ಬೆಂಗಳೂರು, ಸೆಪ್ಟೆಂಬರ್ 28, 2025: ಮಹಿಳೆಯರಲ್ಲಿ ಕಂಡು ಬರುವ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸುಧಾರೆಡ್ಡಿ ಫೌಂಡೇಶನ್ ತನ್ನ ಪ್ರಯತ್ನಗಳನ್ನು ಮುಂದುವರಿಸಿದ್ದು, ಈ ನಿಟ್ಟಿನಲ್ಲಿ ಭಾನುವಾರ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ʼಪಿಂಕ್ ಪವರ್ ರನ್ 2.0” ಭರ್ಜರಿ ಯಶಸ್ಸು ಕಂಡಿತು. ಹೃದಯ ಸ್ಪರ್ಶಿ ಮತ್ತು ಸದ್ಭಾವನೆಯೊಂದಿಗೆ, ಸುಧಾ ರೆಡ್ಡಿ ಫೌಂಡೇಶನ್ ಆಯೋಜಿಸಿದ ‘ಪಿಂಕ್ ಪವರ್ ರನ್ 2.0’ ಇಲ್ಲಿನ ನೆಕ್ಲೇಸ್ ರಸ್ತೆಯಲ್ಲಿ ಬೆಳಗಿನ ಜಾವ ಆರಂಭವಾಯಿತು. ಈ ಓಟದಲ್ಲಿ ಸುಮಾರು 20,000 ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಜೂಲಿಯಾ ಮಾರ್ಲೆ, ಟೆನಿಸ್ ಪಟು ಲಿಯಾಂಡರ್ ಪೇಸ್, ದೇಶದ ಪ್ರಮುಖ ಮೂಲಭೂತ ಸೌಕರ್ಯ ಸಂಸ್ಥೆ ಎಂ.ಇ.ಐ.ಎಲ್‌ನ ಕಾರ್ಯಕಾರಿ ನಿರ್ದೇಶಕ ಕೃಷ್ಣಾರೆಡ್ಡಿ, ಮಿಸ್ ವರ್ಲ್ಡ್ ಸುಚಾತಾ ಚಂಗುಸ್ರಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಮಿಸ್ ವರ್ಲ್ಡ್ ಕೆರೀಬಿಯನ್, ಮಿಸ್ ನಮೀಬಿಯಾ, ಮಿಸ್ ವರ್ಲ್ಡ್ ಓಶಿಯಾನಿಯಾ, ಮಿಸ್ ವರ್ಲ್ಡ್ ಅಮೆರಿಕಾಸ್, ಮಿಸ್ ವರ್ಲ್ಡ್ ಯೂರೋಪ್, ಮಿಸ್ ವರ್ಲ್ಡ್ ಏಷ್ಯಾ, ದೇಶೀಯವಾಗಿ ಮಿಸ್ ಇಂಡಿಯಾ ವರ್ಲ್ಡ್ ನಂದಿನಿ ಗುಪ್ತಾ ಮತ್ತು ನಿಖಿತಾ ಪೋರ್ವಾಲ್ ಜಾಗೃತಿ ರನ್‌ನಲ್ಲಿ ಭಾಗವಹಿಸಿದ್ದರು.

“ನಮ್ಮೆಲ್ಲರ ಒಗ್ಗೂಡಿದ ಪ್ರಯತ್ನಗಳು ಸ್ತನ ಕ್ಯಾನ್ಸರ್ ಜಾಗೃತಿಗೆ ಶಕ್ತಿಶಾಲಿ ವ್ಯವಸ್ಥೆ ಹುಟ್ಟುಹಾಕಬಹುದು ಮತ್ತು ಪ್ರತಿ ವ್ಯಕ್ತಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಅಭಿಯಾನಗಳು ಅಗತ್ಯ. ಸ್ತನ ಕ್ಯಾನ್ಸರ್ ಭಾರತೀಯ ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾಗಿದೆ, ಮುಂಚಿತ ಪತ್ತೆ ಅನೇಕ ಪ್ರಾಣಗಳನ್ನು ಉಳಿಸಬಹುದು. ಪಿಂಕ್ ಪವರ್ ರನ್ ಆರೋಗ್ಯ ತಪಾಸಣೆ, ಸ್ವಪರಿಶೀಲನೆ ಹಾಗೂ ಜಾಗೃತಿ ಮೂಡಿಸುತ್ತಿರುವುದು ಸಂತಸ ತಂದಿದೆ” ಎಂದು ಮಿಸ್ ವರ್ಲ್ಡ್ ಸಂಸ್ಥೆ ಅಧ್ಯಕ್ಷೆ ಜೂಲಿಯಾ ಮಾರ್ಲೆ ನುಡಿದರು.
“ಆರೋಗ್ಯದ ಕಾಳಜಿ ಹಾಗೂ ಜಾಗೃತಿಯ ಹಿನ್ನೆಲೆಯಲ್ಲಿ ನಾನು ಪಿಂಕ್ ಪವರ್ ರನ್‌ಗೆ ಬೆಂಬಲ ನೀಡುವುದು ಗೌರವ. ಇದು ಕೇವಲ ದೈಹಿಕ ಫಿಟ್ನೆಸ್ ಆಗಿದ್ದರೆ ಸಾಲದು; ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ, ರೋಗದ ಮುಂಚಿತ ಪತ್ತೆಗೆ ಪ್ರೋತ್ಸಾಹ ನೀಡುವುದು ಮಹತ್ವದ ಹೆಜ್ಜೆಯಾಗಿದೆ” ಎಂದು ಲಿಯಾಂಡರ್ ಪೇಸ್ ನುಡಿದರು.
