ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಮೋದಿ PM ಆಗುವವರೆಗೆ ಚಪ್ಪಲಿ ಧರಿಸಲ್ಲ ಎಂದು ಪಣತೊಟ್ಟಿದ್ದ ಅಭಿಮಾನಿಗೆ ಶೂ ತೊಡಿಸಿದ ಪ್ರಧಾನಿ

ಬರೋಬ್ಬರಿ 14 ವರ್ಷಗಳ ಹಿಂದೆ ನರೇಂದ್ರ ಮೋದಿ(Narendra Modi) ಪ್ರಧಾನಿಯಾದ ನಂತರವೇ ಪಾದರಕ್ಷೆಗಳನ್ನು ಧರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಅಪ್ಪಟ ಅಭಿಮಾನಿಯನ್ನು ಪ್ರಧಾನಿ ಮೋದಿ ಇಂದು ಭೇಟಿಯಾದರು. ವಿಶೇಷ ಎಂಬಂತೆ ಸ್ವತಃ ತಾವೇ ರಾಮ್‌ಪಾಲ್‌ ಕಶ್ಯಪ್‌ ಅವರಿಗೆ ಶೂ ತೊಡಿಸಿದ್ದಾರೆ.

ಅಪ್ಪಟ ಅಭಿಮಾನಿಗೆ ಶೂ ತೊಡಿಸಿದ ಪ್ರಧಾನಿ ಮೋದಿ

Profile Rakshita Karkera Apr 14, 2025 10:05 PM

ಹರಿಯಾಣ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಸೋಮವಾರ ಹರಿಯಾಣದ ಯಮುನಾನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ದೀರ್ಘಕಾಲದ ಅಭಿಮಾನಿಗಳಲ್ಲಿ ಒಬ್ಬರನ್ನು ಭೇಟಿಯಾಗಿದ್ದಾರೆ. ಮೋದಿಯನ್ನು ಆರಾಧ್ಯ ದೈವ ಎಂಬಂತೆ ಪ್ರೀತಿಸುವ ಹರಿಯಾಣದ ರಾಮ್‌ಪಾಲ್‌ ಕಶ್ಯಪ್‌(Rampal Kashyap) ಮೋದಿ ಪ್ರಧಾನಿ ಆಗುವವರೆಗೆ ಚಪ್ಪಲಿ ಧರಿಸಲ್ಲ ಎಂದು ಶಪತ ಮಾಡಿದ್ದರು. ಹರಿಯಾಣ ಭೇಟಿ ವೇಳೆ ಪ್ರಧಾನಿ ಮೋದಿ ಕಶ್ಯಪ್‌ ಅವರನ್ನು ಭೇಟಿಯಾಗಿ ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡಿದರು. ಅಷ್ಟೇ ಅಲ್ಲದೇ ಸ್ವತಃ ತಾವೇ ಶೂ ತೊಡಿಸಿದ್ದಾರೆ. ಇನ್ನು ಇದರ ವಿಡಿಯೊವನ್ನು ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ರಾಮಪಾಲ್‌ರ ಕನಸು ಈಡೇರಿತು. ಆದರೆ, ಅವರ ಮನಸ್ಸಿನಲ್ಲಿ ಇನ್ನೊಂದು ಆಸೆ ಉಳಿದಿತ್ತು. ಮೋದಿಯವರನ್ನು ಖುದ್ದಾಗಿ ಭೇಟಿಯಾಗಿ, ಅವರ ಆಶೀರ್ವಾದದೊಂದಿಗೆ ಮಾತ್ರ ಶೂ ಧರಿಸಬೇಕು ಎಂಬ ಆಸೆ. ಆದರೆ, ವಿಧಿಯ ಆಟದಿಂದಾಗಿ ರಾಮಪಾಲ್‌ಗೆ ಈ ಅವಕಾಶ ಸಿಗದೇ ಹೋಯಿತು. ಆದರೂ, ಅವರು ತಮ್ಮ ಪ್ರತಿಜ್ಞೆಗೆ ಬದ್ಧರಾಗಿಯೇ ಬರಿಗಾಲಿನಲ್ಲಿಯೇ ನಡೆಯುತ್ತಿದ್ದರು. ಈ ಕಥೆಯು ಅವರ ಸುತ್ತಲಿನ ಜನರಿಗೆ ತಿಳಿದಿದ್ದರೂ, ಇದು ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬಂದಿರಲಿಲ್ಲ. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಹರಿಯಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಮಪಾಲ್ ಕಶ್ಯಪ್‌ರ ಕಥೆ ಅವರ ಕಿವಿಗೆ ಬಿತ್ತು. ಈ ವಿಷಯ ಕೇಳಿದ ಕೂಡಲೇ, ಮೋದಿಯವರ ಮನಸ್ಸು ಕರಗಿತು. ಅವರು ರಾಮಪಾಲ್‌ಗೆ ಫೋನ್ ಕರೆ ಮಾಡಿ, ಖುದ್ದಾಗಿ ಭೇಟಿಯಾಗಲು ಸೂಚನೆ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ, ರಾಮಪಾಲ್ ಬರಿಗಾಲಿನಲ್ಲಿಯೇ ತಮ್ಮ ಪ್ರೀತಿಯ ನಾಯಕನನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ ಪ್ರಧಾನಿ ಮೋದಿ ಒಂದು ಜೋಡಿ ಶೂ ಉಡುಗೊರೆಯಾಗಿ ಕೊಟ್ಟರು. ಅಲ್ಲದೇ ಖುದ್ದಾಗಿ ಶೂ ತೊಡಿಸಿದ್ದಾರೆ. ಈ ಭಾವುಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೈರಲ್‌ ವಿಡಿಯೊ ನೋಡಿ



