ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜನಸಂಖ್ಯೆ ಹೆಚ್ಚಿಸಲು ಚೀನಾ ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ; ಲವ್‌ ಮಾಡುವಂತೆ ಕರೆ

ಚೀನಾದ ಸಿಚುವಾನ್ ಸೌತ್‌ವೆಸ್ಟ್ ವೊಕೇಶನಲ್ ಕಾಲೇಜ್ ಆಫ್ ಏವಿಯೇಷನ್ ರಜೆಯ ವೇಳೆ ವಿದ್ಯಾರ್ಥಿಗಳಿಗೆ ಹೂವುಗಳನ್ನು ಆನಂದಿಸಿ, ಪ್ರೀತಿಯಲ್ಲಿ ಬೀಳಿ ಎಂಬ ಸಲಹೆ ನೀಡಿದೆ. ಪ್ರವಾಸೋದ್ಯಮ, ಆಂತರಿಕ ಬಳಕೆ ಮತ್ತು ಜನನ ದರ ಹೆಚ್ಚಿಸಲು ಸರ್ಕಾರ ವಿಭಿನ್ನ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸಲಹೆ ಗಮನ ಸೆಳೆದಿದೆ.

ಪ್ರೀತಿಯಲ್ಲಿ ಬೀಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದ ಚೀನಾ ವಿವಿ

ಸಾಂದರ್ಭಿಕ ಚಿತ್ರ -

Profile
Sushmitha Jain Mar 18, 2026 9:49 PM

ಬೀಜಿಂಗ್‌, ಮಾ. 18: ಚೀನಾದ ವಿಶ್ವವಿದ್ಯಾನಿಲಯವೊಂದು (Chinese university) ತನ್ನ ಮಧ್ಯಂತರ ರಜೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ 'ಹೂವುಗಳನ್ನು ಆನಂದಿಸಿ ಮತ್ತು ಪ್ರೀತಿಯಲ್ಲಿ ಬೀಳಿ' ಎಂಬ ಸಲಹೆ ನೀಡಿದೆ. ಕೇವಲ ಅಂಕಗಳಿಕೆಯತ್ತಲೇ ಗಮನಹರಿಸುವ ಚೀನಾದಂತಹ ದೇಶದಲ್ಲಿ ಮದುವೆ ಮತ್ತು ಜನನ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಕಂಡುಕೊಂಡಿರುವ ವಿಭಿನ್ನ ಮಾರ್ಗವಿದು ಎಂದು ವಿಶ್ಲೇಷಿಸಲಾಗುತ್ತಿದೆ.

ʼಹೂವುಗಳನ್ನು ನೋಡಿ ಮತ್ತು ಪ್ರಣಯವನ್ನು ಆನಂದಿಸಿʼ ಎಂಬುದು ಏಪ್ರಿಲ್ 1ರಿಂದ 6ರವರೆಗೆ ಘೋಷಿಸಲಾದ ವಸಂತ ರಜಾದಿನಗಳ ಥೀಮ್ ಎಂದು ಸಿಚುವಾನ್ ಸೌತ್‌ವೆಸ್ಟ್ ವೊಕೇಶನಲ್ ಕಾಲೇಜ್ ಆಫ್ ಏವಿಯೇಷನ್ ತನ್ನ ಅಧಿಕೃತ ವಿಚಾಟ್ (WeChat) ಖಾತೆಯಲ್ಲಿ ತಿಳಿಸಿದೆ. ಪುಸ್ತಕಗಳನ್ನು ಬದಿಗಿಟ್ಟು ಹೊರಬರುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಈ ಮೂಲಕ ಸೂಚನೆ ನೀಡಲಾಗಿದೆ.

ಸಾಂಪ್ರದಾಯಿಕ ಬೇಸಿಗೆ ಮತ್ತು ಚಳಿಗಾಲದ ರಜೆಗಳ ಜತೆಗೆ, ಶಾಲೆಗಳಿಗೆ ವಸಂತ ಮತ್ತು ಶರತ್ಕಾಲದ ರಜೆಗಳನ್ನು ಪರಿಚಯಿಸುವುದಾಗಿ ಚೀನಾ ಘೋಷಿಸಿದ ಎರಡು ವಾರಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಸಿಚುವಾನ್, ಜಿಯಾಂಗ್ಸು ಪ್ರಾಂತ್ಯಗಳು ಮತ್ತು ಸುಝೌ, ನಾಂಜಿಂಗ್ ನಗರಗಳು ಈಗಾಗಲೇ ಏಪ್ರಿಲ್ ಅಥವಾ ಮೇ ಆರಂಭದಲ್ಲಿ ಇಂತಹ ರಜೆಗಳನ್ನು ನೀಡಲು ಮುಂದಾಗಿವೆ.

ಜನಸಂಖ್ಯೆ ಕುಸಿತ ತಡೆಯುವ ಪ್ರಯತ್ನ

ದೇಶದ 1.4 ಶತಕೋಟಿ ಜನಸಂಖ್ಯೆಯಲ್ಲಿ ಪ್ರವಾಸೋದ್ಯಮ ಮತ್ತು ವಿರಾಮ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಆಂತರಿಕ ಆರ್ಥಿಕತೆಯನ್ನು ಹೆಚ್ಚಿಸುವುದು ಚೀನಾದ ಗುರಿ. ಇದರೊಂದಿಗೆ, ಯುವಕರಿಗೆ ಹೆಚ್ಚಿನ ಬಿಡುವಿನ ಸಮಯವನ್ನು ನೀಡುವ ಮೂಲಕ ಜನನ ದರವನ್ನು ಹೆಚ್ಚಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. 2025ರಲ್ಲಿ ಚೀನಾದ ಜನಸಂಖ್ಯೆಯು ಸತತ ನಾಲ್ಕನೇ ವರ್ಷವೂ ಕುಸಿತ ಕಂಡಿದ್ದು, ಜನನ ದರವು ದಾಖಲೆ ಮಟ್ಟಕ್ಕೆ ಇಳಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ಮಕ್ಕಳ ಸ್ನೇಹಿ ಅಭಿವೃದ್ಧಿಗೆ ಒತ್ತು

ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗವು (NDRC) ಮಕ್ಕಳ ಸ್ನೇಹಿ ನಗರಗಳನ್ನು ನಿರ್ಮಿಸಲು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ಮೂಲಕ ಪೋಷಕರಿಗೆ ಬೆಂಬಲ ನೀಡಲು ಉದ್ದೇಶಿಸಲಾಗಿದೆ. ಸಮಾಜಕ್ಕೆ ಮಕ್ಕಳನ್ನು ಬೆಳೆಸಲು ಸಾಕಷ್ಟು ಸಮಯ ಮತ್ತು ಹಣದ ಅಗತ್ಯವಿದೆ ಎಂದು ಜನಸಂಖ್ಯಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೊಡ್ಡ ಕುಟುಂಬಗಳನ್ನು ಹೊಂದುವ ವೈಯಕ್ತಿಕ ಮತ್ತು ಸಾಮಾಜಿಕ ಪ್ರಯೋಜನಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.