Asia Cup 2025 Prize Money: ಏಷ್ಯಾಕಪ್ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
Asia Cup 2025 final: ಆರಂಭಿಕ ಹಂತದಿಂದ ಸ್ಪರ್ಧಾತ್ಮಕವಾಗಿದ್ದ, ಬ್ಯಾಟರ್‌ಗಳಿಗೆ ಸವಾಲಿನಿಂದ ಕೂಡಿದ್ದ ದುಬೈ ಕ್ರೀಡಾಂಗಣದ ಪಿಚ್ ಇದೀಗ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ಬದಲಾದಂತಿದೆ. ಇಲ್ಲಿ ನಡೆದಿದ್ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ಮತ್ತು ಲಂಕಾ ತಂಡ 200 ಪ್ಲಸ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಈ ನಿಟ್ಟಿನಲ್ಲಿ ಇಂದಿನ ಫೈನಲ್ ಪಂದ್ಯದಲಗಲಿಯೂ ದೊಡ್ಡ ಮೊತ್ತದ ನಿರೀಕ್ಷೆ ಮಾಡಬಹುದು.

-

ದುಬೈ: ಇಂದು ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಏಷ್ಯಾಕಪ್ ಟಿ-20 ಪಂದ್ಯಾವಳಿಯ ಫೈನಲ್(Asia Cup 2025 final) ಪಂದ್ಯದಲ್ಲಿ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ(India vs Pakistan) ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫೈನಲ್ ಪಂದ್ಯದಲ್ಲಿ(Asia Cup 2025 Prize Money) ಉಭಯ ತಂಡಗಳು ಸೆಣಸಾಟ ನಡೆಸುತ್ತಿರುವ ಕಾರಣ ಪಂದ್ಯ ಮತ್ತಷ್ಟು ಕುತೂಹಲ ಕೆರಳಿಸಿದೆ.
ಪ್ರಶಸ್ತಿ ಮೊತ್ತ ಎಷ್ಟು?
ಚಾಂಪಿಯನ್ ಆಗುವ ತಂಡಕ್ಕೆ 2.6 ಕೋಟಿ ಬಹುಮಾನ ಮೊತ್ತ ಸಿಗಲಿದೆ. ರನ್ನರ್ ಅಪ್ ಆದ ತಂಡಕ್ಕೆ 1.3 ಕೋಟಿ ಸಿಗಲಿದೆ. ಸರಣಿ ಶ್ರೇಷ್ಠ ಆಟಗಾರನಿಗೆ 12 ಲಕ್ಷ ಸಿಗಲಿದೆ. ಸದ್ಯ ಈ ಪ್ರಶಸ್ತಿ ರೇಸ್‌ನಲ್ಲಿ ಕುಲ್‌ದೀಪ್ ಮತ್ತು ಅಭಿಷೇಕ್ ಶರ್ಮ ಮಧ್ಯೆ ಪೈಪೋಟಿ ಇದೆ. ಅಭಿಷೇಕ್ 6 ಪಂದ್ಯಗಳಿಂದ 309* ರನ್ ಬಾರಿಸಿದರೆ, ಕುಲ್‌ದೀಪ್ 13* ವಿಕೆಟ್ ಕಿತ್ತಿದ್ದಾರೆ.
ಪಿಚ್ ರಿಪೋರ್ಟ್
ಆರಂಭಿಕ ಹಂತದಿಂದ ಸ್ಪರ್ಧಾತ್ಮಕವಾಗಿದ್ದ, ಬ್ಯಾಟರ್‌ಗಳಿಗೆ ಸವಾಲಿನಿಂದ ಕೂಡಿದ್ದ ದುಬೈ ಕ್ರೀಡಾಂಗಣದ ಪಿಚ್ ಇದೀಗ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ಬದಲಾದಂತಿದೆ. ಇಲ್ಲಿ ನಡೆದಿದ್ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ಮತ್ತು ಲಂಕಾ ತಂಡ 200 ಪ್ಲಸ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಈ ನಿಟ್ಟಿನಲ್ಲಿ ಇಂದಿನ ಫೈನಲ್ ಪಂದ್ಯದಲಗಲಿಯೂ ದೊಡ್ಡ ಮೊತ್ತದ ನಿರೀಕ್ಷೆ ಮಾಡಬಹುದು. ರಾತ್ರಿ ವೇಳೆ ಮಂಜು ಬೀಳುವ ಕಾರಣ ಚೇಸಿಂಗ್ ತಂಡಕ್ಕೆ ಉಪಯೋಗವಾಗಲಿದೆ. ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ನಖ್ವಿಯಿಂದ ಟ್ರೋಫಿ ಸ್ವೀಕರಿಸುತ್ತಾ ಭಾರತ?
ಪಹಲ್ಗಾಂ ಉಗ್ರರ ದಾಳಿ ಮತ್ತು ಆಪರೇಷನ್ ಸಿಂಧೂರ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈಗಾಗಲೇ ಈ ವಿಚಾರವಾಗಿ ಎರಡೂ ತಂಡಗಳ ಆಟಗಾರರ ಮಧ್ಯೆ ಕೈಸನ್ನೆ, ಪರಸ್ಪರ ಹೇಳಿಕೆ ಮುಂದಾದ ರೀತಿಯಲ್ಲಿ ಮುಸುಕಿನ ಗುದ್ದಾಟ ಕೂಡ ನಡೆದುಹೋಗಿದೆ. ಇದೀಗ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಪಂದ್ಯದ ವೇಳೆ ಉಭಯ ದೇಶಗಳ ಆಟಗಾರರ ನಡುವೆ ಹಸ್ತಲಾಘವ ಮಾಡುವ ಹಾಗೂ ಪಂದ್ಯದ ಬಳಿಕ ಪ್ರಶಸ್ತಿ ನೀಡುವ ಅಧಿಕಾರವಿದೆ. ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದ ಭಾರತೀಯ ಆಟಗಾರರು, ಪಾಕ್ ಸಚಿವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆಯೇ ಎನ್ನುವ ಪ‍್ರಶ್ನೆ ಎದುರಾಗಿದೆ.
ಇದನ್ನೂ ಓದಿ Asia Cup 2025 final: ಏಷ್ಯಾಕಪ್‌ಗಾಗಿ ಇಂದು ಇಂಡೋ-ಪಾಕ್ ಫೈನಲ್ ಫೈಟ್; ಪಾಂಡ್ಯ ಅಲಭ್ಯ?