ಉತ್ತರ ಪ್ರದೇಶ: ಭೂಮಿ ಹೊಂದಿರುವ ಅರ್ಹ ರೈತ ಕುಟುಂಬಗಳಿಗೆ ನೇರ ಆದಾಯ ಬೆಂಬಲವನ್ನು ಒದಗಿಸುವ ಸಲುವಾಗಿ 2019ರ ಫೆಬ್ರವರಿ 24ರಂದು ಗೋರಖ್‌ಪುರ (Gorakhpur) ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಚಾಲನೆ ನೀಡಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (Pradhan Mantri Kisan Samman Nidhi) ಇತ್ತೀಚಿನ ಕಂತಿನಲ್ಲಿ ಉತ್ತರ ಪ್ರದೇಶದ 2.2 ಕೋಟಿಗೂ ಹೆಚ್ಚು ರೈತರು ಒಟ್ಟು 4,352 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ (Uttar Pradesh) ಜಾರಿಗೊಳಿಸಲಾಗಿತ್ತು.
ಕಳೆದ ಜೂನ್ 20ರಂದು ಬಿಡುಗಡೆಯಾದ ಪಿಎಂ ಕಿಸಾನ್ ಸಮ್ಮಾನ್ ನ 23ನೇ ಕಂತಿನಲ್ಲಿ ದೇಶಾದ್ಯಂತ ಇರುವ ಸುಮಾರು 9.44 ಕೋಟಿ ರೈತರಿಗೆ 18,880 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ. ಈ ಯೋಜನೆ ಪ್ರಾರಂಭವಾಗಿ ಏಳು ವರ್ಷಗಳಾಗಿದ್ದು, ಒಟ್ಟು 4.46 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ರೈತರಿಗೆ ವಿತರಿಸಲಾಗಿದೆ.
ದೇವಸ್ಥಾನದಲ್ಲಿ ಮೀನು ಪ್ರಸಾದ ಸೇವಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ವಿವಾದ ಅಂತ್ಯ
ಪಿಎಂ ಕಿಸಾನ್ ಸಮ್ಮಾನ್
2019ರ ಫೆಬ್ರವರಿ 24ರಂದು ಜಾರಿಗೆ ಬಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಭೂಮಿ ಹೊಂದಿರುವ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂಪಾಯಿಗಳನ್ನು ಪಡೆಯುತ್ತವೆ. ಈ ಮೊತ್ತವನ್ನು ತಲಾ 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಇದನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಇದನ್ನು ಪಡೆಯಲು ರೈತರು ಯೋಜನೆಯ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಇದಕ್ಕಾಗಿ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ತಮ್ಮ ಭೂ ದಾಖಲೆಗಳನ್ನು ನೋಂದಾಯಿಸುವುದು, ಬ್ಯಾಂಕ್ ಖಾತೆಗಳನ್ನು ಆಧಾರ್‌ನೊಂದಿಗೆ ಜೋಡಿಸುವುದು ಮತ್ತು ಇ-ಕೆವೈಸಿ ಪರಿಶೀಲನೆಯನ್ನು ಪೂರ್ಣಗೊಳಿಸುವುದು ಸೇರಿವೆ. ಈ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಉತ್ತರ ಪ್ರದೇಶದಲ್ಲಿದ್ದಾರೆ. 3.15 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ವೆಚ್ಚದೊಂದಿಗೆ ಈ ಯೋಜನೆಯನ್ನು 2026-27 ರಿಂದ 2030-31 ರವರೆಗೆ ವಿಸ್ತರಿಸಲು ಈಗಾಗಲೇ ಅನುಮೋದನೆ ನೀಡಿದೆ.
ಈ ಹಣ ಏಕೆ ಬಳಕೆಯಾಗುತ್ತಿದೆ?
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬಳಕೆಯ ಕುರಿತು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ಕೃಷಿ-ಆರ್ಥಿಕ ಸಂಶೋಧನಾ ಕೇಂದ್ರವು 2022ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಫಲಾನುಭವಿಗಳು ಈ ಹಣವನ್ನು ಮುಖ್ಯವಾಗಿ ಉಳುಮೆ, ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಂತಹ ಕೃಷಿ ವೆಚ್ಚಗಳಿಗಾಗಿ ಬಳಸಿದ್ದಾರೆ ಎಂದು ತಿಳಿದು ಬಂದಿದೆ.
ಯೋಜನೆಯ ಪ್ರಯೋಜನ ಪಡೆದ ರೈತರ ಬೆಳೆ ಇಳುವರಿಯಲ್ಲಿ ಹೆಚ್ಚಳವಾಗಿರುವುದು, ಫಲಾನುಭವಿ ಕುಟುಂಬಗಳ ನಿವ್ವಳ ಕೃಷಿ ಆದಾಯದಲ್ಲಿ ಏರಿಕೆಯಾಗಿರುವುದು ಕೂಡ ಅಧ್ಯಯನದಲ್ಲಿ ಕಂಡು ಬಂದಿದೆ.
ಅಮೆರಿಕ ಮೇಲಿನ 9/11 ಭಯೋತ್ಪಾಕ ದಾಳಿಗೆ ಇಂದು 25 ವರ್ಷ; ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಿತ್ತು ಆ ಒಂದು ಘಟನೆ
ವಾರ್ಷಿಕ 6,000 ರೂಪಾಯಿಗಳ ಪಾವತಿಯು ಕೃಷಿಯ ಸಂಪೂರ್ಣ ವೆಚ್ಚವನ್ನು ಭರಿಸಲು ಸಾಕಾಗುವುದಿಲ್ಲ. ಪ್ರತಿ ಎಕರೆಗೆ ಸುಮಾರು 9,500 ರೂಪಾಯಿ ಬೇಕಾಗುತ್ತದೆ ಎಂಬುದಾಗಿ ಕೂಡ ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ.