವ ಎಡಪಂಥೀಯ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮತ್ತು ಹಲವಾರು ದೇಶಗಳು ಭಯೋತ್ಪಾದಕ ಸಂಘಟನೆ ಮುಸ್ಲಿಂ ಬ್ರದರ್‌ಹುಡ್‌ನ ಸಂಸ್ಥಾಪಕ ಶೇಖ್ ಹಸನ್ ಅಲ್-ಬನ್ನಾ (1906–1949)ಫೊಟೋಗಳನ್ನು ಹಿಡಿದು ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.

ಉಗ್ರರ ಫೋಟೋ ಹಿಡಿದು ಕೇರಳದಲ್ಲಿ ಪ್ರತಿಭಟನೆ; ಭಾರೀ ವಿವಾದ

Profile Rakshita Karkera Apr 11, 2025 8:40 PM

ಕೋಝಿಕ್ಕೋಡ್‌: ಬಹು ಚರ್ಚಿತ, ಬಹು ವಿವಾದಿತ ವಕ್ಫ್‌ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕೇರಳದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪ್ರತಿಭಟನಾಕಾರರು ಉಗ್ರರು ಮತ್ತು ಉಗ್ರ ಸಂಘಟನೆ(Kerala Waqf protest) ಜೊತೆ ನಂಟು ಹೊಂದಿರುವವರ ಫೊಟೋ ಪ್ರದರ್ಶಿಸಿರುವ ಘಟನೆ ನಡೆದಿದೆ. ಕೇರಳದ ಕೋಝಿಕ್ಕೋಡ್‌ನ ಕರಿಪುರ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಪ್ರತಿಭಟನಾಕಾರರು ಮುಸ್ಲಿಂ ಬ್ರದರ್‌ಹುಡ್‌ನ ಪ್ರಮುಖ ಸಿದ್ಧಾಂತವಾದಿ ಸಯ್ಯದ್ ಕುತುಬ್, ಹತ್ಯೆಗೀಡಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್, ಜೈಲಿನಲ್ಲಿರುವ ಎಡಪಂಥೀಯ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮತ್ತು ಹಲವಾರು ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾದ ಮುಸ್ಲಿಂ ಬ್ರದರ್‌ಹುಡ್‌ನ ಸಂಸ್ಥಾಪಕ ಶೇಖ್ ಹಸನ್ ಅಲ್-ಬನ್ನಾ (1906–1949)ಫೊಟೋಗಳನ್ನು ಹಿಡಿದು ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ಈ ಪ್ರತಿಭಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಬಿಜೆಪಿ ಸೇರಿದಂತೆ ಅನೇಕ ಬಲಪಂಥೀಯ ನಾಯಕರು ಖಂಡಿಸಿದ್ದಾರೆ. ಬಿಜೆಪಿ ನಾಯಕ ಮತ್ತು ಕೇರಳ ಘಟಕದ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ಪ್ರತಿಕ್ರಿಯಿಸಿದ್ದು, "ಪ್ರತಿಭಟನಾಕಾರರು ಹಮಾಸ್ ಭಯೋತ್ಪಾದಕರು ಮತ್ತು ಜಾಗತಿಕ ಜಿಹಾದ್‌ನ ಸೈದ್ಧಾಂತಿಕ ಪಿತಾಮಹ ಸಯ್ಯದ್ ಕುತುಬ್ ಅವರ ಫೋಟೋಗಳನ್ನು ಏಕೆ ಪ್ರದರ್ಶಿಸುತ್ತಿದ್ದರು? ಮುಖ್ಯಮಂತ್ರಿ ಇದಕ್ಕೆ ಏಕೆ ಅವಕಾಶ ನೀಡುತ್ತಿದ್ದಾರೆ? ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದಲ್ಲಿ ಮುಂದುವರಿದ ಕಾರ್ಯಾಚರಣೆ; ಉಧಂಪುರದಲ್ಲಿ ಮೂವರು ಉಗ್ರರು ಅಡಗಿರುವ ಶಂಕೆ

ಕೇರಳ ಪೊಲೀಸರು ಆರು ಜನರು ಮತ್ತು ಸುಮಾರು 3,000 ಇತರ ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಕಾನೂನುಬಾಹಿರ ಸಭೆ ಮತ್ತು ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಆದರೆ ಉಗ್ರರ ಫೊಟೋ ಪ್ರದರ್ಶಿಸಿದ ವಿಚಾರಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಬಿಜೆಪಿ ವಕ್ತಾರ ಕೆವಿಎಸ್ ಹರಿದಾಸ್ ಮಾತನಾಡಿ ಈ ಮೆರವಣಿಗೆ ಕೇವಲ ರಾಜಕೀಯ ಪ್ರತಿಭಟನೆಯಲ್ಲ ಎಂದು ಆರೋಪಿಸಿದ್ದಾರೆ. ಈ ಮೆರವಣಿಗೆಯನ್ನು ಜಮಾತ್-ಇ-ಇಸ್ಲಾಮಿಯಂತಹ ಕೆಲವು ಇಸ್ಲಾಮಿಕ್ ಸಂಘಟನೆಗಳು ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನ ಸ್ಲೀಪರ್ ಸೆಲ್‌ಗಳು ಆಯೋಜಿಸಿವೆ. ಈ ಮೆರವಣಿಗೆಯಲ್ಲಿ ಭಾಗವಹಿಸಿದವರು ಮುಸ್ಲಿಂ ಬ್ರದರ್‌ಹುಡ್‌ನಂತಹ ಸಂಘಟನೆಗಳ ಮುಖಂಡರ ಭಾವಚಿತ್ರಗಳನ್ನು ಹಿಡಿದಿದ್ದರು. ದುರದೃಷ್ಟವಶಾತ್, ಕೇರಳ ಪೊಲೀಸರು ಈ ಜನರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಇದೇ ರೀತಿಯ ಮೆರವಣಿಗೆಗಳು ನಡೆದಿವೆ ಎಂದಿದ್ದಾರೆ.