ಈ ಸುದ್ದಿಯನ್ನೂ ಓದಿ: PM Narendra Modi : 2022-2024ರವರೆಗೆ ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸಗಳಿಗಾಗಿ ಕೇಂದ್ರ ಸರ್ಕಾರ ಎಷ್ಟು ಖರ್ಚು ಮಾಡಿದೆ?

ಈ ವೇಳೆ ಕೆಲಹೊತ್ತು ಕಶ್ಯಪ್‌ ಜೊತೆ ಮಾತುಕತೆ ನಡೆಸಿದ ಮೋದಿ 'ನೀವು ಏಕೆ ಇಷ್ಟೊಂದು ಕಷ್ಟವನ್ನು ತೆಗೆದುಕೊಂಡಿರಿ? ಇಂತಹ ತೊಂದರೆಯನ್ನು ಏಕೆ ಮಾಡಿಕೊಂಡಿರಿ?' ಎಂದು ಪ್ರಶ್ನಿಸಿದರು. ಈ ಬಗ್ಗೆ ಕಶ್ಯಪ್‌ ಸಂತಸ ಹಂಚಿಕೊಂಡಿದ್ದು, ಈ ಕ್ಷಣವು ಜೀವನದ ಅತ್ಯಂತ ಮರೆಯಲಾಗದ ಕ್ಷಣ. ತಾವು ಗೌರವಿಸುವ, ಪ್ರೀತಿಸುವ ನಾಯಕನಿಂದ ಸ್ವತಃ ಶೂಗಳನ್ನು ಸ್ವೀಕರಿಸಿದ ಅವರು, ತಮ್ಮ ಪ್ರತಿಜ್ಞೆಯ ಫಲವನ್ನು ಈ ರೀತಿಯಲ್ಲಿ ಪಡೆಯುವುದು ಕನಸೇ ಸರಿ. 'ನಾನು ಈ ದಿನಕ್ಕಾಗಿಯೇ ಕಾಯುತ್ತಿದ್ದೆ. ಮೋದಿಜೀಯವರ ಭೇಟಿಯಾಗುವುದೇ ನನ್ನ ಜೀವನದ ದೊಡ್ಡ ಗುರಿಯಾಗಿತ್ತು ಎಂದು ಭಾವುಕರಾಗಿ ಹೇಳಿದರು.