ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಪುಣೆಯಲ್ಲಿ ಕಂದಕಕ್ಕೆ ಉರುಳಿದ ವ್ಯಾನ್‌, 10 ಮಹಿಳೆಯರ ದುರ್ಮರಣ

Pune: ಮಹಿಳೆಯರು ಮತ್ತು ಮಕ್ಕಳಿದ್ದ ಭಕ್ತಾದಿಗಳ ತಂಡವನ್ನು ಹೊತ್ತೊಯ್ಯುತ್ತಿದ್ದ ವಾಹನವು ಪುಣೆ ಜಿಲ್ಲೆಯ ಪೈಟ್ ಗ್ರಾಮದ ಬಳಿ ಕಡಿದಾದ ಇಳಿಜಾರನ್ನು ಹತ್ತಲು ವಿಫಲವಾಯಿತು. ನಂತರ ಅದು ಹಿಂದಕ್ಕೆ ಉರುಳಿ ಸುಮಾರು 25ರಿಂದ 30 ಅಡಿಗಳಷ್ಟು ಕಮರಿಗೆ ಬಿದ್ದಿತು. ಹೆಚ್ಚಿನ ಬಲಿಪಶುಗಳು ಪಾಪಲ್ವಾಡಿ ಗ್ರಾಮದವರು.

ಪುಣೆಯಲ್ಲಿ ಕಂದಕಕ್ಕೆ ಉರುಳಿದ ವ್ಯಾನ್‌, 10 ಮಹಿಳೆಯರ ದುರ್ಮರಣ

-

ಹರೀಶ್‌ ಕೇರ ಹರೀಶ್‌ ಕೇರ Aug 12, 2025 8:48 AM

ಪುಣೆ : 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕ್-ಅಪ್ ವ್ಯಾನ್ ರಸ್ತೆಯಿಂದ ಜಾರಿ ಕಂದಕಕ್ಕೆ ಉರುಳಿಬಿದ್ದ (Pune Road Accident) ಪರಿಣಾಮ ವ್ಯಾನ್‌ನಲ್ಲಿದ್ದ ಹತ್ತು ಮಹಿಳೆಯರು ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ. ಶ್ರಾವಣ ಮಾಸದ ಮೂರನೇ ಸೋಮವಾರದಂದು ಭಕ್ತರು ದರ್ಶನಕ್ಕಾಗಿ ಖೇಡ್ ತಹಸಿಲ್‌ನಲ್ಲಿರುವ ಶ್ರೀ ಕ್ಷೇತ್ರ ಮಹಾದೇವ ಕುಂದೇಶ್ವರ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು.

ಮಹಿಳೆಯರು ಮತ್ತು ಮಕ್ಕಳಿದ್ದ ಭಕ್ತಾದಿಗಳ ತಂಡವನ್ನು ಹೊತ್ತೊಯ್ಯುತ್ತಿದ್ದ ವಾಹನವು ಪುಣೆ ಜಿಲ್ಲೆಯ ಪೈಟ್ ಗ್ರಾಮದ ಬಳಿ ಕಡಿದಾದ ಇಳಿಜಾರನ್ನು ಹತ್ತಲು ವಿಫಲವಾಯಿತು. ನಂತರ ಅದು ಹಿಂದಕ್ಕೆ ಉರುಳಿ ಸುಮಾರು 25ರಿಂದ 30 ಅಡಿಗಳಷ್ಟು ಕಮರಿಗೆ ಬಿದ್ದಿತು. ಹೆಚ್ಚಿನ ಬಲಿಪಶುಗಳು ಪಾಪಲ್ವಾಡಿ ಗ್ರಾಮದವರು.

ಮೃತರನ್ನು ಮಂದಾಬಾಯಿ ದಾರೆಕರ್, ಸಂಜಾಬಾಯಿ ದಾರೆಕರ್, ಮೀರಾಬಾಯಿ ಚೋರ್ಘೆ, ಶೋಭಾ ಪಾಪಲ್, ಸುಮನ್ ಪಾಪಲ್, ಶಕುಬಾಯಿ ಚೋರ್ಘೆ, ಶಾರದಾ ಚೋರ್ಘೆ, ಬೈದಾಬಾಯಿ ದಾರೆಕರ್, ಪಾರ್ವತಿ ಪಾಪಲ್ ಮತ್ತು ಫಾಸಾಬಾಯಿ ಸಾವಂತ್ ಎಂದು ಗುರುತಿಸಲಾಗಿದೆ. ಎಲ್ಲರೂ ಪಾಪಲ್ವಾಡಿಯ ನಿವಾಸಿಗಳು.

ಪ್ರಧಾನಿ ನರೇಂದ್ರ ಮೋದಿ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಅವರು ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂ.ಗಳನ್ನು ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಇದನ್ನೂ ಓದಿ: Actor Arjun Yogi: ಸ್ಯಾಂಡಲ್‌ವುಡ್‌ ನಟ ಅರ್ಜುನ್‌ ಯೋಗಿ ಕಾರು ಅಪಘಾತ; ನಜ್ಜುಗುಜ್ಜಾದ ವಾಹನ