ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಾಹೀರಾತು ಫಲಕ ತೆರವುಗೊಳಿಸುವ ವಿಚಾರದಲ್ಲಿ ವಾಗ್ವಾದ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ-ಪೊಲೀಸರ ಮಧ್ಯೆ ಮಾರಾಮಾರಿ

Abhishek Banerjee-Police: ಪೊಲೀಸರು ಮತ್ತು ಕೆಎಂಸಿ ಅಧಿಕಾರಿಗಳು ತಮಗೆ ತೆರಿಗೆದಾರರ ಹಣದಿಂದ ಸಂಬಳ ನೀಡಲಾಗುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ ಎಂಬುದನ್ನು ಮರೆತಿದ್ದಾರೆ ಎಂದು ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಹೇಳಿದರು. ಯಾವ ರಾಜಕೀಯ ಪಕ್ಷವು ಎಷ್ಟು ಜಾಹೀರಾತು ಫಲಕಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗೆ ಇಲ್ಲ ಎಂದು ಕಿಡಿಕಾರಿದರು.

ಕೋಲ್ಕತಾದಲ್ಲಿ ಅಭಿಷೇಕ್ ಬ್ಯಾನರ್ಜಿ-ಪೊಲೀಸರ ಮಧ್ಯೆ ವಾಗ್ವಾದ

ಕೋಲ್ಕತಾ, ಆ. 27: ಗುರುವಾರ (ಆ. 27) ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಅಧಿಕಾರಿಗಳೊಂದಿಗೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ತಂಡವು ತೃಣಮೂಲ ಕಾಂಗ್ರೆಸ್ (TMC) ನಾಯಕ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರ ಕ್ಯಾಮಕ್ ಸ್ಟ್ರೀಟ್ ಕಚೇರಿಯಲ್ಲಿದ್ದ ಟಿಎಂಸಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಮುಂದಾಯಿತು. ಈ ವೇಳೆ ಬ್ಯಾನರ್ಜಿ ಮತ್ತು ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳ ನಡುವೆ ತೀವ್ರ ವಾಗ್ದಾಳಿ ನಡೆದಿದೆ.

ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಭಿಷೇಕ್‌ ಬ್ಯಾನರ್ಜಿ, ಅಧಿಕೃತ ಆದೇಶದ ಪ್ರತಿ ಮತ್ತು ದೂರು ಪತ್ರವನ್ನು ತೋರಿಸುವಂತೆ ಅಧಿಕಾರಿಗಳ ಬಳಿ ಆಗ್ರಹಿಸಿದರು. ಪೊಲೀಸ್ ಅಧಿಕಾರಿಗಳು ಕಚೇರಿ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪೊಲೀಸರು ಮತ್ತು ಕೆಎಂಸಿ ಅಧಿಕಾರಿಗಳು ತಮಗೆ ತೆರಿಗೆದಾರರ ಹಣದಿಂದ ಸಂಬಳ ನೀಡಲಾಗುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ ಎಂಬುದನ್ನು ಮರೆತಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು. ಯಾವ ರಾಜಕೀಯ ಪಕ್ಷವು ಎಷ್ಟು ಜಾಹೀರಾತು ಫಲಕಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗೆ ಇಲ್ಲ ಎಂದು ಕಿಡಿಕಾರಿದರು.

ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ತಾತ್ಕಾಲಿಕ ರಿಲೀಫ್‌; ಕಚೇರಿ ವಿರುದ್ಧದ ಬುಲ್ಡೋಜರ್ ಕ್ರಮಕ್ಕೆ ಹೈಕೋರ್ಟ್ ತಡೆ

ಅಭಿಷೇಕ್ ಬ್ಯಾನರ್ಜಿ ವಿರುದ್ಧ ಹೇಳಿಕೆ: ಪಕ್ಷದ ಬಂಡಾಯ ಶಾಸಕ ಮದನ್ ಮಿತ್ರಾಗೆ ಕಾನೂನು ಸಂಕಷ್ಟ

ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಈಗಾಗಲೇ ಪಕ್ಷದ ಬಂಡಾಯ ಶಾಸಕ ಮದನ್ ಮಿತ್ರಾ ಅವರಿಗೆ ಮಾನಹಾನಿ ಆರೋಪದಡಿ ಕಾನೂನು ಪ್ರಕಾರ ನೋಟಿಸ್ ಜಾರಿಗೊಳಿಸಿದ್ದಾರೆ. ತಮ್ಮ ವಿರುದ್ಧ ಸುಳ್ಳು, ಆಧಾರರಹಿತ ಹಾಗೂ ಮಾನಕ್ಕೆ ಹಾನಿಯಾಗುವಂತಹ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಟಿಎಂಸಿ ಬಿಡುಗಡೆ ಮಾಡಿದ ಕಾನೂನು ನೋಟಿಸ್ ಪ್ರಕಾರ, ಮದನ್ ಮಿತ್ರಾ ಸಾರ್ವಜನಿಕವಾಗಿ ಅಭಿಷೇಕ್ ಬ್ಯಾನರ್ಜಿಯನ್ನು ಅಪರಾಧಿ, ಕೊಲೆಗಾರ ಎಂದು ಕರೆದಿರುವುದಲ್ಲದೆ, ಹಣ ನೀಡಿ ಸುಪಾರಿ ಹತ್ಯೆ ಮಾಡಿಸುತ್ತಾರೆ ಹಾಗೂ ಅಪರಾಧ ಮನೋಭಾವ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇವು ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಮತ್ತು ಯಾವುದೇ ಆಧಾರವಿಲ್ಲದ ಹೇಳಿಕೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ನೋಟಿಸ್‌ನಲ್ಲಿ, “ನೀವು ನನ್ನ ಕಕ್ಷಿದಾರರ ವಿರುದ್ಧ ಹಲವು ಸುಳ್ಳು, ದುರುದ್ದೇಶಪೂರಿತ ಆರೋಪ ಮಾಡಿದ್ದೀರಿ. ಈ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರವಿಲ್ಲ. ನೀವು ನೀಡಿರುವ ಪ್ರತಿಯೊಂದು ಹೇಳಿಕೆಯೂ ಸುಳ್ಳು ಎಂಬುದು ನಿಮಗೂ ತಿಳಿದಿದೆ” ಎಂದು ಉಲ್ಲೇಖಿಸಲಾಗಿದೆ.

ಈ ಬೆಳವಣಿಗೆ ಟಿಎಂಸಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವ ಸಂದರ್ಭದಲ್ಲೇ ನಡೆದಿದೆ. ಕೆಲ ದಿನಗಳ ಹಿಂದೆ ಹಿರಿಯ ಶಾಸಕ ಮದನ್ ಮಿತ್ರಾ, ಮಾಜಿ ರಾಜ್ಯಸಭಾ ಸದಸ್ಯ ಋತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ಸೇರ್ಪಡೆಯಾಗಿದ್ದರು. ಪಕ್ಷ ತೊರೆಯಲು ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವವೇ ಪ್ರಮುಖ ಕಾರಣ ಎಂದು ಅವರು ಬಹಿರಂಗವಾಗಿ ಆರೋಪಿಸಿದ್ದರು.