Manish Sisodia: ಆಪ್‌ಗೆ ಮತ್ತೆ ಸಂಕಷ್ಟ; ಮನೀಷ್ ಸಿಸೋಡಿಯಾ, ಸತ್ಯೇಂದರ್ ಜೈನ್ ವಿರುದ್ಧ ತನಿಖೆಗೆ ರಾಷ್ಟ್ರಪತಿ ಅನುಮತಿ
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಔಪಚಾರಿಕ ತನಿಖೆ ಆರಂಭಿಸಲು ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದಾರೆ. ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದರ್ ಜೈನ್ ವಿರುದ್ಧ ತನಿಖೆಗೆ ಗೃಹ ಸಚಿವಾಲಯವೂ ಅನುಮೋದನೆ ನೀಡಿದೆ.

ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್

ನವದೆಹಲಿ: ದೆಹಲಿ ಸರ್ಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣದಲ್ಲಿ 1,300 ಕೋಟಿ ರೂ.ಗಳ ಹಗರಣದಲ್ಲಿ ಆಪ್ ನಾಯಕರಾದ ಮನೀಶ್ ಸಿಸೋಡಿಯಾ (Manish Sisodia) ಮತ್ತು ಸತ್ಯೇಂದರ್ ಜೈನ್ ( Satyendar Jain) ವಿರುದ್ಧ ಎಫ್‌ಐಆರ್ ದಾಖಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ( Droupadi Murmu) ಅನುಮೋದನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 2022 ರಲ್ಲಿ, ದೆಹಲಿ ಸರ್ಕಾರದ ವಿಜಿಲೆನ್ಸ್ ನಿರ್ದೇಶನಾಲಯವು ಆಪಾದಿತ ಹಗರಣದ ತನಿಖೆಗೆ ಶಿಫಾರಸು ಮಾಡಿ ಮುಖ್ಯ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಿತ್ತು. ಆಪ್ ಅಧಿಕಾರದಲ್ಲಿದ್ದಾಗ ದೆಹಲಿ ಸರ್ಕಾರಿ ಶಾಲೆಗಳ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಪ್ರಕರಣ ಇದಾಗಿದೆ.
ಜುಲೈ 2019 ರಲ್ಲಿ, ಬಿಜೆಪಿ ನಾಯಕ ಹರೀಶ್ ಖುರಾನಾ ಮತ್ತು ಈಗ ದೆಹಲಿ ಸರ್ಕಾರದಲ್ಲಿ ಸಚಿವರಾಗಿರುವ ಆಗಿನ ಆಪ್ ಬಂಡಾಯ ಶಾಸಕ ಕಪಿಲ್ ಮಿಶ್ರಾ ಅವರು ಆಪಾದಿತ ಹಗರಣದ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರು. ಕೇಂದ್ರ ಜಾಗೃತ ಆಯೋಗ (CVC), ಫೆಬ್ರವರಿ 17, 2020 ರಂದು ನೀಡಿದ ವರದಿಯಲ್ಲಿ, ದೆಹಲಿ ಸರ್ಕಾರಿ ಶಾಲೆಗಳಲ್ಲಿ ಲೋಕೋಪಯೋಗಿ ಇಲಾಖೆ (PWD) ಯಿಂದ 2,400 ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ "ಸ್ಪಷ್ಟವಾದ ಅಕ್ರಮಗಳನ್ನು" ಎತ್ತಿ ತೋರಿಸಿದೆ.
ರಾಷ್ಟ್ರಪತಿಗಳು ಎಫ್‌ಐಆರ್‌ಗಳ ನೋಂದಣಿಗೆ ಅನುಮೋದನೆ ನೀಡುತ್ತಿದ್ದಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ವಿರುದ್ಧ ಎಷ್ಟೇ ಪ್ರಕರಣಗಳನ್ನು ದಾಖಲಿಸಿದರೂ ತಾವು ಮಣಿಯುವುದಿಲ್ಲ ಎಂದು ಹಿರಿಯ ಆಪ್ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.ಶಾಲಾ ಕಟ್ಟಡಗಳು ಮತ್ತು ತರಗತಿ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನನ್ನ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ" ಎಂದು ಮನೀಶ್ ಸಿಸೋಡಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Delhi Government: ದೆಹಲಿ ಸರ್ಕಾರದಿಂದ ಮಹತ್ವದ ನಿರ್ಧಾರ ; ಲೆಫ್ಟಿನೆಂಟ್ ಗವರ್ನರ್ ವಿರುದ್ಧ ʼಆಪ್ʼ ಹಾಕಿದ್ದ ಕೇಸ್‌ಗಳು ವಾಪಸ್ !
ನಾನು ಕೇಂದ್ರ ಸರ್ಕಾರಕ್ಕೆ ಒಂದು ಮಾತನ್ನು ಹೇಳ ಬಯಸುತ್ತೇನೆ, ನೀವು ನನ್ನ, ವಿರುದ್ಧವಾಗಲಿ, ಅಥವಾ ಸತ್ಯೇಂದರ್ ಜೈನ್, ಅತಿಶಿ, ಅರವಿಂದ್ ಕೇಜ್ರಿವಾಲ್ ಅಥವಾ ಯಾವುದೇ ಇತರ ಆಪ್ ನಾಯಕರ ವಿರುದ್ಧವಾಗಲಿ ನೀವು ಎಷ್ಟು ಬೇಕಾದರೂ ಪ್ರಕರಣಗಳನ್ನು ದಾಖಲಿಸಿ, ಆದರೆ ನಾವು ಬಿಜೆಪಿಯ ಮುಂದೆ ತಲೆಬಾಗುವುದಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.