ಈ ಯೋಜನೆ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಹೊಸ ಆಶಯವಾಗಿದೆ ಎಂದ ಸುಧಾ ರೆಡ್ಡಿ ಫೌಂಡೇಶನ್ ಅಧ್ಯಕ್ಷೆ ಸುಧಾ ರೆಡ್ಡಿ, ‘ಪಿಂಕ್ ಪವರ್ ರನ್ - ಯಾವುದೇ ಮಿತಿ / ಗಡಿ ಇಲ್ಲದ’ ಜಾಗತಿಕವಾಗಿ ವಿಸ್ತಾರಗೊಳ್ಳುತ್ತಿದೆ. ಪಿಂಕ್ ಪವರ್ ರನ್ ಜಾಗೃತಿ ಹೆಚ್ಚಿಸಲು, ಸಮುದಾಯ ಚಟುವಟಿಕೆ ಹೆಚ್ಚಿಸಲು ಹಾಗೂ ಮುಂಚಿತ ಪತ್ತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಲು ವೇದಿಕೆಯಾಗಿದೆ ಎಂದರು.
ತಮಗೆ ಪಿಂಕ್ ಪವರ್ ರನ್ 2.0 ಅತ್ಯಂತ ವೈಯಕ್ತಿಕ. ಸ್ಥನ ಕ್ಯಾನ್ಸರ್ ಮುಕ್ತ ಮತ್ತು ಮುಂಚಿತ ಪತ್ತೆಯನ್ನು ಜೋರಾಗಿ ಒತ್ತಿ ಹೇಳುವುದೇ ನಮ್ಮ ಪ್ರಬಲ ಉದ್ದೇಶವಾಗಿದೆ ಮತ್ತು ಸಮುದಾಯವನ್ನು ಏಕಗೂಡಿಸಿ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬುವುದೇ ಆಗಿದೆ ಎಂದು ಸುಧಾರೆಡ್ಡಿ ಅವರು ಒತ್ತಿ ಹೇಳಿದರು.
ಈ ಸುದ್ದಿಯನ್ನೂ ಓದಿ | Asia Cup 2025 Prize Money: ಏಷ್ಯಾಕಪ್ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
ವಿಜೇತರಿಗೆ ಬಹುಮಾನ ವಿತರಣೆ:
10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಓಟ ವಿಜೇತರಿಗೆ ಭರ್ಜರಿ ಬಹುಮಾನಗಳೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
10 ಕಿ.ಮೀ ಓಟಕ್ಕೆ 3.5 ಲಕ್ಷ ರೂ., 2.5 ಲಕ್ಷ ರೂ. ಮತ್ತು 1.5 ಲಕ್ಷ ರೂ. ನೀಡಲಾಯಿತು. 5 km ಓಟಕ್ಕೆ 2 ಲಕ್ಷ ರೂ., 1.5 ಲಕ್ಷ ರೂ. ಮತ್ತು 1 ಲಕ್ಷ ರೂ. ನೀಡಲಾಯಿತು. ಜೂಲಿಯಾ ಮಾರ್ಲೆ ಅವರಿಗೆ “ಎಕ್ಸಲೆನ್ಸ್ ಇನ್ ಮೆಂಟರ್‌ಷಿಪ್-2025” ಪ್ರಶಸ್ತಿ ನೀಡಿ ಗೌರವಿಸಲಾಯಿತು.
10ಕೆ ವಿಭಾಗದಲ್ಲಿ, ಪುರುಷ ಹಾಗೂ ಮಹಿಳಾ ಭಾಗದಲ್ಲಿ ಸಾಧಾರಣ ಪ್ರದರ್ಶನಗಳು ಕಂಡುಬಂದವು. ಪುರುಷರ ವಿಭಾಗದಲ್ಲಿ ಅಂಕಿತ್ ಗುಪ್ತಾ (30:52), ಕಮಲಾಕರ್ ದೇಶಮುಖ್ (31:01), ಶುಭಂ ಸಿಂಧು (31:31) ಅಗಿರಿಸಿದರೆ, ಮಹಿಳಾ ವಿಭಾಗದಲ್ಲಿ ಸೀಮಾ ಸೀಮಾ (34:44), ಭಾರತೀ ನೈನ್ (35:46), ಸೋನಿಕಾ ಸೋನಿಕಾ (36:40) ಮೊದಲ ಮೂರು ಸ್ಥಾನ ಪಡೆದುಕೊಂಡರು.
5ಕೆ ವಿಭಾಗದಲ್ಲಿ, ಪುರುಷರ ವಿಭಾಗದಲ್ಲಿ ಹರ್ಮಂಜೋತ್ ಸಿಂಗ್ (14:25), ಸುನಿಲ್ ಕುಮಾರ್ (14:31), ಸಚಿನ್ ಯಾದವ್ (14:35) ಮೊದಲ ಮೂರು ಸ್ಥಾನ ಪಡೆದರು.
ಮಹಿಳಾ ವಿಭಾಗದಲ್ಲಿ ಅಂಕಿತಾ ಅಂಕಿತಾ (16:52), ನೀತಾ ರಾಣಿ (17:18), ಅಂಕಿತಾ ಗವಿತ್ (17:31) ಯವರು ಕ್ರಮವಾಗಿ ಮೊತ್ತ ಮೊದಲ ಮೂರು ಸ್ಥಾನ ಪಡೆದರು.