ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ನರೇಂದ್ರ ಮೋದಿ - ಸುಖ್ಬೀರ್ ಬಾದಲ್ ಭೇಟಿ: ಪಂಜಾಬ್ ಚುನಾವಣೆಗೂ ಮೊದಲು ಒಂದಾಗುವುದೇ ಬಿಜೆಪಿ- ಶಿರೋಮಣಿ ಅಕಾಲಿ ದಳ ?

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಸಿದ್ಧತೆ ಮಾಡತೊಡಗಿವೆ. ಇದರಲ್ಲಿ ಈಗ ಕುತೂಹಲಕ್ಕೆ ಕಾರಣವಾಗಿರುವುದು ಪಂಜಾಬ್ ವಿಧಾನ ಸಭಾ ಚುನಾವಣೆ. 2020ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ವರ್ಷಗಳ ಬಳಿಕ ಇದೀಗ ಎಸ್‌ಎಡಿ ಮತ್ತೆ ಬಿಜೆಪಿ ಜೊತೆ ಸೇರುವುದೇ ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಸುಖ್ಬೀರ್ ಬಾದಲ್ ಅವರು ಭೇಟಿಯಾಗಿರುವುದು.

ಸಂಗ್ರಹ ಚಿತ್ರ

ನವದೆಹಲಿ: ಪಂಜಾಬ್ ವಿಧಾನ ಸಭಾ ಚುನಾವಣೆಯೊಂದಿಗೆ (Punjab polls) 2027 ಆರಂಭವಾಗಲಿದೆ. ಇದು ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆರು ವರ್ಷಗಳ ಹಿಂದೆ ಎನ್‌ಡಿಎ (NDA) ಮೈತ್ರಿಕೂಟದಿಂದ ಹೊರನಡೆದಿದ್ದ ಶಿರೋಮಣಿ ಅಕಾಲಿ ದಳ (Shiromani Akali Dal) ಈಗ ಮತ್ತೆ ಬಿಜೆಪಿ (BJP) ಜೊತೆ ಸೇರುವುದೇ ಎನ್ನುವ ಕುತೂಹಲ ಮೂಡಿದೆ. ಯಾಕೆಂದರೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಶಿರೋಮಣಿ ಅಕಾಲಿ ದಳ (SAD) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ (Sukhbir Sing Badal) ಶುಕ್ರವಾರ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ. ಆದರೆ ಇವರ ನಡುವೆ ಏನು ಮಾತುಕತೆಯಾಗಿದೆ ಎನ್ನುವ ಕುರಿತು ಪ್ರಧಾನ ಮಂತ್ರಿ ಕಚೇರಿ ಅಥವಾ ಎಸ್‌ಎಡಿ ಯಾವುದೇ ಹೇಳಿಕೆ ನೀಡಿಲ್ಲ.

ಪಂಜಾಬ್ ವಿಧಾನ ಸಭಾ ಚುನಾವಣೆಯಲ್ಲ ಬಿಜೆಪಿ ನಾಯಕರು ಎಲ್ಲಾ 117 ಸ್ಥಾನಗಳಲ್ಲಿಯೂ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಸ್‌ಎಡಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ಭೇಟಿಯಾಗಿರುವುದು ಮತ್ತೆ ಎರಡು ಪಕ್ಷಗಳು ಒಂದಾಗುತ್ತವೆಯೋ ಎನ್ನುವ ಕುತೂಹಲ ಹೆಚ್ಚಿಸಿದೆ. ಇವರಿಬ್ಬರು ಶುಕ್ರವಾರ ಸಂಜೆ ಸುದೀರ್ಘ ಕಾಲ ಮಾತುಕತೆ ನಡೆಸಿದರು.

ಸರ್ಕಾರ ವಿದೇಶಿ ದೇಣಿಗೆಗಳನ್ನು ನಿಷೇಧಿಸುತ್ತದೆಯೇ? ಇಲ್ಲಿದೆ ನೀವು ತಿಳಿಯಲೇ ಬೇಕಾದ ಪ್ರಮುಖ ಸಂಗತಿ

ಶಿರೋಮಣಿ ಅಕಾಲಿ ದಳವು 1997ರಲ್ಲಿ ಸ್ಥಾಪನೆಯಾಗಿದ್ದು, ಬಳಿಕ ಎನ್ ಡಿಎ ಮೈತ್ರಿಕೂಟದ ಭಾಗವಾಗಿತ್ತು. ಆದರೆ 2020ರಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದೊಂದಿಗೆ 23 ವರ್ಷಗಳ ಮೈತ್ರಿಯನ್ನು ಕೊನೆಗೊಳಿಸಿತ್ತು. 2020ರ ಕೃಷಿ ಕಾನೂನುಗಳನ್ನು ಈಗ ರದ್ದುಗೊಳಿಸಲಾಗಿದೆ.

