ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PM Modi Mann Ki Baat: ಸರ್ಜಿಕಲ್ ಸ್ಟ್ರೈಕ್‌ ಭಾರತದ ನೋವಿಗೆ ತಕ್ಕ ಉತ್ತರ: 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ

ಭಯೋತ್ಪಾದನೆಯನ್ನು ಬಲವಾದ ಮತ್ತು ನಿರ್ಣಾಯಕ ಪ್ರತಿಕ್ರಿಯೆಯ ಮೂಲಕ ಎದುರಿಸಲಾಗುವುದು ಎಂಬುದನ್ನು ದೇಶವು ಸರ್ಜಿಕಲ್ ಸ್ಟ್ರೈಕ್‌ಗಳ ಮೂಲಕ ಸ್ಪಷ್ಟಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 'ಮನ್ ಕಿ ಬಾತ್' ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಯೋತ್ಪಾದನೆ ವಿರುದ್ಧ ಭಾರತವು ಶೂನ್ಯ ಸಹಿಷ್ಣುತೆ ಹೊಂದಿರುವುದನ್ನು ಪುನರುಚ್ಚರಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಗಡಿ ನಿಯಂತ್ರಣ ರೇಖೆಯನ್ನು (Line of Control) ದಾಟಿ ದೇಶದ ಸೈನಿಕರುಭಯೋತ್ಪಾದನೆಯ ವಿರುದ್ಧ 2016ರಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ (2016 Surgical Strikes) ಭಾರತದ ಭಯೋತ್ಪಾದನಾ ವಿರೋಧಿ ನೀತಿಯನ್ನು (India's Counter-Terrorism Policy) ವಿಶ್ವದ ಮುಂದೆ ಪ್ರಸ್ತುತಪಡಿಸಿದವು. ಇದು ಜಗತ್ತನ್ನೇ ಬೆರಗುಗೊಳಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. 'ಮನ್ ಕಿ ಬಾತ್' (Mann Ki Baat) ಮಾಸಿಕ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು ಸರ್ಜಿಕಲ್ ಸ್ಟ್ರೈಕ್‌ಗಳು (2016 Surgical Strikes) ಭಯೋತ್ಪಾದಕ ದಾಳಿಗಳಿಂದ ಉಂಟಾದ ನೋವಿಗೆ ಭಾರತ ನೀಡಿದ ನಿರ್ಣಾಯಕ ಪ್ರತಿಕ್ರಿಯೆಯಾಗಿದ್ದವು ಎಂದರು.

ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯನ್ನು ಪ್ರತಿಪಾದಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲಿನ ಭಯೋತ್ಪಾದಕ ದಾಳಿಯ ಬಳಿಕ 2016ರ ಸೆಪ್ಟೆಂಬರ್ 28-29 ರಂದು ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಹೋಗಿ ಭಯೋತ್ಪಾದಕ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿತ್ತು ಎಂದು ನೆನಪಿಸಿಕೊಂಡರು.

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ; ವಿಶ್ವವಿದ್ಯಾಲಯ ಧ್ವಂಸಗೊಳಿಸಿದ ಉದ್ರಿಕ್ತ ವಿದ್ಯಾರ್ಥಿಗಳು

ಭಯೋತ್ಪಾದನೆಯನ್ನು ಭಾರತ ಸಮರ್ಥವಾಗಿ ಎದುರಿಸಲಿದೆ ಎಂದ ಅವರು ಈ ಸರ್ಜಿಕಲ್ ಸ್ಟ್ರೈಕ್ ಇಡೀ ಜಗತ್ತಿನ ಮುಂದೆ ಭಾರತದ ಭಯೋತ್ಪಾದನಾ ವಿರೋಧಿ ನೀತಿಯ ಒಂದು ದೃಢವಾದ ಹೊಸ ಉದಾಹರಣೆಯನ್ನು ಪ್ರಸ್ತುತಪಡಿಸಿತು. ಭಯೋತ್ಪಾದಕ ದಾಳಿಗಳಿಂದಾಗಿ ಭಾರತವು ದೀರ್ಘಕಾಲದಿಂದ ನೋವನ್ನು ಅನುಭವಿಸಿದೆ. ಅದರ ಪ್ರತಿಕ್ರಿಯೆಯಾಗಿ ಸರ್ಜಿಕಲ್ ಸ್ಟ್ರೈಕ್‌ಗಳು ನಡೆದಿವೆ ಎಂದರು.



ಜನಗಣತಿ ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಅವರು, ಜನಗಣತಿಯು ರಾಷ್ಟ್ರೀಯ ಜವಾಬ್ದಾರಿಯಾಗಿದೆ ಮತ್ತು ಇದರಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವು ಇದೆ ಎಂದ ಅವರು ಜನಗಣತಿ ಪ್ರಕ್ರಿಯೆಯ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಮಾಹಿತಿ ನೀಡುವ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ಮಾದಕವಸ್ತುಗಳ ವಿರುದ್ಧದ ಹೋರಾಟದ ಕುರಿತು ಮಾತನಾಡಿದ ಅವರು ಭಾರತದ ಯುವಜನತೆ ಮಾದಕವಸ್ತುಗಳ ವಿರುದ್ಧ ಒಗ್ಗೂಡುತ್ತಿದ್ದಾರೆ. ದೇಶಾದ್ಯಂತ ಲಕ್ಷಾಂತರ ಯುವಕರು ವ್ಯಸನ ಮತ್ತು ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಈ ಸಂದೇಶವನ್ನು ಇತರರಿಗೂ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ತಿಳಿಸಿದರು.

“2016ರಲ್ಲಿ ಬಿಜೆಪಿ ಟಿಕೆಟ್ ನೀಡಲು ಜ್ಞಾನೇಶ್ ಕುಮಾರ್ ಮುಂದಾಗಿದ್ದರು”: ಚುನಾವಣಾ ಆಯುಕ್ತರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕೇರಳಂ ಮಾಜಿ ಮುಖ್ಯ ಕಾರ್ಯದರ್ಶಿ

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ವಿಎಚ್‌ಪಿ ನಾಯಕ ಅಶೋಕ್ ಸಿಂಘಾಲ್ ಅವರಿಗೆ ಗೌರವ ಸಲ್ಲಿಸಿ ಅವರು ಒಬ್ಬ ತಪಸ್ವಿಯಂತೆ ಜೀವನ ನಡೆಸಿದರು. ರಾಮ ಜನ್ಮಭೂಮಿ ಚಳುವಳಿಗೆ ಅವರು ನೀಡಿದ ದಿಕ್ಕು ಮತ್ತು ಅದರಲ್ಲಿ ಅವರು ತುಂಬಿದ ಚೈತನ್ಯದ ಫಲವಾಗಿ ಇಂದು ನಾವು ಅಯೋಧ್ಯೆಯಲ್ಲಿ ಭವ್ಯವಾದ ದೇವಾಲಯವನ್ನು ಕಾಣುತ್ತಿದ್ದೇವೆ ಎಂದರು.

ವಿದ್ಯಾ ಇರ್ವತ್ತೂರು

View all posts by this author