ಇದೀಗ ಮತ್ತೆ ಶಿರೋಮಣಿ ಅಕಾಲಿ ದಳವು ಎನ್ ಡಿಎ ಮೈತ್ರಿಕೂಟದ ಭಾಗವಾಗುವುದೇ ಎನ್ನುವ ಕುತೂಹಲಕ್ಕೆ ಕಾರಣ ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಸ್‌ಎಡಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ಸಂಸತ್ ಭವನದ ಸಂಕೀರ್ಣದಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಭೇಟಿಯಾಗಿರುವುದು.

ಇವರಿಬ್ಬರ ಸಭೆಯ ಬಳಿಕ ಬಾದಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪಂಜಾಬ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಪ್ರಧಾನಿಯವರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಆದರೆ ಮತ್ತೆ ಎನ್ ಡಿಎ ಸೇರುವ ವಿಷಯಕ್ಕೆ ಸಂಬಂಧಿಸಿ ಅವರು ಮಾತನಾಡಲು ನಿರಾಕರಿಸಿದರು.

ಈ ವರ್ಷದ ಕೊನೆಯಲ್ಲಿ ಪಂಜಾಬ್ ಚುನಾವಣೆಗೆ ಸಂಬಂಧಿಸಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದರಿಂದ ಚುನಾವಣೆಗೆ ಮುಂಚಿತವಾಗಿ ನಡೆಯುವ ಬಿರುಸಿನ ರಾಜಕೀಯ ಚಟುವಟಿಕೆಗಳು ನಡುವೆ ಬಾದಲ್ ಅವರು ಪ್ರಧಾನಿಯವರನ್ನು ಭೇಟಿಯಾಗಿರುವುದು ಊಹಾಪೋಹಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್, ಬಿಜೆಪಿ ಎಲ್ಲಾ 117 ವಿಧಾನಸಭಾ ಸ್ಥಾನಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಯಾವುದೇ ಹಿರಿಯ ನಾಯಕರು ಪ್ರಧಾನಿಯನ್ನು ಭೇಟಿ ಮಾಡಬಹುದು. ಸುಖ್ಬೀರ್ ಸಿಂಗ್ ಬಾದಲ್ ಅವರು ಪಂಜಾಬ್ ನ ಉಪಮುಖ್ಯಮಂತ್ರಿಯಾಗಿದ್ದರು. ಅವರು ಇಲ್ಲಿನ ಒಳಿತಿಗಾಗಿ ಮಾತನಾಡಿರಬೇಕು ಎಂದು ತಿಳಿದು ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್‌ಪಿ ಸಿಂಗ್ ಅವರು ಪ್ರತಿಕ್ರಿಯಿಸಿ ಭೇಟಿಯಾದ ಮಾತ್ರಕ್ಕೆ ನಾವು ಯಾವುದೇ ಮೈತ್ರಿ ಅಥವಾ ರಾಜಿ ಮಾಡಿಕೊಳ್ಳಲಿದ್ದೇವೆ ಎಂದು ಅರ್ಥವಲ್ಲ. ಎಲ್ಲಾ 117 ಸ್ಥಾನಗಳಲ್ಲಿ ಹೋರಾಡಿ ಗೆಲ್ಲಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದರು.

ಮೈತ್ರಿ ಮುರಿದುಬಿದ್ದಿದ್ದು ಏಕೆ?

ಎರಡು ದಶಕಗಳಿಗೂ ಹೆಚ್ಚು ಕಾಲ ಮೈತ್ರಿ ಹೊಂದಿದ್ದ ಬಿಜೆಪಿ ಮತ್ತು ಎಸ್‌ಎಡಿ 1997, 2007 ಮತ್ತು 2012ರಲ್ಲಿ ಪಂಜಾಬ್‌ನಲ್ಲಿ ಆಡಳಿತ ನಡೆಸಿತ್ತು. 2020 ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಅಕಾಲಿ ದಳವು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಸುಖ್‌ಬೀರ್ ಬಾದಲ್ ಅವರ ಪತ್ನಿ ಲೋಕಸಭಾ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆದಿದ್ದರು. ಇದರ ಬಳಿಕ ಕಾನೂನು ರದ್ದುಗೊಂಡಿತ್ತು.

ರಾಹುಲ್ ಗಾಂಧಿಯ ಫೇವರೆಟ್ ಬಿಜೆಪಿ ನಾಯಕ ಯಾರು ಗೊತ್ತಾ?

ಮೈತ್ರಿ ಕೊನೆಗೊಂಡ ಬಳಿಕ ನಡೆದ 2022ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಎಡಿ ಕೇವಲ ಮೂರು ಸ್ಥಾನ ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆಪ್ ಪಕ್ಷ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿತ್ತು. 2024ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಮತ್ತೆ ಎರಡು ಪಕ್ಷಗಳು ಮೈತ್ರಿಹೊಂದಲು ಬಯಸಿತ್ತು. ಆದರೆ ಸೀಟು ಹಂಚಿಕೆಯ ವಿಚಾರದಲ್ಲಿ ಮಾತುಕತೆಗಳು ವಿಫಲಗೊಂಡಿತ್ತು.

ವಿದ್ಯಾ ಇರ್ವತ್ತೂರು

View all posts by this author